ಡಾ.ರಾಜ್ | ಆಟೋ ರಾಜ | ಉಪ್ಪಿ ದಾದ | ಕನಸುಗಾರ| ಕನ್ನಡ ಚಿತ್ರರಂಗ "ಅಂದು - ಇಂದು"
ಗೆಳೆಯ, ಗೆಳತಿಯರೆ ......
ಕನ್ನಡ ಚಿತ್ರರಂಗ ಅಂದ ಕೂಡಲೆ ತಟ್ಟನೆ ನೆನಪಾಗುವ ನಾಮಗಳು ಡಾ.ರಾಜ್ , ಶಂಕರ ನಾಗ್, ಪುಟ್ಟಣ್ಣ ಕಣಗಲ್, ರವಿಚಂದ್ರನ್, ಉಪೇಂದ್ರ ........ ಈಗೆ ದೊಡ್ಡ ಪಟ್ಟಿ ಬೆಳೆಯುತ್ತ ಹೊಗುತ್ತದೆ. ೧೯೯೫ ರ ನಂತರ ಕನ್ನಡ ಚಿತ್ರರಂಗದ ಯಶಸ್ಸು, ಆರ್ಭಟ ಕಡಿಮೆಯಾಗುತ್ತ ಸಾಗಿತು, ಇದಕ್ಕೆ ಏನು ಕಾರಣ ಅಂತ ಯೋಚಿಸಿದರೆ ಅಥವ ಚರ್ಚಿಸಿದರೆ ಈ ಕಳಗಿನ ವಿಷಯಗಳು ತಟ್ಟನೆ ಹೊಳೆಯುತ್ತವೆ, ನೀವೂ ಒಮ್ಮೆ ಯೋಚಿಸಿ .... ನೆನಪಿಸಿಕೊಳ್ಳಿ .... ನಿಮಗೂ ಈಗೇ ಅನಿಸಿರಬಹುದು ....... ಕೆಳಗೆ ನೋಡಿ ಗೆಳೆಯ - ಗೆಳತಿಯರೆ ....
ಮೊದಲನೆಯದಾಗಿ .....
ಶಂಕರ್ ನಾಗ್ ರವರ ಅಕಾಲಿಕ ಮರಣ
ಎರಡನೆಯದಾಗಿ .....
ರಾಜ್ ಕುಟುಂಬದ ದ ಅಟ್ಟಹಾಸ
ಮೂರನೆಯದಾಗಿ .....
ಉಪೇಂದ್ರ ನಿರ್ದೇಶನ ಬಿಟ್ಟು ನಟನೆಗೆ ಬಂದದ್ದು
ಆಮೇಲೆ .....
ರವಿಚಂದ್ರನ್ ಮತ್ತು ಹಂಸಲೇಖ ವಿರಸ/ಬೇರ್ಪಟ್ಟಿದ್ದು
- ಈಗೆ ನಾನಾ ತರಹದ ಕಾರಣಗಳು ನೆನಪಿಗೆ ಬರುತ್ತವೆ ಅಲ್ಲವೆ? ಆದರೆ ನನ್ನ ಪ್ರಕಾರ ಕನ್ನಡ ಚಿತ್ರರಂಗ ಸೋಲಲು ಅಥವ ಕುಗ್ಗಲು ಇದ್ಯಾವುದು ಕಾರಣವಲ್ಲ ...... ಯಾಕಪ್ಪ ಗಿರೀಶ ಅಂತೀರ? .... ಕೇಳಿ ಯಾಕೆ ಅಂತ ಹೇಳ್ತೀನಿ ......
ಮೊದಲನೆಯದಾಗಿ .....
ಹೊಸ ಮುಖಗಳ ಕೊರತೆ - ಜನ ಎಷ್ಟು ದಿನ ಅಂತ ಹಳೆ ಮುಖಗಳನ್ನು ನೋಡ್ತಾರೆ? ಪ್ರೇಮ್, ಗಣೇಶ್, ಮಯೂರ್, ಅಜಯ್, ವಿಜಯ್, ಸುದೀಪ್, ದರ್ಶನ್ ರಂತವರು ಆ ದಿನಗಳಲ್ಲೇ ಬರಬೇಕಾಗಿತ್ತು. ಇವರ ಆಗಮನದಿಂದಲೇ ಇಂದು ನಮಗೆ ಇಷ್ಟೊಂದು ಒಳ್ಳೆಯ ಚಿತ್ರಗಳು ಸಿಕ್ಕಿರೋದು.
ಎರಡನೆಯದಾಗಿ .....
ನಮ್ಮ ನಿರ್ಮಾಪಕರುಗಳು ರೀಮೇಕ್ ಗೆ ಮೊರೆ ಹೋದದ್ದು, ನಮ್ಮ ಪುಣ್ಯ ದಬ್ಬಿಂಗ್ ಮಾಡಲಿಲ್ಲ. ಮುಂಗಾರು ಮಳೆ, ದುನಿಯ, ಜೋಗಿ, ಅಮೆರಿಕ ಅಮೆರಿಕ, ಚಂದ್ರಮುಖಿ ಪ್ರಾಣಸಖಿ ಇಂತ ಚಿತ್ರಗಳನ್ನು ತೆಗೆದಿದ್ದರೆ ನಾವು ನೋಡುತ್ತಿರಲಿಲ್ಲವೆ?
