ಕೋಮಲ್ - ಉದಯೋನ್ಮಕ ಹಾಸ್ಯ ಕಲಾವಿದ

ಕೋಮಲ್ - ಉದಯೋನ್ಮಕ ಹಾಸ್ಯ ಕಲಾವಿದ

ಬರಹ

ಕೋಮಲ್ ! ಕೋಮಲ್ !! ಕೋಮಲ್ !!! ....... ಯಾರಿಗೆ ಗೊತ್ತಿಲ್ಲ ಇವರು .... ಇವರ ಒಂದು ಕಿರು ಪರಿಚಯ .....

ಕೋಮಲ್ - ಮಿಲ್ಟ್ರಿ ಮಾವ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಕೋಮಲ್ ರವರ ಇನ್ನೊಂದು ಹೆಸರು ಚಿರಂಜೀವಿ. ಇವರು ಖ್ಯಾತ ನಟ ಜಗ್ಗೇಶ್ ರವರ ಸಹೋದರ. ಇವರ ಹುಟ್ಟೂರು ತುಮಕೂರು ಜಿಲ್ಲೆ ತುರುವ್ವೇಕೆರೆ ತಾಲೂಕಿನ ಮಾಯಸಂದ್ರ (ಯಡೆಯೂರಿಗೆ ಹತ್ತಿರ). ಮಾಯಸಂದ್ರದಲ್ಲಿ ಇವರ ನಳಿನಿ-ಕೋಮಲ್ ಎಂಬ ಚಿತ್ರಮಂದಿರವಿತ್ತು. ಇವರ ಶ್ರೀಮತಿಯವರು ಐಟಿ ಉದ್ಯೋಗಿ. ನಿರ್ಮಾಪಕ ಕೇ. ಮಂಜು ಕೂಡ ಮಾಯಸಂದ್ರದವರು.

ಇವರು ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಕಲಾವಿದರಾಗಿ ಇಶ್ಟೊಂದು ಎತ್ತರಕ್ಕೆ ಬೆಳೆಯುವರೆಂದು ಯಾರೂ ಊಹಿಸಿರಲಿಲ್ಲ.

ಈಚೆಗೆ ಬರುತ್ತಿರುವ ಹೆಚ್ಹು ಕಮ್ಮಿ ಎಲ್ಲ ಕನ್ನಡ ಚಿತ್ರಗಳಲ್ಲಿ ಅಭಿನಹಿಸುತ್ತಿದ್ದಾರೆ. ಇವರಿಗೆ ನಮ್ಮ ಶುಭಾಶಯಗಳು.

ಇವರು ಅಭಿನಹಿಸಿರುವ ಕೆಲವು ಚಿತ್ರಗಳು ಈಗಿವೆ:

ಸತ್ಯವಾನ್ ಸಾವಿತ್ರಿ
ಹುಡುಗಾಟ
ಚೆಲುವಿನ ಚಿತ್ತಾರ
ತಮಾಷೆಗಾಗಿ
ನಿನಗೋಸ್ಕರ
ಅಣ್ಣ ತಂಗಿ
ಮಿಲ್ಟ್ರಿ ಮಾವ
ಐಶ್ವರ್ಯ
ತೆನಾಲಿ ರಾಮ
ಸಂತ
ದತ್ತ

ಮತ್ತೊಮ್ಮೆ ಕೋಮಲ್ ರವರಿಗೆ ನಮ್ಮೆಲ್ಲರ ಶುಭಾಶಯಗಳು.

ಓರ್ಕುಟ್ ನಲ್ಲಿ ಇವರ ಬಗೆಗಿರುವ ಸಮುದಾಯಕ್ಕೆ ಸದಸ್ಯರಾಗಿ: http://www.orkut.com/Community.aspx?cmm=35454948

ಇದನ್ನು ನೋಡಿ: http://www.chitraloka.com/satyavansavitri/synopsis.html

ಧನ್ಯವಾದಗಳು
- ಮಲ್ಲೇನಹಳ್ಳಿ ಚನ್ನಕೇಶವ ಗಿರೀಶ (ಮಚಗಿ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet