ಇದು ಹದ್ದು ಮೀರಿದ ಹದ್ದಿನ ಕತೆ!
ಇದು 2006ಲವ್ ಸ್ಟೋರಿ! ಹಾಲುಜೇನಿನಂತಿದ್ದ ಅವನು ಮತ್ತು ಅವಳ ನಡುವೆ, ಇನ್ಯಾವಳೋ ಬಂದು ಹುಳಿಹಿಂಡಿದ ಕತೆ! ಕಾಲನಲೀಲೆಗೆ ಸುಖಿ ಸಂಸಾರ ಸಂಕಷ್ಟಕ್ಕೆ ಸಿಕ್ಕ ಕತೆ! ಅವಳು ಸತ್ತ ಮೇಲೆ ಅವನು ವಿರಹದಿಂದ ನೊಂದ ಕತೆ! ಈಗ ಎಲ್ಲವನ್ನು ಮರೆತು ಅವನು, ಇನ್ಯಾವಳೊಂದಿಗೋ ಸರಸವಾಡುತ್ತಿರುವ ಕತೆ! ಇದು ಕಾಗೆಗುಬ್ಬಿ ಕತೆಯಲ್ಲ! ಒಂದು ಸತ್ಯ ಕತೆ! ಶ್ರೀವತ್ಸ ಜೋಷಿಯವರ ವಿಚಿತ್ರಾನ್ನ ಅಂಕಣದಲ್ಲಿ ಮನಮಿಡಿಯುವ ಕತೆ
ಆದರೆ ಈ ಕತೆ ಮನುಷ್ಯರದಲ್ಲ, ಹದ್ದುಗಳ ಸಂಸಾರದ್ದು! ಕಟ್ಟುಕತೆಯಲ್ಲ, ನಿಜವಾಗಿ ನಡೆದದ್ದು!
ಬೋಳುತಲೆಯ ಹದ್ದು (bald eagle) ಅಮೆರಿಕ ಸಂಯುಕ್ತ ಸಂಸ್ಥಾನದ ರಾಷ್ಟ್ರಪಕ್ಷಿ. ಬೋಳುತಲೆ ಎನ್ನುವುದಕ್ಕಿಂತ ಬಿಳಿತಲೆ ಎನ್ನೋಣ (ಹಿಂದಿನಕಾಲದಲ್ಲಿ bald ಪದಕ್ಕೆ ಬಿಳಿ ಎಂದೇ ಅರ್ಥವಿತ್ತಂತೆ). ಶುಭ್ರಶ್ವೇತವರ್ಣದ ತಲೆ, ಹಳದಿ ಕೊಕ್ಕು, ಕಂದು ದೇಹ - ವಿಶಿಷ್ಟ ಸೌಂದರ್ಯ, ಗತ್ತಿನ ಗಾಂಭೀರ್ಯ ಇಲ್ಲಿನ ಹದ್ದುಗಳದು. ಅದಕ್ಕೆಂದೇ ಸರಕಾರಿ ಮರ್ಯಾದೆ. ರಾಷ್ಟ್ರಪಕ್ಷಿಯಾಗಿದ್ದೂ ಸಂತತಿ ಕ್ಷೀಣಿಸುತ್ತ ಇರುವುದರಿಂದ `ಎನ್‌ಡೇಂಜರ್‍ಡ್ ಸ್ಪೀಸಿಸ್' ಪಟ್ಟಿಯಲ್ಲಿ ಸೇರುತ್ತದೋ ಎನ್ನುವ ಆತಂಕ.
ಓದಿ