ಮೂಢನಂಬಿಕೆಗಳು ನಿಮಗೆಷ್ಟು ಗೊತ್ತು?

ಮೂಢನಂಬಿಕೆಗಳು ನಿಮಗೆಷ್ಟು ಗೊತ್ತು?

ಬರಹ

ಶ್ರೀಮನ್ಮಹಾಗಣಪತಯೇ ನಮಃ
ಶ್ರೀ ಗುರು ಚರಣ ಕಮಲಾಭ್ಯಾಂ ನಮಃ
ಮೂಢ ನಂಬಿಕೆಗಳನ್ನು ನಂಬಬೇಕೆ? ಬೇಡವೆ?
ನಂಬುವುದು ಬಿಡುವುದು ನಿಮಗೆ ಸೇರಿದ್ದು ಆದರೆ ಅದರಲ್ಲಿನ ವಾಸ್ತವವನ್ನು ತೆರೆದಿಡುವ ಸಣ್ಣ ಪ್ರಯತ್ನವೇ ಈ ಪುಸ್ತಕ.ನಮ್ಮ ಸಂಸ್ಕೃತಿ ಅತ್ಯುನ್ನತವಾದದ್ದು.ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ.ಅಂಥ ಸಂಸ್ಕೃತಿಯನ್ನು ನಾವು ಸಮಾಜದಿಂದ ಕಲಿಯುತ್ತೇವೆ.ಪ್ರಸ್ತುತ ಈ ಸಂಸ್ಕೃತಿಯು ಅಳಿವಿನತ್ತ ಸಾಗುತ್ತಿದೆ.ಅದಕ್ಕೆ ಕಾರಣ ಸಂಸ್ಕೃತಿಯ ಭದ್ರ ಬುನಾದಿಗಳನ್ನು ಬದಿಗೊತ್ತಿ ನಿಂತಿರುವುದು.
ನಮ್ಮಲ್ಲಿ ಸಂಸ್ಕೃತಿಯ ಅರಿವಳಿಕೆ ಕಡಿಮೆಯಾಗುತ್ತಿದೆ.ನಮ್ಮ ದೇಶದಲ್ಲಿ ಆವಿಷ್ಕಾರಗೊಂಡ "ಧ್ಯಾನ" ಪಾಶ್ಚಾತ್ಯರಿಂದ ಕಲಿಯುವಂತಾಗಿದೆ.ಇಲ್ಲಿ ಕೃಷ್ಣ ಮಂದಿರ ಕಟ್ಟಬೇಕಾದರೆ ಹೊರಗಿನ ದೇಶದವರ ಆರ್ಥಿಕ ಸಹಾಯ ಬೇಕಾಗಿದೆ. ಕಾರಣ ನಮ್ಮ ಸಂಸ್ಕೃತಿಯಲ್ಲಿ ನಂಬಿಕೆ ಇಲ್ಲದಿರುವುದು.ನಮ್ಮ ಸಂಸ್ಕೃತಿಯಲ್ಲಿ ನಂಬಿಕೆ ಬರಬೇಕಾದರೆ ಅದರಲ್ಲಿನ ಸಂಗತಿಗಳು ಸತ್ಯವೆಂದು ಮನದಟ್ಟಾಗಬೇಕು.ಈ ವಿಚಾರವನ್ನಿಟ್ಟುಕೊಂಡು ಬಹಳಷ್ಠು ಪುಸ್ತಕಗಳು ಬಂದಿವೆಯಾದರೂ ಮತ್ತೊಮ್ಮೆ ಧರ್ಮವನ್ನು ಏತಕ್ಕಾಗಿ ಆಚರಣೆ ಮಾಡಬೇಕೆಂಬುದನ್ನು ನೆನಪಿಸುವುದಕ್ಕಾಗಿ ಈ ಪ್ರಯತ್ನ ಮಾಡಿದ್ದೇನೆ.

ನಮ್ಮ ಹಿಂದೂ ಧರ್ಮದಲ್ಲಿ ಹೆಚ್ಚು ಮೂಡನಂಬಿಕೆಗಳಿವೆಯೆಂದು ವಾದಿಸುವವರುಂಟು. ಅವರೆಲ್ಲರಿಗೂ ವಿನಮ್ರ ಪೂರ್ವಕವಾಗಿ ಸಮರ್ಥನೆ ನೀಡುವ ಉದ್ದೇಶವನ್ನಿಟ್ಟುಕೊಂಡು ನನಗೆ ತೋಚಿದಂತೆ ಗೀಚಿದ ನನ್ನ ಚೊಚ್ಚಲ ಕೂಸನ್ನು ನಿಮ್ಮ ಕೈಲಿಡುತ್ತಿದ್ದೇನೆ.ಇದನ್ನು ಹರಸುತ್ತೀರೆಂದು ನಂಬಿದ್ದೇನೆ.ಇದಕ್ಕಾಗಿ ವಿನಯ ಪೂರ್ವಕ ಕೃತಜ್ಞತೆ

ನಾವು ಸಂಧ್ಯಾವಂದನೆ ಯಾಕೆ ಮಾಡಬೇಕು?ಧ್ಯಾನವನ್ನು ಯಾಕೆ ಮಾಡಬೇಕು?ದೇವರಿಗೆ ದೀಪ ಹಚ್ಚುವುದೇಕೆ? ಧೂಪ ಏಕೆ ಮಾಡಬೇಕು? ಘಂಟೆ ಭಾರಿಸುವದೇಕೆ?ಆಚಮನ ಮಾಡುವದೇಕೆ?ಸಂಕಲ್ಪ ಮಾಡುವದು ಯಾಕೆ?ಪವಿತ್ರವನ್ನು ಯಾಕೆ ಹಾಕಿಕೊಳ್ಳಬೇಕು?ಕಳಶಗಳ ಕೆಳಗೆ ಅಕ್ಕಿಯನ್ನೇ ಏಕೆ ಹಾಕಬೆಕು ?ತಾಮ್ರದ ಕಲಶವನ್ನೇ ಏಕೆ ಇಡಬೆಕು?ಧರ್ಭೆಯ ಕೂರ್ಚವನ್ನೇಕೆ ಹಾಕುತ್ತೇವೆ? ಮಾವಿನ ಸೊಪ್ಪನ್ನು ಹಾಕುವದೇಕೆ? ತೆಂಗಿನ ಕಾಯಿ ಯಾಕೆ ಇಡುತ್ತಾರೆ?ಬಾಳೆ ಕಂದನ್ನು ಕಟ್ಟುವದೇಕೆ? ಮಾವಿನ ಸೊಪ್ಪಿನ ತೋರಣವನ್ನೇಕೆ ಕಟ್ಟುತ್ತಾರೆ?ಮನೆಯ ಮುಂದೆ ಸಗಣಿಯಿಂದ ಸಾರಿಸುವುದೇಕೆ?ತುಳಸಿಕಟ್ಟೆ ಮನೆಯ ಮುಂದೆಯಾಕೆ ಕಟ್ಟುತ್ತಾರೆ? ಹರಿಸಿನ ಕುಂಕುಮವನ್ನೇಕೆ ಪೂಜೆ ಮಾಡುತ್ತಾರೆ? ಗೋಪೂಜೆ ಮಾಡುವುದೇಕೆ?ಹೋಮಗಳನ್ನು ಆಚರಿಸುವದೇಕೆ? ರಂಗವಲ್ಲಿ ಹಾಕುವದೇಕೆ? ವಾಸ್ತು ಪ್ರಕಾರ ಮನೆಯನ್ನೇಕೆ ಕಟ್ಟಬೇಕು? ಜ್ಯೋತಿಷ್ಯದ ಆಧಾರದ ಮೇಲೆ ಶಾಂತಿ ಮಾಡುವುದು ಏಕೆ? ಉತ್ತರಕ್ಕೆ ತಲೆ ಹಾಕಿ ಮಲಗಬಾರದೇಕೆ? ಮುಸ್ಸಂಜೆಯಲ್ಲಿ ಆಡಬಾರದೇಕೆ? ಊಟಕ್ಕೆ ಮೊದಲು ಪಾಯಸವನ್ನೇ ಏಕೆ ತಿನ್ನಬೇಕು?ಮಲಗುವ ಮುನ್ನ ದೇವರನ್ನು ಯಾಕೆ ನೆನೆಯಬೇಕು? ದೇವಸ್ಥಾನಗಳಲ್ಲಿ ಅಭಿಷೇಕ ಯಾಕೆ ಮಾಡುತ್ತಾರೆ? ದೇವಸ್ಥಾನಗಳಲ್ಲಿ ಗೋಪುರಗಳ್ಯಾಕೆ ಕಟ್ಟುತ್ತಾರೆ? ಕಿವಿಯಲ್ಲಿ ಓಲೆ ಹಾಕುವದೇಕೆ? ಹಣೆಯಲ್ಲಿ ಕುಂಕುಮವಿಡುವುದೇಕೆ? ಶಿಖೆ(ಜುಟ್ಟು)ಬಿಡುವುದೇಕೆ? ಭಸ್ಮ ಧಾರಣೆ ಏಕೆ ಮಡುತ್ತಾರೆ? ಹಬ್ಬಗಳಲ್ಲಿ ವಿಶೇಷ ತಿಂಡಿಗಳನ್ನೇಕೆ ಮಾಡುತ್ತಾರೆ?ಶೋಡಷ ಸಂಸ್ಕಾರಗಳೆಂದರೇನು? ಅವನ್ನು ಯಾಕೆ ಆಚರಿಸಬೇಕು? ನಂದಾದೀಪವನ್ನು ಹಚ್ಚುವದೇಕೆ? ಶ್ರಾಧ್ದ ಮಾಡುವುದು ಏಕೆ? ಉಪವಾಸಗಳನ್ನು ಮಾಡುವದೇಕೆ?ತಾಂಬೂಲ ಜಗಿಯುವದೇಕೆ? ಯಂತ್ರಗಳನ್ನು ಕಟ್ಟಿಕೊಳ್ಳುವದೇಕೆ? ಇಂಥಹ ಅನೇಕ ಪ್ರಶ್ನೆಗಳು ನಮ್ಮಲ್ಲಿ ಅನೇಕರಿಗೆ ಮೂಡುತ್ತವೆ. ಆದರೆ ಅವುಗಳನ್ನು ಪರಿಹರಿಸಿಕೊಳ್ಳುವುದಕ್ಕೆ ಸರಿಯಾದ ಸಾಮಗ್ರಿಗಳು ಸಿಗುವುದಿಲ್ಲ. ಯಾರನ್ನಾದರು ಕೇಳಿದರೆ ನಾಸ್ತಿಕರೆಂದು ಮೂಲೆಗುಂಪು ಮಾಡುತ್ತಾರೆ. ಅಂಥವರೇ ಈ ಲೇಖನ ಬರೆಯಲು ಸ್ಪೂರ್ತಿ ಎಂದರೆ ತಪ್ಪಾಗಲಾರದು. ಅಂಥವರಲ್ಲಿ ಬೆರಳೆಣಿಕೆಯಷ್ಠು ಜನರಾದರೂ ಆಸ್ತಿಕರ ಗುಂಪಿಗೆ ಸೇರಿದರೆ ಈ ಪ್ರಯತ್ನ ಮಾಡಿದ ನಾನು ಧನ್ಯ.

(೧). ನಾವು ಸಂದ್ಯಾವಂದನೆ ಮಾಡುವುದೇಕೆ?

ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸೂರ್ಯ ಉದಯಿಸುವಾಗ ಮತ್ತು ಮುಳುಗುವಾಗ ಪ್ರಪಂಚಕ್ಕೆಲ್ಲ ಬೆಳಕನ್ನು ಕೊಡುವ ಸೂರ್ಯನಿಗೆ ಕೃತಜ್ಞತೆ ಹೇಳುವ ಉದ್ದೇಶದಿಂದ ಮಾಡುವ ಕಾರ್ಯವೇ "ಸಂಧ್ಯಾವಂದನೆ".
ಸಂಧ್ಯಾವಂದನೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ,ಶಾಂತಿ ದೊರಕುತ್ತದೆ.ಆರೋಗ್ಯ ದೃಷ್ಠಿಯಿಂದ ಪ್ರಾಣಾಯಾಮ ಮಾಡಿದರೆ ಮನಸ್ಸು ಶುದ್ದವಾಗುತ್ತದೆ,ಬುದ್ಧಿ ಚುರುಕಾಗುತ್ತದೆ,ಆಯಸ್ಸು ಹೆಚ್ಚುತ್ತದೆ. ಋಷಿವರೇಣ್ಯರ ಧೀರ್ಘಾಯುಷ್ಯದ ಗುಟ್ಟು ಈ "ಪ್ರಾಣಾಯಾಮ".ಹಾಗೆ ಸೂರ್ಯ ನಮಸ್ಕಾರ ಮಾಡುವುದರಿಂದ ದೇಹದ ಎಲ್ಲ ಅಂಗಾಂಗಗಳಿಗೂ ವ್ಯಾಯಾಮ ಆಗುತ್ತದೆ. ಸೂರ್ಯನ ಕಿರಣಗಳಲ್ಲಿನ ವಿಟಮಿನ್ ಗಳು ನಮ್ಮ ದೇಹವನ್ನು ಸೇರುತ್ತವೆ.ಅಷ್ಟೆ ಅಲ್ಲದೆ ನಮ್ಮ ಜೀವನದಲ್ಲಿ ಶಿಸ್ತು ಮೂಡಲು ಪ್ರಥಮ ಮೆಟ್ಟಿಲು ಸಂಧ್ಯಾವಂದನೆ ಆಗಿದೆ.

(೨). ನಾವು ಧ್ಯಾನವನ್ನೇಕೆ ಮಾಡಬೇಕು?

ಧ್ಯಾನ ಎಂದರೆ ಏಕಾಗ್ರತೆ. ನಮ್ಮ ಮನಸ್ಸು ಚಂಚಲವಗಿರುತ್ತದೆ. ಈಚಂಚಲತೆಯನ್ನು ಹೋಗಲಾಡಿಸಿ ಮನಸ್ಸನ್ನು ಧೃಡವಾಗಿರಿಸುವ ಪ್ರಕ್ರಿಯೆಯೇ"ಧ್ಯಾನ". ದೃಡವಾದ ಮನಸ್ಸಿನಿಂದ ಸರಿಯಾದ ನಿರ್ಣಯಗಳನ್ನು ತೆಗೆದುಕೊಳ್ಳಬಹುದು. ಹಾಗೆ ಸರಿಯಾದ ನಿರ್ಣಯಗಳಿಂದ ತೆಗೆದುಕೊಂಡ ನಿರ್ಧಾರವು ತಪ್ಪಾಗಲಿಕ್ಕೆ ಸಾಧ್ಯವಿಲ್ಲ.ಯವುದೇ ಕಾರ್ಯಗಳನ್ನು ಏಕಗ್ರತೆಯಿಂದ ಮಾಡುವವನಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ.ಧ್ಯಾನದಿಂದ ಏಕಾಗ್ರತೆ ಹೆಚ್ಚುತ್ತದೆ.ಮನಸ್ಸಿನ ಸಂಕಟಗಳು ದೂರವಾಗುತ್ತದೆ. ಮನಸ್ಸನ್ನು ಉಲ್ಲಾಸದಾಯಕವಾಗಿಡುವ ಈ ಧ್ಯಾನವನ್ನು ಮೂಢ ನಂಬಿಕೆಯೆಂದು ದೂರ ಮಾಡಿದರೆ, ಬಹಳ ದೊಡ್ಡ ಪ್ರಮಾಣದ ನಷ್ಠವೆಂದರೆ ಅತಿಶಯೋಕ್ತಿಯಲ್ಲ.

(೩). ನಾವು ದೇವರಿಗೆ ದೀಪವನ್ನು ಹಚ್ಚುವುದು ಏಕೆ?

ಭಗವಂತನು ಜ್ಯೋತಿ ಸ್ವರೂಪನಾಗಿದ್ದಾನೆ.ಆತನಿಗೆ ಜ್ಯೋತಿಗಳಿಂದ ಉಪಯೊಗವೇನು? ಎಂದರೆ,ನಾವು ಬೆಳಗುವ ದೀಪಗಳು ಪರಮಾತ್ಮನಿಗಲ್ಲ.ಆತನಿಂದ ಜ್ಞಾನವೆಂಬ ಬೆಳಕು ಅಂಧಕಾರವೆಂಬ ನಮ್ಮ ಬಾಳಿನಲ್ಲಿ ಹರಡಲಿ ಎಂಬ ಭಾವನೆಯನ್ನಿಟ್ಟುಕೊಂಡು ದೀಪವನ್ನು ಬೆಳಗುತ್ತೇವೆ. ಹಾಗೆಂದು ವಿದ್ಯುದ್ದೀಪಗಳನ್ನು ಹಚ್ಚುತ್ತೇವೆಂದರೆ ನಿಮ್ಮ ಅಂದಾಜು ತಪ್ಪು ಎನ್ನುತ್ತೇನೆ.ಏಕೆಂದರೆ, ದೀಪಗಳನ್ನು ತುಪ್ಪ ಅಥವ ಎಣ್ಣೆ ಮತ್ತು ಬತ್ತಿಗಳಿಂದ ಹಚ್ಚುತ್ತೇವೆ.ತುಪ್ಪದ ದೀಪದ ಬೆಳಕು ಕಣ್ಣಿನ ಆರೋಗ್ಯವನ್ನು ವೃಧ್ದಿಸುತ್ತದೆ. ವಿದ್ಯುದ್ದೀಪದ ಬೆಳಕು ದೃಷ್ಠಿಯನ್ನು ಮಂದವಾಗಿಸುತ್ತದೆ.(ಎಣ್ಣೆಯ ದೀಪಕ್ಕಿಂತ ತುಪ್ಪದ ದೀಪವು ಶ್ರೇಷ್ಠವೆಂದಿದ್ದಾರೆ).ಅಂತೆಯೇ ನಂದಾ ದೀಪವನ್ನು ಹಚ್ಚುವುದೇಕೆಂದರೆ,ಹಿಂದಿನ ಕಾಲದಲ್ಲಿ ಅಂದರೆ ರಂಜಕದಿಂದ ಬೆಂಕಿಯ ಉಪಯೋಗವು ತಿಳಿಯುವುದಕ್ಕೆ ಮುಂಚೆ ಎರಡು ಬೆಣಚು ಕಲ್ಲುಗಳ ಸಂಘರ್ಷಣೆಯಿಂದ ಅಥವ ಅರುಣಿಗಳಿಂದ ಬೆಂಕಿಯನ್ನು ಉತ್ಪಾದಿಸುತ್ತಿದ್ದರು. ಇವುಗಳಿಂದ ಬೆಂಕಿಯನ್ನು ಉತ್ಪಾದಿಸುವುದು ಬಹಳ ಕಷ್ಠಕರವಾದ ಮತ್ತು ರೇಜಿಗೆಯ ಕೆಲಸವಾಗಿತ್ತು. ಒಮ್ಮೆ ಹೊತ್ತಿಸಿದ ಬೆಂಕಿಯನ್ನು ಧೀರ್ಘ ಕಾಲದವರೆಗೆ ಉಪಯೋಗಿಸುವ ಉದ್ದೇಶವಿಟ್ಟುಕೊಂಡು ನಂದಾದೀಪವನ್ನು ಹಚ್ಚುವ ಪರಿಪಾಠವನ್ನು ರೂಢಿಸಿಕೊಂಡಿರಬೇಕು.

(೪). ನಾವು ಧೂಪವನ್ನು ಹಚ್ಚುವುದೇಕೆ?

ಲೋಭಾನ, ಶ್ರೀಗಂಧ, ಚಂಗಲಕೋಷ್ಠ, ಗುಗ್ಗುಳ, ಯಾಲಕ್ಕಿ, ಕೃಷ್ಣಾಗರು, ದೇವದಾರು, ಹಾಲುಮಡ್ಡಿ, ಜಟಾಮಾಂಸಿ ಮತ್ತು ಕಚೋರಗಳೆಂಬ ಹತ್ತು ವಿಧವಾದ ಮೂಲಿಕೆಗಳಿಂದ ಸಿದ್ಧಪಡಿಸಿ ಬೆಂಕಿಯಲ್ಲಿ ಸುಟ್ಟು ಅದರ ಹೊಗೆಯನ್ನು ಕುಡಿದರೆ ಶ್ವಾಸಕೋಶಗಳ ತೊಂದರೆಗಳು ನಿವಾರಣೆಯಾಗುತ್ತದೆ. ಈ ಹತ್ತು ವಿಧವಾದ ಮೂಲಿಕೆಗಳನ್ನು "ದಶಾಂಗ ಧೂಪ"ವೆನ್ನುತ್ತಾರೆ. ಸುವಾಸನೆಗಾಗಿ ಹಚ್ಚುವ ಗಂಧದ ಕಡ್ಡಿಗಳು ಹೆಚ್ಚು ಉಪಯೋಗಕಾರಿಯಾಗುವುದಿಲ್ಲ. ಧೂಪವನ್ನು ಹಚ್ಚುವದರಿಂದ ಅದರ ವಾಸನೆಯು ನಮ್ಮ ಮನಸ್ಸನ್ನು ಹಗುರ ಮಡುತ್ತದೆ. ಭಕ್ತಿಯಿಂದ ಪ್ರಾರ್ಥನೆ ಮಾಡುವುದಕ್ಕೆ ಅನುಕೂಲವಾದ ಈ ಧೂಪವನ್ನು ಹಚ್ಚುವುದರಲ್ಲಿ ಹುಚ್ಚು ಕೆಲಸವಿಲ್ಲವೆಂಬುದು ಸತ್ಯವಷ್ಠೆ.

(೫). ನಾವು ಪೂಜೆಗೆ ಮುಂಚೆ ಘಂಟೆಯನ್ನೇಕೆ ಭಾರಿಸುತ್ತೇವೆ?

ಎರಡು ಲೋಹಗಳು ಪರಸ್ಪರ ಢಿಕ್ಕಿ ಹೊಡೆದಾಗ ಶಬ್ದ ತರಂಗಗಳುಂಟಾಗುತ್ತವೆ. ಈ ಶಬ್ದ ತರಂಗಗಳು ಕಿವಿಯನ್ನು ಹೊಕ್ಕು ಮೆದುಳನ್ನು ಸೇರುತ್ತದೆ.
ಸಾಮಾನ್ಯವಾಗಿ ಘಂಟೆಗಳನ್ನು ಕಂಚು,ಪಂಚಲೋಹ,ಬೆಳ್ಳಿ ಅಥವ ಹಿತ್ತಾಳೆಯಿಂದ ಮಾಡುತ್ತಾರೆ. ಪೂಜೆ ಮಾಡುವಾಗ ಹೊರಗಿನ ಎಲ್ಲ ವಿಚಾರಗಳನ್ನು ಪಕ್ಕಕ್ಕಿಟ್ಟು ಶುದ್ಧವಾದ ಮನಸ್ಸಿನಿಂದ ಪೂಜಿಸಬೇಕು. ಕಂಚಿನ ಘಂಟೆಯ ಸದ್ದು ಕಿವಿಯಲ್ಲಿ ಗುಂಯಿಗುಡುತ್ತಾ ಹೊರಗಿನ ಪ್ರಪಂಚವನ್ನು ಕ್ಷಣ ಕಾಲ ಮರೆಸಿಬಿಡುತ್ತದೆ ಗಮನಿಸಿದ್ದೀರ? ಅಂಥಹ ಸ್ಥಿತಿಯಲ್ಲಿ ನಮ್ಮ ಮನಸ್ಸು ಪರಿಪೂರ್ಣ ಶುದ್ಧವಾಗಿರುತ್ತದೆ. ಆ ಸಮಯದಲ್ಲಿ ಮಾಡುವ ಆಲೋಚನೆ ಸಫ಼ಲವಾಗುತ್ತದೆ. ಹಾಗೆಯೇ ಘಂಟೆ ಭಾರಿಸುವ ಕೈಗಳ ನಾಡಿಗಳು ಗಂಟೆಯಿಂದ ಹೊರಬರುವ ತರಂಗಗಳಿಂದ ಶುದ್ಧವಾಗುತ್ತದೆ. (ಪೂಜೆಗೆ ಕಂಚಿನ ಘಂಟೆ ಶ್ರೇಷ್ಠವೆಂದು ಹೇಳಿದ್ದಾರೆ.)

(೬). ನಾವು ಆಚಮನ ಮಾಡುವುದೇಕೆ?

ಆಚಮನ ಮಾಡುವ ನೀರು ಗಾಳಿಯೊಂದಿಗೆ ಒಳಗೆ ಹೋಗಿ ಅನ್ನನಾಳ ಮತ್ತು ಶ್ವಾಸಕೋಶಗಳು ಸೇರುವ ಸಂಧಿಯಲ್ಲಿ ಸೇರಿರುವ ಕಫ಼ ಮತ್ತು ಕಸದೊಂದಿಗೆ ಹೊಟ್ಟೆಯನ್ನು ಸೇರಿ ಅಲ್ಲಿಂದ ಬಹಿರ್ದೆಸೆಯಲ್ಲಿ ಹೊರಬೀಳುತ್ತದೆ. ಗಂಟಲಿನಲ್ಲಿರುವ ಕಫ಼ವು ಶಬ್ದವನ್ನು ಸ್ವಚ್ಚವಾಗಿ ಉಚ್ಛಾರ ಮಡಲು ಬಿಡುವುದಿಲ್ಲ ಎಂಬುದು ಗೊತ್ತಿರುವ ಸಂಗತಿಯಾಗಿದೆ. ಸ್ವಚ್ಚವಾಗಿ ಉಚ್ಛಾರ ಮಾಡದ ಮಂತ್ರಗಳ ಅರ್ಥಗಳು ಬೇರೆಯೇ ಆಗುತ್ತದೆ. ಇದಕ್ಕೆ ಹಲವು ಉದಾಹರಣೆಗಳಿವೆ. ಈ ರೀತಿಯ ತಪ್ಪುಗಳು ಆಗದಿರಲಿ ಎಂದು ಋಷಿ ಮುನಿಗಳು ಕಂಡುಕೊಂಡ ಉಪಾಯವೇ ಈ "ಆಚಮನ"ವಾಗಿದೆ. ಇದರಿಂದ ಹೆಚ್ಚಿನ ಉಪಯೋಗವಿಲ್ಲವಾದರೂ ಆಚರಿಸುವುದರಲ್ಲಿ ತಪ್ಪೇನೂ ಇಲ್ಲವೆಂದೆನಿಸುತ್ತಿದೆ.

(೭).ನಾವು ಸಂಕಲ್ಪವನ್ನೇಕೆ ಮಾಡುತ್ತೇವೆ?

ನಾವು ಯಾವುದೇ ಕಾರ್ಯವನ್ನು ಅಚ್ಚುಕಟ್ಟಾಗಿ ಮಡಬೇಕಾದರೆ ಪೂರ್ವ ಯೋಜನೆ ಅಗತ್ಯ. ಪೂರ್ವ ಯೋಜನೆ ಹಾಕಿಕೊಂಡು ಮಾಡುವ ಎಲ್ಲ ಕಾರ್ಯಗಳು ಉತ್ತಮ ಫಲದಾಯಕವಾಗಿರುತ್ತವೆ. ಅದೇ ರೀತಿ ಯಾವುದೇ ಪೂಜಾ ಕೈಂಕರ್ಯಗಳಲ್ಲಿ ಮೊದಲು ಪೂರ್ವ ಯೋಜನೆ ಮಾಡಿಕೊಳ್ಳುವ ಸಲುವಾಗಿ ಸಂಕಲ್ಪವನ್ನು ಮಾಡಿಕೊಳ್ಳುತ್ತೇವೆ. ಸಂಕಲ್ಪದಲ್ಲಿ ನಾವು ವಾಸಿಸುತ್ತಿರುವ ಸ್ಥಳದ ಪರಿಚಯ, ಈಗಿನ ಕಾಲಮಾನ, ಯಾವ ಉದ್ದೇಶದಿಂದ ಏನು ಮಾಡುತ್ತಿದ್ದೇವೆ? ಯಾರನ್ನು ಉದ್ದೇಶಿಸಿ ಮಾಡುತ್ತಿದ್ದೇವೆ? ಇವೆಲ್ಲದರ ಸಂಕ್ಷಿಪ್ತವಾದ ವಿವರಣೆ ಇರುತ್ತದೆ.ಇದರಿಂದ ಕರ್ಯಕ್ರಮದ ಯಾವ ಘಟ್ಟವನ್ನೂ ಮರೆಯುವ ಸಾದ್ಯತೆಯಿರುವುದಿಲ್ಲ. ಆದ್ದರಿಂದ ಸಂಕಲ್ಪ ಮಾಡುವುದರಲ್ಲಿ ಯಾವುದೇ ಕಂದಾಚಾರ ಇಲ್ಲವೆಂಬುದು ಸಾಬೀತಾಗುತ್ತದೆ.

(೮).ನಾವು ಪವಿತ್ರವನ್ನು ಯಾಕೆ ಧರಿಸಬೇಕು?

"ಪವಿತ್ರ"ವೆಂದರೆ ಹೆಸರೇ ಹೇಳುವಂತೆ ಬಹಳ ಪವಿತ್ರವಾದದ್ದು. ಧರ್ಭೆಗಳನ್ನು ಸೇರಿಸಿ ಕಟ್ಟಿ ಉಂಗುರದಂತೆ ಮಾಡಿ ಉಂಗುರದ ಬೆರಳಿಗೆ ಹಾಕಿಕೊಳ್ಳುವ ಸಾಧನವೇ ಪವಿತ್ರ. ಧರ್ಭೆಯಲ್ಲಿ ಸೂಕ್ಷ್ಮವಾಗಿ ಗಮನಿಸಿದಾಗ ಅದರ ರಚನೆ ಹಲವಾರು ಮುಳ್ಳುಗಳಿಂದ ಆಗಿದೆ. ಈ ಮುಳ್ಳುಗಳು ಎಷ್ಠೋ ಬ್ಯಾಕ್ತೇರಿಯಾಗಳನ್ನು ತಡೆದು ತನ್ನಲ್ಲೆ ಉಳಿಸಿಕೊಳ್ಳುತ್ತದೆ.ಈ ಪವಿತ್ರವನ್ನು ಹಾಕಿಕೊಂಡು ಪ್ರಾಣಾಯಾಮ ಮಾಡುವುದರಿಂದ ವಾತಾವರಣದಲ್ಲಿನ ಬ್ಯಾಕ್ಟೀರಿಯಾಗಳು ನಮ್ಮ ದೇಹವನ್ನು ಸೇರುವ ಪ್ರಮಾಣ ಸಾಕಷ್ಟು ಕಡಿಮೆಯಾಗುತ್ತದೆ. ಇದರಿಂದ ಅನೇಕ ರೋಗಾಣುಗಳು ನಮ್ಮ ದೇಹವನ್ನು ಸೇರುವುದು ತಪ್ಪುತ್ತದೆ ಮತ್ತು ಆರೋಗ್ಯವಾಗಿರುವುದಕ್ಕೆ ಸಹಕಾರಿಯಾಗಿರುತ್ತದೆ.

(೯). ಕಲಶಗಳ ಕೆಳಗೆ ಅಕ್ಕಿಯನ್ನೇಕೆ ಹಾಕಬೇಕು?

ಅಕ್ಕಿಯು ಶಾಂತಿಯ ಸಂಕೇತ. ಏಕದಳ ಧಾನ್ಯವಾಗಿರುವ ಅಕ್ಕಿಯನ್ನು ಪೂಜೆಮಾಡುವ ಕಲಶಗಳ ಕೆಳಗೆ ಹಾಕುವುದು, ಪ್ರತಿದಿನ ನಮ್ಮ ಹಸಿವನ್ನು ನೀಗಿಸುವ ಧಾನ್ಯಕ್ಕೆ ಕೃತಜ್ಞತೆ ತೋರಿಸುವ ಉದ್ದೇಶಕ್ಕಾಗಿ . ಮನುಷ್ಯನಿಗೆ ಉಪಕಾರಿಯಾಗುವ ಎಲ್ಲ ವಸ್ತುಗಳು ದೈವ ರೂಪವೇ ಎಂದು ಅವುಗಳೆಲ್ಲವಕ್ಕೂ ದೇವರ ಸನ್ನಿಧಿಯಲ್ಲಿ ಸ್ಥಾನ ಕಲ್ಪಿಸಿದೆ ನಮ್ಮ ಧರ್ಮ.

(೧೦).ನಾವು ತಾಮ್ರದ ಕಳಸವನ್ನೇ ಏಕೆ ಉಪಯೋಗಿಸುತ್ತೇವೆ?

ತಾಮ್ರವು ಲೋಹಗಳಲ್ಲೆಲ್ಲ ಅತುತ್ತಮವಾದದ್ದು. ಇದಕ್ಕೆ ವಿಷೇಶವಾದ ಗುಣಗಳಿರುವುದರಿಂದಲೇ ಇದಕ್ಕೆ ವಿಷೇಷವಾದ ಸ್ಥಾನವನ್ನು ಕೊಟ್ಟಿದ್ದಾರೆ. ತಾಮ್ರದೊಂದಿಗೆ ನೀರುಬೆರೆತಾಗ ಅಲ್ಲಿ ರಾಸಾಯನಿಕ ಕ್ರಿಯೆ ಉಂಟಾಗಿ ವಿಶಿಷ್ಟವಾದ ದ್ರಾವಣ ಉತ್ಪತ್ತಿಯಾಗುತ್ತದೆ. ಈದ್ರಾವಣದಿಂದ ಅನೇಕ ತರಹದ ಚರ್ಮ ರೋಗಗಳು ಗುಣವಾಗುತ್ತವೆಂದು ವೈಜ್ಞಾನಿಕವಾಗಿ ಸಾಬೀತು ಮಾಡಲಾಗಿದೆ. ಅಂತಹ ಉಪಯುಕ್ತವಾದ ಮತ್ತು ಮಹತ್ವದ್ದಾದ ಕಳಸವನ್ನು ಹೀಗಳೆಯುವುದು ಸಾಧುವಲ್ಲವೆಂಬುದು ನನ್ನ ಅಭಿಪ್ರಾಯ.

(೧೧). ನಾವು ಕಲಶದೊಳಗೆ ಧರ್ಬೆಯ ಕೂರ್ಚವನ್ನೇಕೆ ಹಾಕುತ್ತೇವೆ?

