ಪಾಬ್ಲೊ ಪಿಕಾಸೊ
ಮನಸ್ಸಿನ ತಾರುಣ್ಯಕ್ಕೆ ವಯಸ್ಸಿನ ಯಾವುದೇ ಕಟ್ಟುಪಾಡುಗಳಿಲ್ಲ. - ಪಾಬ್ಲೊ ಪಿಕಾಸೊ
ಮನಸ್ಸಿನ ತಾರುಣ್ಯಕ್ಕೆ ವಯಸ್ಸಿನ ಯಾವುದೇ ಕಟ್ಟುಪಾಡುಗಳಿಲ್ಲ. - ಪಾಬ್ಲೊ ಪಿಕಾಸೊ
ಬದುಕು ಮತ್ತು ಚಿತ್ರಕಲೆ ಇವೆರಡರಲ್ಲೂ ನಮಗನ್ನಿಸಿದಂತೆ ನೇರವಾಗಿ ನಡೆದುಕೊಳ್ಳುವುದು ಅತ್ಯವಶ್ಯಕ.
ಜಗತ್ತಿನ ಪರಮೋಚ್ಚ ಧರ್ಮವೆಂದರೆ ನಮ್ಮ ಮೂಲಸ್ವರೂಪದಲ್ಲಿ, ಅಂತಃಸ್ಸತ್ವದಲ್ಲಿ ನಂಬಿಕೆಯಿಡುವುದು.
ಒಂದಾನ್ನೊಂದು ಕಾಲದಲ್ಲಿ,
ಒಂದು ಸೇಬಿನ ಮರ ಇತ್ತು, ಅದರಲ್ಲಿ ಒಂದು ಮುಗು ಸೇಬು ತಿನ್ನುತಾ, ಮರದ ನೆರಳಲ್ಲಿ ಮಲಗಿ ವಿಶ್ರಾಂತಿ ತೆಗೆದುಕೊಳ್ಳುತ್ತ, ಆ ಮರದ ಮೇಲೆ ಕೂರುವ ಹಕ್ಕಿಗಳ ಚಿಲಿಪಿಲಿ ಸದ್ದು ಕೇಳುತ್ತ, ಆಟವಾಡಿಕೊಂಡಿತ್ತು.
ಮೊನ್ನೆ, ಒಬ್ಬರಿಂದೊಬ್ಬರಿಗೆ ಬರುವ "ಸರಪಳಿ ವಿ-ಪತ್ರ"ವೊಂದು ಬಂತು ("ಫಾರ್ವರ್ಡ್ ಈ-ಮೈಲ್" ಇಲ್ಲವೇ, ಅದಕ್ಕೆ ನಾನು ಇಟ್ಟಿರುವ ಹೆಸರು). ಸಾಮಾನ್ಯವಾಗಿ ಈ ರೀತಿಯ ಪತ್ರಗಳ ಮೂಲ ಹುಡುಕೋದು ಅಸಾಧ್ಯ ಬಿಡಿ. ಅದರಲ್ಲಿ ಇದ್ದ ವಿಚಾರ: "ಹಾಲಿವುಡ್ ಸಿನೆಮಾಗಳನ್ನು ಕನ್ನಡದಲ್ಲಿ ತೆಗೆದರೆ, ಅವುಗಳ ಹೆಸರುಗಳು ಹೇಗಿರಬಹುದು?" ಅಂತ! ಸುಮ್ನೆ ನಕ್ಕು ಮರೆಯೋದಕ್ಕೆ ಒಳ್ಳೆಯ ವಿಷಯ ಅನ್ನಿಸಿತು. ಅದರಲ್ಲಿ ಕೆಲವನ್ನು ನಿಮ್ಮ ಜತೆ ಹಂಚಿಕೊಳ್ಳುತ್ತಿದ್ದೀನಿ. ಇಲ್ಲಿರುವ ಎಲ್ಲ ಹೆಸರುಗಳೂ ಯಥಾವತ್ ಅನುವಾದ ಅಲ್ಲ; ಕನ್ನಡದ ಸೊಗಡಿಗೆ ತಕ್ಕಂತೆ ಹೆಸರಿಡಲಾಗಿದೆ ಅನ್ನೋದು ಗಮನಾರ್ಹ. ಯಾರೇ ಬರೆದಿರಲಿ, ಮೆಚ್ಚಲೇಬೇಕು.
ಬೊಗಳೂರು, ಜ.19- ಸದ್ದಾಂ ಹುಸೇನ್‌ನನ್ನು ಮುದ್ದಾಂ ಆಗಿ ಗಲ್ಲಿಗೇರಿಸಿದ ಬಳಿಕ ವಿಶ್ವದ ದೊಡ್ಡಣ್ಣನಾಗಲು ಹೊರಟ ದೇಶದ ಮುಂದಿನ ಗುರಿ ಭಾರತ ಎಂದು ಗೊತ್ತಾಗಿದೆ. (bogaleragale.blogspot.com)
ಈ ಬರವಣಿಗೆಯ ತಲೆಬರೆಹವು ಅನೇಕ ಓದುಗರ ಹುಬ್ಬುಗಳು ಮೇಲೇರುವಂತೆ ಮಾಡುತ್ತದೆ. ಕರ್ನಾಟಕ ಮತ್ತು ಕನ್ನಡಗಳು ಒಂದೇ ಎಂದು ತಿಳಿದವರಿಗೆ, ಇದು ಅಚ್ಚರಿಯನ್ನು ಉಂಟುಮಾಡುತ್ತದೆ. ಆದರೆ ನಮ್ಮ ಈ ನಾಡಿನ ನಿಜವಾದ ಸ್ಥಿತಿಗತಿಗಳನ್ನು ಗಮನಿಸಿದಾಗ ಅಂತಹ ಆಶ್ಚರ್ಯಕ್ಕೆ ಕಾರಣವಿರುವಂತೆ ತೋರುವುದಿಲ್ಲ. ಕರ್ನಾಟಕ ಎನ್ನುವುದು ಒಂದು ಭೌಗೋಳಿಕ ಪ್ರದೇಶ. ಇಲ್ಲಿನ ಬಹುಪಾಲು ಜನರು ಬಳಸುವ ಭಾಷೆಯು ಕನ್ನಡ. ಆದರೆ, ಇಲ್ಲಿ ಬೇರೆ ಬೇರೆ ಭಾಷೆಗಳನ್ನು ಮಾತನಾಡುವ ಜನರೂ ಇದ್ದಾರೆ. ಅಲ್ಲದೆ, ಕನ್ನಡಕ್ಕಿಂತ ಹೆಚ್ಚಾಗಿ ಬೇರೆ ಬೇರೆ ಭಾಷೆಗಳನ್ನು ಉಪಯೋಗಿಸುವ ಕೆಲವು ಪ್ರದೇಶಗಳೂ ಇಲ್ಲಿವೆ. ಇವುಗಳಲ್ಲಿ ಕೆಲವು ಭಾಷೆಗಳಿಗೆ, ಕರ್ನಾಟಕದ ಹೊರಗೆ ಯಾವ ಅಸ್ತಿತ್ವವೂ ಇಲ್ಲ. ತುಳು, ಕೊಡಗು, ಸೋಲಿಗ ಮುಂತಾದ ಹಲವು ಭಾಷೆಗಳು ಈ ಗುಂಪಿಗೆ ಸೇರುತ್ತವೆ. ಉರ್ದು, ತಮಿಳು, ಕೊಂಕಣಿ, ತೆಲುಗು ಮುಂತಾದ ಭಾಷೆಗಳಿಗೆ ಅಂತಹ ಅಸ್ತಿತ್ವವಿದೆ. ಆದರೆ, ಇಲ್ಲಿ ಆ ಭಾಷೆಗಳನ್ನು ಬಳಸುವವರಿಗೆ, ತಮ್ಮ ಮೂಲ ರಾಜ್ಯಗಳ ನೊಕಟ ಸಂಪರ್ಕವೇನೂ ಇಲ್ಲ. ಅವರಲ್ಲಿ ಬಹುಪಾಲು ಜನರು, ತಲೆಮಾರುಗಳಿಂದ ಕರ್ನಾಟಕದಲ್ಲಿಯೇ ಇರುವವರು. ಅವರು ನೂರಕ್ಕೆ ನೂರರಷ್ಟು ಕರ್ನಾಟಕದ ಪ್ರಜೆಗಳು. ತಾಯಿನುಡಿಯ ಅಗತ್ಯದ ಬಗ್ಗೆ ಇಷ್ಟೆಲ್ಲ ಮಾತನಾಡುವ ನಮಗೆ, ಅವರ ತಾಯಿನುಡಿಗಳನ್ನು ಕಾಪಾಡುವ ಹೊಣೆಗಾರಿಕೆಯೂ ಇದೆ. ನಾವು ಇಂಗ್ಲಿಷ್, ಹಿಂದಿ, ಸಂಸ್ಕೃತ ಮುಂತಾದ ಭಾಷೆಗಳನ್ನು ಎದುರಿಸುವಾಗ, ಮಾತೃಭಾಷೆಯೆಂಬ ಆಯುಧವನ್ನು ಬಳಸಿದರೆ, ನಮ್ಮೊಳಗೇ ಇರುವ ಇತರ ಭಾಷೆಗಳ ಪ್ರಶ್ನೆ ಬಂದಾಗ ಪ್ರಾದೇಶಿಕ ಭಾಷೆಯ ಪರವಾದ ವಾದವನ್ನು ಮಂಡಿಸುತ್ತೇವೆ. ಕರ್ನಾಟಕದಲ್ಲಿಯೇ ಇರುವ ಅನ್ಯ ಮಾತೃಭಾಷಿಕರ ಬಗ್ಗೆ ಹೆಚ್ಚಿನ ಕಾಳಜಿ ತೋರಿಸುವುದಿಲ್ಲ. ಈಚಿನ ದಿನಗಳಲ್ಲಿ, ಈ ಅನ್ಯಭಾಷಿಕರ ಸಂಸ್ಕೃತಿ ಮತ್ತು ಕಲೆಗಳನ್ನು ನಮ್ಮದಾಗಿ ಮಾಡಿಕೊಳ್ಳುವ ಪ್ರಯತ್ನದಲ್ಲಿ ಕನ್ನಡಿಗರ ಪ್ರಧಾನ ವಾಹಿನಿಯು ಅಷ್ಟೊಂದು ಆಸಕ್ತವಾಗಿಲ್ಲ.
ಭಾಷಾಇಂಡಿಯ ಅಂತರಜಾಲ ತಾಣ ಈಗ ಕನ್ನಡದಲ್ಲೂ ಲಭ್ಯ. ಕನ್ನಡ ಆವೃತ್ತಿಯ ವಿಳಾಸ - [http://www.bhashaindia.com/Patrons/PatronsHome.htm?lang=Kn|http://www.bhashaindia.com/Patrons/PatronsHome.htm?lang=Kn]. ಚರ್ಚಾ ವೇದಿಕೆಯಲ್ಲಿ ಕನ್ನಡಕ್ಕಾಗಿ ನಾಲ್ಕು ವಿಭಾಗಗಳನ್ನು ಮಾಡಲಾಗಿದೆ. ಚರ್ಚೆಗಳಲ್ಲಿ ಭಾಗವಹಿಸಲು ಭೇಟಿ ನೀಡಿ - [http://bhashaindia.com/ForumV2/displaygroup.aspx?GroupID=5|http://bhashaindia.com/ForumV2/displaygroup.aspx?GroupID=5]
ನಾನು ಎಂದಿಗೂ ವಿಮರ್ಶಕರನ್ನು ಮೆಚ್ಚಿಸಲು ಕೆಲಸ ಮಾಡುವುದಿಲ್ಲ; ಬದಲಿಗೆ ಜನರನ್ನು ಮೆಚ್ಚಿಸಲು ಪ್ರಯತ್ನಿಸುತ್ತೇನೆ.
ಜೀವನದಲ್ಲಿ ಕೊನೆಗೊಮ್ಮೆ ನೀವು ಕೇವಲ ಹಣಕ್ಕಾಗಿ ಕೆಲಸ ಮಾಡುವುದಿಲ್ಲ ಎನ್ನುವ ಸ್ಥಿತಿಯನ್ನು ತಲುಪಿಯೇ ತಲುಪುತ್ತೀರಿ.