ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಶಬ್ದಗಳನ್ನು ಸೇರಿಸುವುದು ಹೇಗೆ

ಮಾನ್ಯ ಮಿತ್ರರೊಬ್ಬರು ’ೞ’ ಮತ್ತು ’ಱ’ ಕಾರಗಳಿಗೆ ಸಂಬಂಧಿಸಿದಂತೆ ಕೆಲವು ಪದಗಳನ್ನು ಉಚ್ಚರಿಸಿ ಧ್ವನಿಯನ್ನು ಈ ಜಾಲದಲ್ಲಿ ಏಱಿಸಲು ಕೇಳಿಕೊಂಡಿದ್ದರು. ಅದನ್ನು ಮಾಡುವುದಾದರೂ ಹೇಗೆ?

ಸಮುದಾಯ ರೇಡಿಯೋ

ಸಮುದಾಯ ರೇಡಿಯೋ ನಮ್ಮ ಭಾರತ ದೇಶದಲ್ಲಿ ಹೊಸದು ಆದರೆ ನೇಪಾಳ್, ಶ್ರೀಲಂಕಾ, ಲ್ಯಾಟಿನ್ ಅಮೇರಿಕಾ, ಉತ್ತರ ಅಮೇರಿಕಾ, ಆಸ್ಟ್ರೇಲಿಯಾ , ಇಂಗ್ಲೆಂಡ್, ಆಪ್ರಿಕಾ, ಯುರೋಪ್ ಮುಂತಾದ ದೇಶಗಳಲ್ಲಿ ಪ್ರಚಲಿಥದಲ್ಲಿ ಇದ್ದು ತುಂಬಾ ಪ್ರಸಿದ್ದಿಯನ್ನು ಪಡೆದಿವೆ.

ಬೂದಿಕೋಟೆ

ಬೂದಿಕೋಟೆ ಗ್ರಾಮವು ಇತಿಹಾಸದಲ್ಲಿ ಪ್ರಸಿದ್ದಿಯಾದ ಗ್ರಾಮ ಇದು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನಲ್ಲಿದೆ. ನಾನು ಹುಟ್ಟಿ ಬೆಳದದ್ದು ಇಲ್ಲಿಯೇ, ಬೂದಿಕೋಟೆಯನ್ನು ಮೊದಲು ವಿಭೂತಿಪುರ ಎಂದು ಕರೆಯುತ್ತಿದ್ದರು ಕಾರಣ ಇಲ್ಲಿ ಋಷಿ ಮುನಿಗಳು ಯಾಗವನ್ನು ಮಾಡಿ ಗ್ರಾಮದ ಸುತ್ತಲೂ ಬೂದಿ ಇದ್ದದ್ದರಿಂದ.

ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!

"ತಂಬೂರಿ ಮೊದಲಾದ ಅಖಿಲ ವಾದ್ಯಗಳಿದ್ದು!
ಕೊಂಬು-ಕೊಳಲು ಧ್ವನಿಗಳಿದ್ದು;
ತುಂಬರು ನಾರದರ ಗಾನ ಕೇಳುವ ಹರಿ
ನಂಬಲಾರ ಈ ಢಂಬಕದ ಕೂಗಾಟ;
ಕೇಳನು ಹರಿ ತಾಳನು"//

"ವಾಹ್! ದಾಸರ ಏನ್ ಹಾಡ್ ಹಾಡಿದ್ರಿ! ಈ ದಾಸರ ಪದಕ್ಕ ಸಾಕ್ಷಾತ್ ಹರಿ ಪ್ರತ್ಯಕ್ಷ ಆಧಾಂಗ ಆತು. ಒಂಚೂರು ತಡೀರಿ..ಏ..ಕೃಷ್ಣಾ ನೀ ಹೇಳು, ದಾಸರು ಹಾಡಿದ ಪದದ ರಾಗ ಯಾವುದು?"

ಗಾಯನಗಂಗೆ, ಪದ್ಮವಿಭೂಷಣ ಡಾ.ಗಂಗೂಬಾಯಿ ಹಾನಗಲ್ ಕಟಗೇರಿ ದಾಸರ ಗಾಯನ ಕೇಳಿ, ಆನಂದದಿಂದ ಉದ್ಗರಿಸಿದ ವಾಕ್ಯಗಳಿವು. ಗಾಯನಗಂಗೆಯ ಅಪೇಕ್ಷೆಯ ಮೇರೆಗೆ ಅವರ ಮಗಳು ಕೃಷ್ಣಾ ಅವರಿಗೆ ದಾಸರ ಪದಗಳನ್ನು ಕಲಿಸಲು ಹೋದಾಗ ಕಟಗೇರಿ ದಾಸರಿಗೆ ಒದಗಿಬಂದ ಸಂದರ್ಭ ಇದು.

