ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅಭ್ಯಾಸಬಲ

ಇವತ್ತು ಗೋಡೆಗೆ ತಗಲುಹಾಕಿದ್ದ ಗಡಿಯಾರ ಒಡೆದು ಹೋಯ್ತು. ಒಡೆದ ಗಾಜನ್ನು ನಾನೇ ಸ್ವತಃ ಸಾಕಷ್ಟು ಸಮಯ ವ್ಯಯ ಮಾಡಿ ತೆಗೆದು ಕಸದ ಬುಟ್ಟಿಗೆ ಹಾಕಿದ್ದೆನಷ್ಟೆ.
ಆದರೂ ಘಂಟೆಗಳ ನಂತರವೂ ಸಮಯ ಎಷ್ಟಾಯ್ತು ಅನ್ಕೊಳ್ಳೋ ಅಷ್ಟೊತ್ತಿಗೆ ಕಣ್ಣು ಗಡಿಯಾರ ತಗಲುಹಾಕಿದ್ದ ಜಾಗದೆಡೆ ಹೋಗತ್ತೆ.

ನಿಮಗೂ ಹೀಗಾಗಿದ್ದಿದೆಯೆ?

ಆಧುನಿಕ ಮೌಲ್ಯಗಳು - ಪರಿವರ್ತನೆ

ಇಡೀ ಪ್ರಪಂಚದಲ್ಲಿ ಪ್ರಾಕೃತಿಕ ಮತ್ತು ವೈಜ್ಞಾನಿಕ ಪರಿವರ್ತನೆ ಕಾಣುತ್ತಿರುತ್ತದೆ.  ನಾವು ಸೇರಿ ಸಮಸ್ತ ವಸ್ತುಗಳೂ ಪೃಥ್ವಿಯಲ್ಲಿ ಚಲನೆಗೊಳಪಟ್ಟಿದ್ದೇವೆ.  ಆ ಚಲನೆಯಲ್ಲಿ ಅವುಗಳ ಸ್ವರೂಪ ಬದಲಾಗುತ್ತಿರುತ್ತದೆ. ಅಚಲವಾದುದು ಜಗತ್ತಿನಲ್ಲಿ ಯಾವುದೂ ಇಲ್ಲ!
ನಿರಂತರ ನಡೆಯುತ್ತಿರುವ ಈ ಚಲನೆಯಲ್ಲಿಯೆ ಪರಿವರ್ತನೆ ಇರುತ್ತದೆ.  ಅದು ಮಾನವ ನಿರ್ಮಿತ ವೆನಿಸಬಹುದು. ಪ್ರಕೃತಿಯ ಕೊಡುಗೆ ಯಾಗ ಬಹುದು. ಅಂತ ಪರಿವರ್ತನೆ ಆಗುವುದು ಆಗ ಬೇಕಾಗುವುದು ನಮ್ಮ ಅಸ್ತಿತ್ವ ಉಳಿಸಿಕೊಳ್ಳ ಲಿಕ್ಕಾಗಿ.  ನಮ್ಮ ಬದುಕಿನ ಮಹತ್ವ ಇರಲಿಕ್ಕಾಗಿ.

ತಲೆಗೊಂದು ಮೆಮೋರಿ ಕಟ್ಕೊಂಡ್ರೆ...

ಲೈಫಂದ್ರೇ ಹಿಂಗ... ಏನೋ ಬರೆಯೋಕ್ ಐಡಿಯ ಹಾಕಿರ್ತೀವಿ, ಅದು ತಲೆಯೊಳಗ್ ಇರತ್ತೆ ಅನ್ಕೊಂಡಿರ್ತೀವಿ - ಕೊನೆಗ್ ನೋಡಿದ್ರೆ ಅದು ಒಂದ್ ಚೂರು ಜಾಡೂ ಬಿಡ್ದೆ ಮಾಯ ಆಗಿರತ್ತೆ.

ಒಂದು ಬಹಳ ಒಳ್ಳೆಯ ಲೇಖನ ಬರೆದ ನೆನಪು, ಆದರೆ ಅದೆಲ್ಲೂ ಕಾಣದು. ಬಹುಶಃ ನೆನಪಿನಲ್ಲಿ ಬರೆದದ್ದು, ಕನಸಿನಲ್ಲಿ ಬರೆದದ್ದು. ನೊಬೆಲ್ ಪ್ರೈಸ್ ಬರುವಂತಹ ಆರ್ಟಿಕಲ್ ಅದು! ಹಾಳಾದ್ದು ನೆನಪಿಗೆ ಬರುತ್ತಿಲ್ವೆ.

ಬರೆಯೋಕೆ ಐಡಿಯಗಳು ಬರೋದೇ ಕಷ್ಟ - ಹಾಳಾದ್ದವು ಮಲ್ಕೊಳ್ಳೋಕ್ ಹೊರಟಾಗ್ಲೇ ಬರುತ್ವೆ. ಬೆಳಗಾಗೋ ಅಷ್ಟ್ರಲ್ಲಿ ಮಾಯ ಆಗಿರುತ್ವೆ.

ಎಷ್ಟೆಲ್ಲಾ information overloadಉ, ಎಷ್ಟೆಲ್ಲಾ ಇ-ಮೇಯ್ಲು - ೧ ವರ್ಷ ೧೦ ವರ್ಷಗಳಂತೆ ತಲೇಲಿದ್ರೆ ಕಳೆದದ್ದು ಒಂದೇ ತಿಂಗಳಿನಂತಿರುತ್ತೆ. ಒಂದೆಲಗ ತಿನ್ನು - ತಲೇಲಿ ಎಲ್ಲಾ ಉಳಿಯುತ್ತೆ ಅಂದಾರು ಹಿರಿಯರು. ಒಂದೆಲಗ ತಿಂದದ್ದು ಒಂದೇ ಎರಡೇ - ತಲೇಲಿ ಉಳಿಯೋದು ಮಾತ್ರ ಮುಂಚಿನ ಹಾಗೇ.

ಸರಿ, ತಲೇಗ್ ಒಂದ್ ಮೆಮೋರಿ ಕಟ್ಕೊಂಡ್ ಬಿಟ್ರೆ? ([:http://en.wikipedia.org/wiki/DDR_SDRAM|1GB DDR] ಸಾಕು ನಮ್ ಭಾರತದ್ ಲೆವೆಲ್ಲಿಗೆ)
ಮೆಮೋರಿ ಹೆಚ್ಚಾಗಬಹುದು - ಸತ್ಯಜಿತ್ ರೈಗಳ ಸೈನ್ಸ್ ಫಿಕ್ಷನ್ ನಂಬ್ಕೊಂಡ್ರೆ. ಅದು ನಿಜವಾಗಲೂ ಕೆಲಸವೂ ಮಾಡಬಹುದು - star wars ನಿಜವಾದ್ರೆ. ಆದರೆ ಅದೂ ನೆಮ್ಮದಿ ಕೊಟ್ಟೀತೇ? ಹಾಳಾದ್ದು ಅದನ್ನೋಡಿಸೋದಕ್ಕೊಂದು ಆಪರೇಟಿಂಗ್ ಸಿಸ್ಟಮ್ ಬೇಕು, ಅದರಲ್ಲೊಂದು ಮೈಕ್ರೊಸಾಫ್ಟ್ ಬರತ್ತೆ - ಅಲ್ಲೊಂದು ಹೋರಾಟ ಮಾಡಬೇಕಾಗತ್ತೆ - ನಮ್ಮ ಸ್ವಾತಂತ್ರ್ಯ, ನಮ್ಮ ಪ್ರೈವೆಸಿ ಕಾಪಾಡಿಕೊಂಡು ಹೋಗಲು. ಈ ಹೋರಾಟಗಳ ಮಧ್ಯೆ ಯಾರೋ ನಿಮ್ಮ ಮೆಮೋರಿ ಹ್ಯಾಕ್ ಮಾಡಿಬಿಟ್ರೆ?

ಕಲ್ಲು-ಕೋಟೆಗಳ ನಡುವಲ್ಲೊಂದು ಕಣಿವೆ

ನಾನು ಇತ್ತೀಚೆಗೆ ಚಿತ್ರದುರ್ಗಕ್ಕೆ ಭೇಟಿ ಕೊಟ್ಟಾಗ ಅಲ್ಲಿನ ಕಲ್ಲು - ಕೋಟೆಗಳನ್ನು ಕಣ್ಣಾರೆ ಕಂಡು ಅಚ್ಚರಿಪಟ್ಟೆ. 'ನಾಗರಹಾವು' ಚಿತ್ರದ ದೃಶ್ಯಗಳು ಕಣ್ಣ ಮುಂದೆ ಹಾದು ಹೋದವು.ಆದರೆ ಅಲ್ಲೊಂದು( ಚಿತ್ರದುರ್ಗ ಜಿಲ್ಲೆಯಲ್ಲಿ) ಒಂದು ಸುಂದರ ಕಣಿವೆ ಇದೆ ಎಂದು ನಿರೀಕ್ಷಿಸಿರಲಿಲ್ಲ. ಅದೇ ಮಾರಿಕಣಿವೆ.
ಅದರ ರಮಣೀಯತೆ ಕಂಡವರಿಗೆ ಗೊತ್ತು... ಬಯಲು ನಾಡಿನಲ್ಲೊಂದು ಅದ್ಭುತ ಬೆಟ್ಟ ಗುಡ್ಡಗಳ ಶ್ರೇಣಿ. ನಡುವೆ ಹರಿಯುತಿಹಳು ವೇದವತಿ. ಅದಕ್ಕೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟೆ 'ವಾಣಿವಿಲಾಸ ಸಾಗರ'. ಇದನ್ನು ಸುಮಾರು ೧೮೯೬ರಲ್ಲಿ ಆಗಿನ ಮೈಸೂರು ಮಹಾರಾಣಿಯವರು ಕಟ್ಟಿಸಿದರು ಎಂದು ಓದಿದ ನೆನಪು. ಇದು ಚಿತ್ರದುರ್ಗದಿಂದ ಸುಮಾರು ೪೦ ಕಿ.ಮೀ ಇರಬಹುದು. ಇಲ್ಲಿರುವ ಹಿನ್ನೀರಿನ( ಜಲಾಶಯದ ಹಿಂಭಾಗದ ನೀರು) ವಿಸ್ತಾರವನ್ನು ನಾನು ಇನ್ನೆಲ್ಲು ಕಂಡಿಲ್ಲ.

ಬೆಟ್ಟ-ಗುಡ್ಡಗಳ ಮೇಲೆ ಗಾಳಿಯಿಂದ ವಿದ್ಯುತ್ ಉತ್ಪಾದನೆ ಮಾಡುವ ಕಂಬಗಳು ಅಲ್ಲಿನ ಸೌಂದರ್ಯವನ್ನು ಹೆಚ್ಚಿಸಿವೆಯೇನು ಅಂತನ್ನಿಸಿತು. ಇದನ್ನು ನೋಡಿದ ಮೇಲೆ ನಾವು ಪ್ರಕೃತಿಯೊಂದಿಗೆ ಹೊಂದಿಕೊಂಡು( ಅದನ್ನು ಹಾಳು ಮಾಡದೆ) ನಮಗೆ ಬೇಕಾದದ್ದನ್ನು ಪಡೆದುಕೊಳ್ಳಬಹುದು ಅಂತ ಅನ್ನಿಸಿತು. ಪ್ರಕೃತಿ ಎಷ್ಟು ದಯಾಮಯಿ ನೋಡಿ.. ಬಯಲುಸೀಮೆಗೆಲ್ಲ ಇದೇ ಜೀವ ಜಲ.

ಚಿತ್ರಗಳನ್ನು ಇಲ್ಲಿ ನೋಡಿ

- ಜೈ ಕರ್ನಾಟಕ

ಮಹಾತ್ಮ ಗಾಂಧಿ

(ಹೊಸತೊಂದನ್ನು ಮಾಡಲು ಹೊರಟಾಗ) ಜನರು ಮೊದಲು ನಿಮ್ಮನ್ನು ಕಡೆಗಣಿಸುತ್ತಾರೆ. ನಂತರ ಅವಹೇಳನ ಮಾಡಿ ನಗುತ್ತಾರೆ. ತದನಂತರ ನಿಮ್ಮೊಡನೆ ಜಗಳಕ್ಕೂ ಸಿದ್ಧರಾಗುತ್ತಾರೆ. ಆದರೆ ಕೊನೆಯಲ್ಲಿ ನೀವು ಗೆಲ್ಲುತ್ತೀರಿ.

ಮಹಾತ್ಮ ಗಾಂಧಿ

ಶ್ರದ್ಧೆ ಎನ್ನುವುದನ್ನು ವಿಚಾರದಿಂದ ಬಲಪಡಿಸಬೇಕು. ಇಲ್ಲವಾದಲ್ಲಿ ಅದು ಅಂಧಶ್ರದ್ಧೆಯಾಗುತ್ತದೆ. ಅಂಧಶ್ರದ್ಧೆ ಹೆಚ್ಚು ಕಾಲ ಬದುಕಲಾರದು.

ಮಹಾತ್ಮ ಗಾಂಧಿ

ರಕ್ತವಿಲ್ಲದೆ ದೇಹವು ಹೇಗೆ ಬದುಕಲು ಸಾಧ್ಯವಿಲ್ಲವೋ, ಹಾಗೆಯೇ ಶ್ರದ್ಧೆ ಮತ್ತು ಪ್ರಾರ್ಥನೆಗಳಿಲ್ಲದೆ ಆತ್ಮವೂ ಕೂಡ ಬದುಕಲು ಸಾಧ್ಯವಿಲ್ಲ.