ಪುಸ್ತಕನಿಧಿ- http://dli.iiit.ac.in/ ಯ ಒಂದು ಸುತ್ತು ಪೂರ್ಣ
ಅಂತೂ ಒಂದು ಸಾರಿ (ವ್ಯರ್ಥ?) ಹಠ ಬಿಡದ ತ್ರಿವಿಕ್ರಿಮನಂತೆ http://dli.iiit.ac.in ತಾಣದಲ್ಲಿನ ೨೦,೦೦೦ ಪುಸ್ತಕಗಳ ಪಟ್ಟಿಯನ್ನು ನೋಡಿದೆ. ಇಲ್ಲಿ ನಾನು ಈಗಾಗಲೇ ಓದಿದ ಪುಸ್ತಕಗಳಿವೆ . ಪೇಟೆಯಲ್ಲಿ ಈಗಲೂ ನೀವು ದುಡ್ಡು ಕೊಟ್ಟು ಖರೀದಿ ಮಾಡುತ್ತಿರುವ ಕೆಲವು ಪುಸ್ತಕಗಳಿವೆ ( ಯೋಗಿಯ ಅತ್ಮಕಥೆ , ಭಗವದ್ಗೀತೆಯ ಯಥಾರೂಪ , ಮಾಸ್ತಿಯವರ ಕತೆಗಳು , ಪಾ.ವೇ.ರವರ ಪದಾರ್ಥ ಶಬ್ದಕೋಶ (ಹೆಸರು ಸರಿ ನೆನಪಿಲ್ಲ ) ಇತ್ಯಾದಿ )
ಶಬ್ದಕೋಶಗಳು , ಅಪರೂಪದ ಪುಸ್ತಕಗಳು ಇವೆ .
ವೇದಗ್ರಂಥಗಳಲ್ಲಿ ಪ್ರವಾದಿ ಮಹಮ್ಮದರು ಎಂಬ ಪುಸ್ತಕವನ್ನೂ ಓದಿದೆ.
ಬೇಂದ್ರೆ , ಕುವೆಂಪು , ಪು.ತಿ.ನ ,ವಿ.ಸೀ , ಗೋಕಾಕ , ಜೀ.ಪಿ.ರಾಜರತ್ನಂ ಪುಸ್ತಕಗಳಿವೆ .
ಧಾರ್ಮಿಕ ಪುಸ್ತಕಗಳಿವೆ .
ಅನೇಕ ಪತ್ತೇದಾರಿ ಮತ್ತು ಸಾಮಾಜಿಕ ಕಾದಂಬರಿಗಳೂ ಇವೆ.
ಅನೇಕ ಇಂಗ್ಲೀಷ್ ಪುಸ್ತಕಗಳ ಅನುವಾದಗಳೂ ಇವೆ . ವುದರಿಂಗ್ ಹೈಟ್ಸ್ ಇದೆ .
ಉಮ್ರಾವ್ ಜಾನ್ , ಪರಿಣೀತಾ , ಉಮರ್ ಖಯ್ಯಾಮ್ ( ಉಮರನ ಒಸಗೆ- ಡಿ.ವಿ.ಜಿ. ) ದಂತಹ ಸುಪ್ರಸಿದ್ಧ ಪುಸ್ತಕಗಳ ಅನುವಾದಗಳೂ ಸಿಕ್ಕವು.
ಕೆಲವು ಪುಸ್ತಕಗಳು ಪಟ್ಟಿಯಲ್ಲಿದ್ದೂ ಲಭ್ಯ ಇರುವದಿಲ್ಲ .
http://dli.iiit.ac.in ದ ಜತೆಗಾರ ತಾಣಗಳಲ್ಲಿ ಹೆಚ್ಚು ಪುಸ್ತಕಗಳಿಲ್ಲ ; ಇದ್ದರೂ ಸರಿಯಾಗಿ ತೋರಿಸುವದಿಲ್ಲ .
ಮುಂದೊಮ್ಮೆ ಓದಬೇಕು . ಓದಿದಾಗ ವಿಶೇಷವೇನಾದರೂ ಇದ್ದರೆ ನಿಮಗೆ ತಿಳಿಸುವೆ.
ಸಿಗುವ .