Thanks , ನನ್ನಿ ಮತ್ತು ಸವಿಯೊದಗು

Thanks , ನನ್ನಿ ಮತ್ತು ಸವಿಯೊದಗು

Comments

ಬರಹ

Thanks ಗೆ ಅಚ್ಚ ಕನ್ನಡದಲ್ಲಿ ಯಾವ ಒರೆ ಹೆಚ್ಚು ಸೂಕ್ತ ಎಂಬ ಚರ್ಚೆ ಆಗಾಗ ಇಲ್ಲಿ ಆಗಿದೆ.

’ ಸವಿಯೊದಗು ’ ಮತ್ತು ’ನನ್ನಿ’ - ಇವು ಈ ವೇದಿಕೆಯಲ್ಲಿ ಅಲ್ಲಲ್ಲಿ ಬಳಕೆಯಾಗುತ್ತಿವೆ. ಈ ಬಗ್ಗೆ ಯೋಚಿಸಿದಾಗ ನನಗನಿಸಿದ್ದು:

Thanks ಎಂಬ ಶಬ್ದದಲ್ಲಿ ಎರಡು ಭಾವನೆಗಳು ವ್ಯಕ್ತವಾಗುತ್ತವೆ:

೧) ’ ನಿಮ್ಮಿಂದ ನೆರವಾಯಿತು ’ ಎಂದು ಹೇಳುವುದು (Your gesture has been a real help - ಅನ್ನುವುದು)
(ಇದು ನಮಗಾದ ಧನ್ಯತೆಯ ಅನುಭವ - ’ ನಾವು ನಿಮ್ಮಿಂದ ಏನನ್ನೋ ಪಡೆದಿದ್ದೇವೆ ’ ಎಂದು ಒಪ್ಪಿಕೊಳ್ಳುವುದು)

೨) ’ ನೀವು ಮಾಡಿದ ನೆರವಿಗಾಗಿ ನಿಮಗೆ ವಂದನೆಗಳು’ (You deserve to be thanked - ಅನ್ನುವುದು)
(ಇದು ನಮ್ಮ ಧನ್ಯತೆಯ ಅನುಭವಕ್ಕೆ ನೀವು ಕರಣರಾದದ್ದಕ್ಕೆ ಮರುಹೇಳುವುದು)

ಬರಿಯ ಮೊದಲಿನ ಅನಿಸಿಕೆಯನ್ನು ಮಾತ್ರ ಹೇಳಬೇಕಿದ್ದರೆ ಅದಕ್ಕೆ ’ಸವಿಯೊದಗು’ ಸರಿಹೊಂದುತ್ತದೆ.
ಸವಿಯೊದಗಿನಲ್ಲಿ ನಾವು ಪಡೆದುಕೊಂಡ ನೆರವಿನ ಅಭಿವ್ಯಕ್ತಿ ಇದೆಯಾದರೂ ಅದಕ್ಕೆ ’ ಮರುಹೇಳುವಿಕೆ ’ ಕಾಣುವುದಿಲ್ಲ.

ಈ ಎರಡೂ ಭಾವನೆಗಳನ್ನು ಒಂದೇ ಒರೆ ಒಳಗೊಂಡಿದ್ದರೆ ಅದು ’ ನನ್ನಿ’.
(ಯಾಕೆಂದರೆ ಅದು ’ ಒಳ್ಳೆಯ ’ / ’ನಿಜವಾದ’ ಎಂಬರ್ಥದ ಒರೆ).

ಈ ಬಗ್ಗೆ ಇಲ್ಲಿ ನಿಮ್ಮ ಅನಿಸಿಕೆ ಬರೆಯಿರಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet