ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹೀಗೆ ಬರೆಯುತ್ತಿರು...

ನೀ ಹೀಗೆ ಬರೆಯುತ್ತಿರು
ನೀ ಹೀಗೆ ಹೆಣೆಯುತ್ತಿರು
ಮುದ್ದಾದ ಪದಗಳ ಕವನಮಾಲೆ.

ಕೈ ಹಿಡಿದು ಮುನ್ನಡೆವಳು...
ಹರಸಿ ನಿನ್ನ ಪೊರೆವಳು..
ಕನ್ನಡದ ಕುಲದೇವಿ ಆ ಶಾರದೆ..

---------------------------------------------
ಇದು ನನ್ನ ಗೆಳೆಯ ಪ್ರಶಾಂತನ ಕವನಕ್ಕೆ ಹಾರೈಸಿ ಬರೆದ ಕವನ

ಚಿಂತೆ

ಚಿಂತೆಯ ಸಂತ್ಯಾಗ, ಸಿಗತಾರ ಎಲ್ಲಾರು,
ಅಲ್ಲಿಲ್ಲ ಬಡವ, ಶ್ರೀಪತಿ,
ಮೇಲು, ಕೀಳೆಂಬ
ಭೂತ ಪ್ರೇತದ ಭಾವನೆಗಳು.

ಇರುವುದು ಅದು ಬಹುದೂರ
ಇವುಗಳ ಒಡೆತನದಿಂದ
ಅದಕ್ಕಿಲ್ಲ ಗಡಿಗಳು
ಅಲ್ಲಿಲ್ಲ ಯಾವುದೇ ಧರ್ಮದ ಗುಡಿಗಳು
ಭಾರತ, ಲಂಕೆ, ಅಮೆರಿಕೆಗಿರುವಂತೆ
ಅದಕ್ಕಿಲ್ಲ ಮೋಹಕ ಕಡಲ ತೀರಗಳು
ಸೌರಮಂಡಲಕೆ ಸೂರ್ಯನಿರುವಂತೆ
ಬೆಳಕ ನೀಡಲು
ಅಲ್ಲಿಲ್ಲ ಯಾವುದೇ ತಾರೆಗಳು

ಮುಳಿಯ ತಿಮ್ಮಪ್ಪಯ್ಯನವರ ನೆಗೞ್ಚುಗಳು

ಮಂಗಳೂರಿನ ಸಂತ ಅಲೋಸಿಯಸ್ ಕಾಲೇಜಿನಲ್ಲಿ ಗುರುಗಳಾಗಿದ್ದ ಮುಳಿಯ ತಿಮ್ಮಪ್ಪಯ್ಯನವರು ಹಲವು ಹೊತ್ತಿಗೆಗಳನ್ನು ಬರೆದಿದ್ದಾರೆ. ಅವು ಇಲ್ಲಿ ಸಿಗುತ್ತವೆ. ಇವರೂ ಅಂಡಯ್ಯನಂತೆ ಅಚ್ಚಗನ್ನಡದಲ್ಲಿ 'ಸೊಬಗಿನ ಬಳ್ಳಿ' ಎಂಬ ಕಬ್ಬವನ್ನು ಬರೆದಿದ್ದಾರೆ. ಆದ್ರೆ ಅದರ ಕೊಂಡಿ ಸಿಗ್ತಾ ಇಲ್ಲ. ಸಿಕ್ಕರೆ ತಿಳಿಸಿ

ಬಾವಿಯೊಳಗಿದ್ದವನ

ಬಾವಿಯೊಳಗಿದ್ದವನ
ಹೊರಗೆಳೆದು ಹಾಕಿ
ಅವನ ಜಗದಡ್ಡಾರವನು
ದೊಡ್ಡದಾಗಿ ಮಾಡಿದಿರಿ

ಹಾರಲಾಗದಿದ್ದವಗೆ, ಗಟ್ಟಿ
ರೆಕ್ಕೆ-ಪುಕ್ಕವ ಕಟ್ಟಿ
ಹಾರುವ ಆಸೆಬರಿಸಿ, ಬಾನ
ತೋರಿ, ಬೆನ್ನ ತಟ್ಟಿದಿರಿ

ಎಲ್ಲೋ, ಎಲೆಯಮರೆಯಲ್ಲಿ
ಕಾಯಾಗಿ ಕೂತವನ
ಬೆಳಕಿಗೆ ತಂದಿಟ್ಟು
ಹಣ್ಣಾಗುಂತೆ ಮಾಡಿದಿರಿ

ತಿಪ್ಪೆ ಮೇಲಿದ್ದವಗೆ
ಉಪ್ಪರಿಗೆಯ ದಾರಿ ತೋರಿದಿರಿ
ನೆಲದ ಮೇಲಿನ ಚುಕ್ಕಿ

ಹಿಂಗಾದ್ರೆ ಹೆಂಗೆ....

ಗೆಳೆಯ/ಗೆಳತಿಯರಿಗೊಂದು ನಮಸ್ಕಾರ,

ಬೇಲಿನೆ ಎದ್ದು ಹೊಲಾ ಮೇಯುವಂತ ನಿದರ್ಶನಕ್ಕೆ ಇನ್ನೊಂದು ಉದಾಹರಣೆ ಈ ಕೆಳಗಿನ ಕೊಂಡಿಯನ್ನು ನೋಡಿದರೆ ಸಿಗುತ್ತೆ.

http://www.hindujagruti.org/news/article/christians/conversions/75000-schools-to-be-distributed-copies-of-jesus-s-biography.html

ಹಿಂಗಾದ್ರೆ ಹೆಂಗೆ....

ಗೆಳೆಯ/ಗೆಳತಿಯರಿಗೊಂದು ನಮಸ್ಕಾರ,

ಬೇಲಿನೆ ಎದ್ದು ಹೊಲಾ ಮೇಯುವಂತ ನಿದರ್ಶನಕ್ಕೆ ಇನ್ನೊಂದು ಉದಾಹರಣೆ ಈ ಕೆಳಗಿನ ಕೊಂಡಿಯನ್ನು ನೋಡಿದರೆ ಸಿಗುತ್ತೆ.

http://www.hindujagruti.org/news/article/christians/conversions/75000-schools-to-be-distributed-copies-of-jesus-s-biography.html