ನಾವು ಮಂತ್ರವನ್ನು ಉಚ್ಛಾರ ಮಾಡುವಾಗ ಕೆಲವು ಏರುಪೇರುಗಳನ್ನು ಗಮನಿಸಿರುತೇವೆ. ಈ ಏರುಪೇರುಗಳನ್ನು ಸ್ವರಗಳೆನ್ನುತ್ತಾರೆ. ಸ್ವರಗಳನ್ನು ಛಂದೋಬದ್ಧವಾಗಿ ಹೇಳುವ ಮಂತ್ರಗಳು ಪ್ರಕೃತಿಯಲ್ಲಿನ ವಿದ್ಯುತ್ಕಾಂತೀಯ ಶಕ್ತಿಯನ್ನು {ಎಲೆಕ್ಟ್ರೋ ಮ್ಯಾಗ್ನೆಟೀಕ್ ಪಾವರ್} ಸಂಯೋಜಿಸುತ್ತವೆ. ಈ ರೀತಿ ಸಂಯೋಜಿಸಲ್ಪಟ್ಟ ಶಕ್ತಿಯು ಕಲಶದೊಳಗಿಟ್ಟಿರುವ ಧರ್ಭೆಯಿಂದ ಆಕರ್ಶಿತಗೊಂಡು ಕಲಶದೊಳಗೆ ಸೇರುತ್ತದೆ. ಇದನ್ನೇ ಹಿಂದಿನ್ ಕಾಲದವರು ದೈವ ಸಾನ್ನಿಧ್ಯವೆನ್ನುತ್ತಿದ್ದರು ಎಂದು ಕಾಣುತ್ತದೆ. ಇಂತಹ ದೈವ ಸಾನ್ನಿಧ್ಯಕ್ಕಾಗಿ ಧರ್ಬೆಯ ಕೂರ್ಚನ್ನು ಕಲಶದೊಳಗೆ ಹಾಕುತ್ತೇವೆ.

(೧೨). ಕಲಶದೊಳಗೆ ಮಾವಿನ ಸೊಪ್ಪನ್ನು ಏಕೆ ಹಾಕುತ್ತೇವೆ ?

ಮಾವಿನ ಎಲೆಗಳಲ್ಲಿ ಪತ್ರಹರಿತ್ತಿನ ಪ್ರಮಾಣ ಹೆಚ್ಚಾಗಿರುತ್ತದೆ. ಪತ್ರಹರಿತ್ತು ಹೆಚ್ಚಾಗಿರುವ ಎಲೆಗಳು ಹೆಚ್ಚು ಆಮ್ಲಜನಕವನ್ನು ಉತ್ಪಾದಿಸುತ್ತದೆ. ಇದು ತಿಳಿದಿರುವ ಸಂಗತಿಯಾಗಿದೆ. ಶುಭ ಕಾರ್ಯಗಳು ಮನೆಯಲ್ಲಿ ಜರುಗುವಾಗ ಬಹಳಜನ ಸೇರುವುದು ಸಾಮಾನ್ಯವಾಗಿರುತ್ತದೆ. ಹಾಗೆ ಬಹಳಜನ ಸೇರಿದಾಗ ಅಷ್ಠೂ ಜನಕ್ಕೆ ಸರಿಹೊಂದುವ ಆಮ್ಲಜನಕ ವಾತಾವರಣದಲ್ಲಿ ಸೇರಿಸುವ ಸಲುವಾಗಿ ಮಾವಿನಸೊಪ್ಪು ಮತ್ತು ಬಾಳೆ ಎಲೆಗಳನ್ನು ಉಪಯೋಗಿಸುತ್ತಾರೆ . (ಮಾವಿನ ಎಲೆಗಳು ಮತ್ತು ಬಾಳೆ ಎಲೆಗಳು ಧೀರ್ಘಕಾಲದವರೆಗೆ ಆಮ್ಲಜನಕವನ್ನು ಉತ್ಪಾದಿಸುತ್ತವೆ) ಅಲ್ಲದೆ ಮಾವಿನ ಎಲೆಗಳಲ್ಲಿ ಔಷದೀಯ ಗುಣಗಳು ಹೇರಳವಾಗಿರುತ್ತವೆ ಮತ್ತು ಚರ್ಮರೋಗಗಳಿಗೆ ರಾಮಬಾಣವಾಗಿದೆ.

(೧೩).ಕಲಶದ ಮೇಲೆ ತೆಂಗಿನಕಾಯಿ ಇಡುವ ಉದ್ದೇಶವೇನು ?

ಪರಮಾತ್ಮನು ಜ್ಯೋತಿ ಸ್ವರೂಪನಾಗಿದ್ದಾನೆ. ಜ್ಯೋತಿ ಸ್ವರೂಪನಾದ ಭಗವಂತನನ್ನು ಕಲಶದಲ್ಲಿ ಆವಾಹನೆ ಮಾಡುತ್ತೇವೆ. ಕಲಶವೂ ಜ್ಯೋತಿ ಸ್ವರೂಪದಂತೆ ಕಾಣುತ್ತದೆ. ತೆಂಗಿನ ಬಗ್ಗೆ ಹೇಳಬೇಕಾದದ್ದೇನೂ ಇಲ್ಲ. ತೆಂಗಿನ ಮರದ ಯಾವುದೇ ಭಾಗವೂ ಕೆಲಸಕ್ಕೆ ಬಾರದೇ ಇಲ್ಲ. ಆದ್ದರಿಂದಲೇ ಅದಕ್ಕೂ ದೈವ ಸ್ಥಾನವನ್ನು ಕೊಟ್ಟು ಕಲ್ಪವೃಕ್ಷವೆಂದಿದ್ದೇವೆ. ಅಂತಹ ಪವಿತ್ರವಾದ ಮರದಲ್ಲಿ ಹುಟ್ಟಿದ ತೆಂಗಿನ ಕಾಯಿಯನ್ನು ಪರಮಾತ್ಮನಿಗರ್ಪಿಸುವುದರಿಂದ ಧನ್ಯತೆಯನ್ನು ಪಡೆಯುವುದರ ಉದ್ದೇಶವನ್ನಿಟ್ಟುಕೊಂಡು ತೆಂಗಿನಕಾಯಿಯನ್ನು ಪೂಜೆಯಲ್ಲಿ ಬಳಸುತ್ತೇವೆ.

(೧೪).ಮನೆಯ ಮುಂದೆ ಸಗಣಿಯಿಂದ ಸಾರಿಸುವುದೇಕೆ?

ಗೋಮಯ, ಗೋಮೂತ್ರ, ಹಾಲು, ಮೊಸರು ಮತ್ತು ತುಪ್ಪ ಇವುಗಳನ್ನು ಪಂಚಗವ್ಯಗಳೆನ್ನುತ್ತೇವೆ. ಇವೆಲ್ಲವೂ ಆಕಳದ್ದಾಗಿರುತ್ತದೆ. ಇವುಗಳಲ್ಲಿ ಪ್ರತಿಯೊಂದಕ್ಕೂ ಅದರದೆ ಆದ ವಿಷೇಶ ಗುಣಗಳಿರುತ್ತವೆ.ವಿಷೇಶವಾಗಿ ಗೋಮಯದಲ್ಲಿ ಸೂಕ್ಷ್ಮವಾದ ಬ್ಯಾಕ್ತೀರಿಯಾಗಳನ್ನು ತಡೆಯುವ ಶಕ್ತಿ ಹೆಚ್ಚಾಗಿರುತ್ತದೆ.ಗೋಮಯದಿಂದ ಮನೆಯ ಮುಂದೆ ಸಾರಿಸಿದರೆ ಹೊರಗಿನ ವಾತಾವರಣದಲ್ಲಿನ ರೋಗಕಾರಕ ಬ್ಯಾಕ್ತೇರಿಯಾಗಳು ಮನೆಯೊಳಗೆ ಬರದಂತೆ ತಡೆಯುತ್ತದೆ. ಇದರಿಂದ ಅನೇಕ ರೋಗಗಳನ್ನು ಹತ್ತಿರ ಸುಳಿಯದಂತೆ ಮಾಡಬಹುದಾಗಿದೆ.ಹಾಗೆಯೇ ರಂಗವಲ್ಲಿ ಹಾಕುವುದು ನಮ್ಮ ಧರ್ಮದ ವಿಶೇಷ ಸಂಪ್ರದಾಯವಾಗಿದೆ. ಚಿತ್ತಾಕರ್ಶಕ ಬಗೆಬಗೆಯ ರಂಗೋಲಿಗಳನ್ನು ಸುಣ್ಣದ ಉಂಡೆ ಮತ್ತು ಕೆಂಪು ಮಣ್ಣಿನಿಂದ ಹಾಕುತ್ತಾರೆ. ಸುಣ್ಣದ ಉಂಡೆಮತ್ತು ಕೆಂಪುಮಣ್ಣುಗಳೂ ಸಹ ಆಂಟಿ ಬಯೋಟಿಕ್ ಗಳೆಂಬುದನ್ನು ಮರೆಯಬಾರದು. ಈಗೀಗ ನಗರ ಪ್ರದೇಶಗಳಲ್ಲಿ ಸಮಯಾಭಾವ ಮತ್ತು ಸ್ಥಳಾಭಾವದಿಂದ ಮನೆಯಮುಂದೆ ಸಾರಿಸುವುದು ಮತ್ತು ರಂಗವಲ್ಲಿ ಹಾಕುವುದು ದೂರವೇ ಉಳಿದಿದೆ. ಅಲ್ಲಲ್ಲಿ ನಡೆಯುವ ರಂಗವಲ್ಲಿ ಸ್ಪರ್ದೆಗಳಲ್ಲಿ ಮಾತ್ರ ರಂಗವಲ್ಲಿಗಳನ್ನು ನೋಡುವುದು ಅನಿವಾರ್ಯವಾಗಿದೆ.

(೧೫).ಮನೆಯ ಮುಂದೆ ತುಳಸಿ ಕಟ್ಟೆಯನ್ನೇಕೆ ಕಟ್ಟುತ್ತೇವೆ?

ತುಲಸಿಯ ಎಲೆಗಳಲ್ಲಿ ವಿಷೇಶ ಗುಣಗಳಿವೆ. ತುಲಸಿಯು ಔಷದೀಯ ಸಸ್ಯವಾಗಿದೆ. ಇದರಿಂದ ಅನೇಕ ಕಾಯಿಲೆಗಳನ್ನು ಗುಣಪಡಿಸಬಹುದು. ಆಯುರ್ವೇದದಲ್ಲಿತುಲಸಿಗೆ ಬಹಳ ಪವಿತ್ರ ಸ್ಥಾನವನ್ನು ಕೊಟ್ಟಿದ್ದಾರೆ. ಕೆಮ್ಮು, ಕಫ಼ ಮುಂತಾದ ಸಣ್ಣ ಸಣ್ಣ ಕಾಯಿಲೆಗಳಿಂದ ಹಿಡಿದು ಕ್ಷಯದ ವರೆಗೆ ನಿವಾರಿಸುವ ಶಕ್ತಿ ಈ ತುಲಸಿಗಿದೆ. ಅಂಅಹ ತುಲಸಿ ಪ್ರತಿಯೊಂದು ಮನೆಯಲ್ಲೂ ಇಲ್ಲದೆಇದ್ದರೆ ಮುಂದಿನ ಪೀಳಿಗೆ ಯವರಿಗೆ ಕನ್ನಡಿಯೊಳಗಿನ ಗಂಟಾಗುವುದರಲ್ಲಿ ಸಂದೇಹವಿಲ್ಲ.