ಅಬ್ಬ, ರಾಷ್ತ್ರಕ್ಕೇ ಅವಮಾನ!

ಅಬ್ಬ, ರಾಷ್ತ್ರಕ್ಕೇ ಅವಮಾನ!

ಬರಹ

ಬೆಳಿಗ್ಗೆ ಕಚೇರಿಗೆ ಬಂದು, ಐಬಿಎನ್ ವೆಬ್ ಸೈಟ್ ತೆಗೆದು, ಅದರಲ್ಲಿ ಲೇಖನ ಓದಿ ಕಣ್ಣು ತುಂಬಿ ಬಂತು,  ನಮ್ಮ ಪ್ರಧಾನಿ ಹೆಳಿದ್ದಾರಂತೆ, ಒರಿಸ್ಸಾ ಘಟನೆ ರಾಷ್ತ್ರಕ್ಕೆ ಅವಮಾನ ಅಂತ, ಎಂತ ಪ್ರಧಾನಿ,,  ಅವರ ಈ ಹೇಳಿಕೆಗೆ ನನಗೆ ಕಣ್ಣೀರು ಬಂದಿಲ್ಲ,  ಕಣ್ಣೀರಿಗೆ ಕಾರಣ ಇವು,

೧) ಆಗಸ್ಟ್ ೧೫ರಂದು ಕಾಶ್ಮೀರದಲ್ಲಿ ರಾಷ್ತ್ರಧ್ವಜ ಹರಿದು ಸುಟ್ಟು, ನೆರೆ ರಾಷ್ಟ್ರದ ಧ್ವಜ ಹಾರಿಸಿದರಂತೆ, ಅದನ್ನ ನೋಡಿ, ಕೇಳಿ, ಏನು ಮಾತಾಡದೆ ಮೌನಕ್ಕೆ ಶರಣು ಹೊಡೆದಿದ್ದ್ರಲ್ಲ ಈ ಪಿ.ಏಂ.

೨) ವೋಟಿಗಾಗಿ ಹಣ ಹಗರಣವನ್ನ ಜಗತ್ತೆಲ್ಲಾ ನೋಡಿತು, ಆದ್ರೆ ಅವತ್ತು ಇವರು ಹೂ ಗುಚ್ಚ ಇಸ್ಕೊಂಡು ನಗುತ್ತ ಫೋಟೊ ತೆಗೆಸ್ಕೊತಾ ಇದ್ದ್ರು ಈ ಪಿ ಎಂ.

೩) ಉಗ್ರರು ಅಟ್ಟಹಾಸ ಮೆರೆಯುತ್ತ ನಮ್ಮ ಯೋಧರನ್ನ ಕೊಲ್ಲುತ್ತಾ ಇದ್ದರೆ, ಅದರ ಬಗ್ಗೆ ಏನೂ ಮಾತಾಡದೆ, ಉಗ್ರವಾದಕ್ಕೆ ಕುಮ್ಮಕ್ಕು ಕೊಡುತ್ತಿರುವ ರಾಷ್ಟ್ರಗಳಿಗೆ ಒಂದು ಎಚ್ಚರಿಕೆಯ ಮಾತಾಡದೆ ತೆಪ್ಪಗೆ ಇದ್ದರಲ್ಲ ಈ ಪಿ.ಎಂ.

೪) ಉಗ್ರರ ಅಟ್ಟಹಾಸ ಅಡಗಿಸಿ, ಕಾರ್ಗಿಲ್ ಯುದ್ದ ಗೆದ್ದ ದಿನ "ವಿಜಯ ದಿವಸ" ಆಚರಣೆ ಬೇಡ ಅಂತ ನಿರ್ಧರಿಸಿದ ಸಂಪುಟಕ್ಕೆ ಮುಖ್ಯಸ್ಥ ಈ ಪಿ.ಎಂ.

೫) ದೇಶ ಸೇವೆಗೆ ಪ್ರಾಣ ಕೊಡುತ್ತಿರುವ ಸೈನಿಕರು ಸತ್ತಾಗ ಮಾತಾಡದೆ, ಬೇರೆ ದೇಶದಲ್ಲಿ ಭಯೋತ್ಪಾದನೆ ಆರೋಪ ಹೊತ್ತ ವ್ಯಕ್ತಿಯ ಬಗ್ಗೆ ಅನುಕಂಪದ ಮಾತಾಡಿ ನಿದ್ದೆ ಕೆಡಿಸ್ಕೊಂಡರಲ್ಲ ಈ ಪಿ.ಎಂ.

೬) ಹಣದ್ದುಬ್ಬರ ~೧೩ ಮುಟ್ಟುತ್ತಿದ್ದರು, ಅದನ್ನು ದಮನ ಮಾಡುವ ಬಗ್ಗೆ ಚಿಂತಿಸದೆ, ನೆಮ್ಮದಿಯಿಂದ ವಿದೇಶ ಪ್ರವಾಸಗಳನ್ನ ಮಾಡುತ್ತ, ನಿದ್ದೆ ಮಾಡುತ್ತ ಇದ್ದಾರಲ್ಲ ಈ ಪಿ.ಎಂ.

ಇನ್ನೂ ಕಣ್ಣಿರು ಹಾಕಿದ್ದ್ರೆ ಅಕ್ಕ ಪಕ್ಕ ಇದ್ದ ಸಹೋದ್ಯೋಗಿಗಳೂ ಶುರು ಮಾಡ್ತಾರೆ ಅಂತ ಗಣಕನೆ ಮುಚ್ಚಿ ಕಾಪಿ ಕುಡಿಯುವ ಮನಸ್ಸು ಇಲ್ಲದಿದ್ದರೂ ಕುಡಿಯಕ್ಕೆ ಹೊರಟೆ.