ಬಾವಿಯೊಳಗಿದ್ದವನ

ಬಾವಿಯೊಳಗಿದ್ದವನ

ಬಾವಿಯೊಳಗಿದ್ದವನ
ಹೊರಗೆಳೆದು ಹಾಕಿ
ಅವನ ಜಗದಡ್ಡಾರವನು
ದೊಡ್ಡದಾಗಿ ಮಾಡಿದಿರಿ

ಹಾರಲಾಗದಿದ್ದವಗೆ, ಗಟ್ಟಿ
ರೆಕ್ಕೆ-ಪುಕ್ಕವ ಕಟ್ಟಿ
ಹಾರುವ ಆಸೆಬರಿಸಿ, ಬಾನ
ತೋರಿ, ಬೆನ್ನ ತಟ್ಟಿದಿರಿ

ಎಲ್ಲೋ, ಎಲೆಯಮರೆಯಲ್ಲಿ
ಕಾಯಾಗಿ ಕೂತವನ
ಬೆಳಕಿಗೆ ತಂದಿಟ್ಟು
ಹಣ್ಣಾಗುಂತೆ ಮಾಡಿದಿರಿ

ತಿಪ್ಪೆ ಮೇಲಿದ್ದವಗೆ
ಉಪ್ಪರಿಗೆಯ ದಾರಿ ತೋರಿದಿರಿ
ನೆಲದ ಮೇಲಿನ ಚುಕ್ಕಿ
ಬಾನಲ್ಲಿ ಮಿನುಗುವಂತೆ ಮಾಡಿದಿರಿ

ಏನೆಲ್ಲ ಮಾಡಿದಿರಿ
ಎನಗಾಗಿ ಮಾಡಿದಿರಿ
ನಾ ಏನ ಮಾಡಲಿ
ನಿಮಗೆ ಪ್ರತ್ಯುಪಕಾರವಾಗಿ.

-ಜಯಪ್ರಕಾಶ ನೇ ಶಿವಕವಿ

Rating
No votes yet