ಸಾನುನಾಸಿಕ ಯ್, ರ್, ಲ್, ಳ್ ಮತ್ತು ೞ್

ಸಾನುನಾಸಿಕ ಯ್, ರ್, ಲ್, ಳ್ ಮತ್ತು ೞ್

Comments

ಬರಹ

ಕನ್ನಡದಲ್ಲಿ ಯ್, ರ್, ಲ್, ಳ್, ೞ್ ಗಳು ಸಾನುನಾಸಿಕ ನಿರನುನಾಸಿಕ ಎಂದು ಎರಡು ತೆಱ. ಇದನ್ನು ನಾವು ಭೂತಕಾಲದ ಪ್ರತ್ಯಯಗಳಾದ ’ದ್’ ಅಥವಾ ’ತ್’ ಸೇರುವಾಗ ಗಮನಿಸಬಹುದು. ಉದಾಹರಣೆಗೆ ಬೇಯ್, ನೋಯ್, ಮೀಯ್, ಬರ್, ತರ್, ಕೊಲ್, ನಿಲ್, ಸಲ್, ಕೊಳ್, ಉಳ್ ಇವುಗಳೆಲ್ಲ ಸಾನುನಾಸಿಕ ಯ್, ರ್, ಲ್, ಳ್ ಗೆ ಉದಾಹರಣೆಗಳು. ಇವುಗಳ ಭೂತಕಾಲದ ರೂಪಗಳು ಕ್ರಮವಾಗಿ ಬೆಂದು, ನೊಂದು, ಮಿಂದು, ಬಂದು, ತಂದು, ಕೊಂದು, ನಿಂತು(ನಿಂದು), ಸಂದು, ಕೊಂಡು, ಉಂಟು(ಆಸನ್ನಭೂತ present perfect)ಗಳಾಗುತ್ತವೆ. ಆದರೆ ಆಯ್, ನೇಯ್, ಇರ್, ಗೆಲ್, ಮೆಲ್, ಕೇಳ್, ಕಳ್ ಇವುಗಳ ಭೂತಕಾಲದ ರೂಪಗಳು ಆಯ್ದು, ನೇಯ್ದು, ಇದ್ದು(ಇರ್ದು), ಗೆದ್ದು(ಗೆಲ್ದು), ಮೆದ್ದು(ಮೆಲ್ದು) ಕೇಳಿ(ಕೇಳ್ದು) ಹಾಗೂ ಕದ್ದು(ಕಳ್ದು) ಆಗುತ್ತವೆ. ಹಾಗೆಯೇ ಕೆಲವು ನಾಮಪದಗಳು ಎರಡು ರೂಪಗಳಲ್ಲಿವೆ ಉದಾಹರಣೆಗೆ: ನಿಂಬೆ=ಲಿಂಬೆ, ಲೆ(ಲ)ಟಿಕೆ=ನೆ(ನ)ಟಿಕೆ, ನೆತ್ತ=ಲೆತ್ತ, ಗಿಳಿ=ಗಿಣಿ, ಅಳಬೆ=ಅಣಬೆ, ಅಳಿಲು=ಅಣಿಲು, ಕೞ(ೞಿ)ಲೆ=ಕಣ(ಣಿ)ಲೆ, ಗುೞಿ=ಗುಣಿ, ಗೆೞಸು=ಗೆಣಸು ಈ ರೀತಿಯ ಎರಡು ರೂಪಗಳಿಗೆ ಕಾರಣ ಇಲ್ಲಿಯ ಲ್, ಳ್, ೞ್ ಗಳು ಸಾನುನಾಸಿಕಗಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet