ಹಿಂಗಾದ್ರೆ ಹೆಂಗೆ....
ಗೆಳೆಯ/ಗೆಳತಿಯರಿಗೊಂದು ನಮಸ್ಕಾರ,
ಬೇಲಿನೆ ಎದ್ದು ಹೊಲಾ ಮೇಯುವಂತ ನಿದರ್ಶನಕ್ಕೆ ಇನ್ನೊಂದು ಉದಾಹರಣೆ ಈ ಕೆಳಗಿನ ಕೊಂಡಿಯನ್ನು ನೋಡಿದರೆ ಸಿಗುತ್ತೆ.
http://www.hindujagruti.org/news/article/christians/conversions/75000-schools-to-be-distributed-copies-of-jesus-s-biography.html
ಜ್ಯಾತ್ಯಾತೀತ ಪಕ್ಷ ಅಂತ ಹೇಳಿಕೊಳ್ಳ್ತಾ ತೆರೆಯಮರೆಯಲ್ಲಿ ಈ ರೀತಿ ಕ್ರೈಸ್ತಧರ್ಮದ ಪ್ರಚಾರ ಕಾರ್ಯಕ್ಕೆ ಬೆಂಬಲ ನೀಡ್ತಿರೋ ಸರ್ಕಾರದ ಮಂದಿಗೆ ಧರ್ಮದ ಬಗ್ಗೆ ಏನ್ ತಿಳಿದಿದೆ ಅಂತ ಅರ್ಥ ಆಗ್ತಿಲ್ಲ. ಹಿಂದು ಧರ್ಮದ ಪ್ರವರ್ಥಕರಂತೆ ವರ್ತಿಸುವ ಬಿ.ಜೆ.ಪಿ ಯವರು ಈ ರೀತಿ ಪರಧರ್ಮದ ಪ್ರಚಾರ ಕಾರ್ಯದಲ್ಲಿ ತೊಡಗಿರೋದು ಎಷ್ಟು ಸರಿ?
ಅಲ್ಲ ನಮ್ ಜನ ಯಾಕೆ ಹಿಂಗೆ, ಪರ ಧರ್ಮ, ಪರ ಭಾಷೆ, ಪರರನ್ನು ಅನುಕರಿಸೋದ್ರಲ್ಲಿ ಯಾಕೆ ಇಷ್ಟೊಂದು ಉತ್ಸುಕತೆ.
ಕೇವಲ ದುಡ್ಡಿನ ಆಸೆಗಾಗಿ ಅಥವಾ ಇನ್ನಾವುದೋ ಕಾರಣಗಳಿಂದ ನಮ್ಮ ಅಂತರಾತ್ಮವನ್ನು ಮಾರಿಕೊಳ್ಳೋದು ಎಂಥಾ ನಾಚಿಕೆ ಗೇಡಿನ ಕೆಲಸ. ನಾವ್ ಯಾಕೆ ಹೀಗೆ? ನಮಗೇ ಸ್ವಂತಿಕೆ ಅನ್ನೋದು ಬೇಡವಾಗೋಯ್ತೆ. ನಮ್ಮದನ್ನೋದು ಎಲ್ಲವು ಉಪಯೋಗ ಬಾಹೀರವೆ?
ಇದಕ್ಕೆಲ್ಲ ಕಾಲಾನೆ ಉತ್ತರ ಹೇಳಬೇಕು...
---ಜಯಪ್ರಕಾಶ.ನೇ.ಶಿ