ಕಾದಿರುವೆ ನಿನಗಾಗಿ

waiting girl 

 

ಮರಳಿ ಬಾ ನನ್ನೆಡೆಗೆ, ಕಾದಿರುವೆ ನಿನಗಾಗಿ,

ಮನದ ಮುತ್ತಿನ ಹಾರ ತೊಡಿಸಲೆಂದು.

 

ಮನೆಯ ಮುಂದಿನ ತೋಟ,

ಬಾಗಿಲು, ನೆಲಹಾಸು,

ನನ್ನ ಮನೆಯ ಪಡಸಾಲೆ,

ಎಲ್ಲ ಕಾಯುತಿವೆ, ನೀ ಬರುವೆಯೆಂದು.

ಬೂದಿಕೋಟೆ

ಬೂದಿಕೋಟೆ ಗ್ರಾಮವು ಇತಿಹಾಸದಲ್ಲಿ ಪ್ರಸಿದ್ದಿಯಾದ ಗ್ರಾಮ ಇದು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನಲ್ಲಿದೆ. ನಾನು ಹುಟ್ಟಿ ಬೆಳದದ್ದು ಇಲ್ಲಿಯೇ, ಬೂದಿಕೋಟೆಯನ್ನು ಮೊದಲು ವಿಭೂತಿಪುರ ಎಂದು ಕರೆಯುತ್ತಿದ್ದರು ಕಾರಣ ಇಲ್ಲಿ ಋಷಿ ಮುನಿಗಳು ಯಾಗವನ್ನು ಮಾಡಿ ಗ್ರಾಮದ ಸುತ್ತಲೂ ಬೂದಿ ಇದ್ದದ್ದರಿಂದ.

ಅಬ್ಬ, ರಾಷ್ತ್ರಕ್ಕೇ ಅವಮಾನ!

ಬೆಳಿಗ್ಗೆ ಕಚೇರಿಗೆ ಬಂದು, ಐಬಿಎನ್ ವೆಬ್ ಸೈಟ್ ತೆಗೆದು, ಅದರಲ್ಲಿ ಲೇಖನ ಓದಿ ಕಣ್ಣು ತುಂಬಿ ಬಂತು,  ನಮ್ಮ ಪ್ರಧಾನಿ ಹೆಳಿದ್ದಾರಂತೆ, ಒರಿಸ್ಸಾ ಘಟನೆ ರಾಷ್ತ್ರಕ್ಕೆ ಅವಮಾನ ಅಂತ, ಎಂತ ಪ್ರಧಾನಿ,,  ಅವರ ಈ ಹೇಳಿಕೆಗೆ ನನಗೆ ಕಣ್ಣೀರು ಬಂದಿಲ್ಲ,  ಕಣ್ಣೀರಿಗೆ ಕಾರಣ ಇವು,

ಪೆಱೆ/ಹೆಱೆ

ಪೆಱೆ/ಹೆಱೆ=ಚಂದ್ರ

ಕಱಿವೆಱೆ=ಕಪ್ಪು ಚಂದ್ರ, ಅಮಾವಾಸ್ಯೆಯ ಚಂದ್ರ
ಎಳವೆಱೆ=ಎಳೆಯ ಚಂದ್ರ, ಅಮಾವಾಸ್ಯೆಯಾಗಿ ತದಿಗೆಯವರೆಗಿನ ಬಾಲಚಂದ್ರ ನೋಡಿನ ತಮಿೞಿನ ’ಮೂನ್ಱಾಂ ಪಿಱೈ’

ಅರೆವೆಱೆ=ಅರ್ಧಚಂದ್ರ, ಸತ್ತವೆ/ಅಟ್ಟವೆಯ ಚಂದ್ರ (ಸಪ್ತಮಿ/ಅಷ್ಟಮಿಯ ಚಂದ್ರ)

ತೊರಡು/ತರಡು, ತೊಱಡು

ತರಡು/ತೊರಡು (ನಾಮಪದ)= ಆಡುಭಾಷೆಯಲ್ಲಿ ತಡ್ಡು, ತೊಡ್ಡು, ಸಸ್ತನಿಗಳಲ್ಲಿ ಗಂಡಿನ ವೀರ್ಯವನ್ನು ಹಿಡಿದಿಡುವ ಚೀಲ, ವೃಷಣ

ತೊಱಡು=ದೋಟಿ, ತುದಿಯಲ್ಲಿ ಕೊಕ್ಕೆಯಿರುವ ಮರದಿಂದ ಹಣ್ಣು, ಎಲೆ ಉದುರಿಸಲು ಬೞಸುವ ಉದ್ದನೆಯ ಕೋಲು