ಮೂರನೆಯದಾಗಿ .....
ಪುಟ್ಟಣ್ಣ ಕಣಗಲ್ ನಂತ ಪರಿಶ್ರಮಿ ಕೊರತೆ .... ನಮ್ಮ ನಿರ್ದೇಶಕರುಗಳು ನಿರ್ದೇಶನ ಬಿಟ್ಟು ನಟರಾಗುವ ಕೆಟ್ಟ ಚಾಳಿ ಹಿಡಿದದ್ದು - ಉಪೇಂದ್ರ, ಮಹೇಂದರ್, ನಾರಾಯಣ್, ಶಿವಮಣಿ, ಕಾಶೀನಾಥ್, ... ಈಗೆ ಅನೇಕ ...... ಈಗ ಪ್ರೇಮ್ ಸರದಿ :-(
ಮುಂಗಾರು ಮಳೆ, ದುನಿಯ, ಜನುಮದ ಜೋಡಿ, ನಮ್ಮೂರ ಮಂದಾರ ಹೂವೆ, ಅಮೆರಿಕ ಅಮೆರಿಕ..... ತರಹದ ಸದಭಿರುಚಿಯ ಚಿತ್ರಗಳು ಬಂದರೆ ನಾವ್ಯಾಕೆ ಬೇರೆ ಭಾಷೆಯ ಚಿತ್ರಗಳನ್ನು ನೋದ್ತೀವಿ ಹೇಳಿ ......... ಪರ ಭಾಷೆಯವರು ಕನ್ನಡ ಚಿತ್ರಗಳನ್ನು ಯಾಕೆ ನೊಡಲ್ಲ ಹೇಳಿ? ..... ಸಂದೀಪ್ ಚೌಟ, ಎಮ್ ಎಮ್ ಕರೀಮ್ ನಂತ ಸಂಗೀತ ನಿರ್ದೇಶಕರುಗಳು ಪರಭಾಷೆಗೆ ಯಾಕೆ ಹೋಗ್ತಾರೆ ಹೇಳಿ?
ದಯವುಟ್ಟು ಇಂದೇ ಹೋಗಿ ಮುಂಗಾರು ಮಳೆ, ದುನಿಯ, ಕಸ್ತೂರಿ ನಿವಾಸ, ಸತ್ಯವಾನ್ ಸಾವಿತ್ರಿ, ತಮಾಷೆಗಾಗಿ, ಇತರೆ ಒಳ್ಳೆಯ ಚಿತ್ರಗಳನ್ನು ನೋಡಿ ಪ್ರೋತ್ಸಾಹಿಸಿ .......
ನಿಮ್ಮ ಅಭಿಪ್ರಾಯಗಳನ್ನು ತಿಳಿಸಿರಿ .... ದಯವಿಟ್ಟು .....
ಕನ್ನಡಾಭಿಮಾನಿ
- ಮಲ್ಲೇನಹಳ್ಳಿ ಚನ್ನಕೇಶವ ಗಿರೀಶ (ಮಚಗಿ)
೯೯೮೬೦ ೭೦೬೫೬
P.S - ಉಪಯುಕ್ತ ಕನ್ನಡ ಚಿತ್ರಗಳ ಅಂತರ್ಜಾಲ ತಾಣಗಳು ಕೆಳಗಿನವುಗಳು:
www.gandhadagudi.com
www.viggy.com
www.chitraloka.com
http://kannada.galatta.com/
Comments
ಉ: ಡಾ.ರಾಜ್ | ಆಟೋ ರಾಜ | ಉಪ್ಪಿ ದಾದ | ಕನಸುಗಾರ| ಕನ್ನಡ ಚಿತ್ರರಂಗ "ಅಂದು - ಇಂದು"
ಉ: ಡಾ.ರಾಜ್ | ಆಟೋ ರಾಜ | ಉಪ್ಪಿ ದಾದ | ಕನಸುಗಾರ| ಕನ್ನಡ ಚಿತ್ರರಂಗ "ಅಂದು - ಇಂದು"
In reply to ಉ: ಡಾ.ರಾಜ್ | ಆಟೋ ರಾಜ | ಉಪ್ಪಿ ದಾದ | ಕನಸುಗಾರ| ಕನ್ನಡ ಚಿತ್ರರಂಗ "ಅಂದು - ಇಂದು" by arunhegde
ಉ: ಡಾ.ರಾಜ್ | ಆಟೋ ರಾಜ | ಉಪ್ಪಿ ದಾದ | ಕನಸುಗಾರ| ಕನ್ನಡ ಚಿತ್ರರಂಗ "ಅಂದು - ಇಂದು"
ಉ: ಡಾ.ರಾಜ್ | ಆಟೋ ರಾಜ | ಉಪ್ಪಿ ದಾದ | ಕನಸುಗಾರ| ಕನ್ನಡ ಚಿತ್ರರಂಗ "ಅಂದು - ಇಂದು"