ಬಾಳ ದಾರಿಯ ಹೂವು

ಬಾಳ ದಾರಿಯ ಹೂವು

ಬರಹ

ಬಾಳ ದಾರಿಯಲಿ ಪಕ್ಕನೆ ಎದುರಾಯ್ತು ಒಂದು ಸುಂದರ ಹೂವು
ಮಿಂಚಂತೆ ಬಳಿ ಬಂದು ನಕ್ಕು ಮರೆಸಿತು ನನ್ನೆಲ್ಲ ಹಳೆಯ ನೋವು

ಮರುಳಾದೆ ಗಾಳಿಯಲ್ಲಿ ತೇಲಿ ಬಂದ ಆ ಹೂವ ಮಧುರ ಕಂಪಿಗೆ
ನಾಚಿ ಬಳುಕಿತದು ಸಂಜೆ ಸೂರ್ಯನೆದಿರು ಮಾಡಿ ಮೈಯ ಕೆಂಪಗೆ

ಗಾಳಿಯ ಹಾಡಿಗೆ ತಲೆದೂಗಿ ನನ್ನೆದೆಗೆ ಸೋಕಿದಾಗ ಅರಿಯದ ಹೊಸ ಕಂಪನ
ಗಮ್ಮೆನಿಸುವ ಹೂವ ಪರಿಮಳ ಸೋಕಿ ತುಂಬಿ ಬಂತು ನನ್ನ ಮೈಮನ

ಹೂವ ಮುಡಿಯೇರಿಸುವ ಮನದಾಳದಾಸೆಯ ಅದುಮಿಟ್ಟೆ
ಸ್ವಚಂದವಾಗಿ ಹಾಡಿ ನಲಿವ ಹೂವ ನೋಡೇ ಖುಶಿಪಟ್ಟೆ

ಕಾಯುತಲಿದ್ದೆ ಹಗಲಿರುಳು ಉರಿ ಬಿಸಿಲಲಿ ನೆರಳಾಗಿ
ಮಧು ಹೀರುವ ದುಂಬಿಗಳಿಗೆ ಪ್ರೀತಿಯ ಮುಳ್ಳ ಬೇಲಿಯಾಗಿ

ಕಣ್ಣ ರೆಪ್ಪೆ ಮುಚ್ಚಿ ತೆರೆವಷ್ಟರಲ್ಲಿ ಬಂದಳಾಕೆ ನನ್ನ ಹೂವ ಬಳಿ ಸಾರಿ
ಕಿಸಕ್ಕನೆ ನಕ್ಕಿತು ಆ ಹೂವು ನನ್ನ ನೊಡಿ, ಹೊಸ ಜೀವದ ಮುಡಿಯೇರಿ