ಅಭಯಂಕರ
ಅಭಯಂಕರ.
ಭಯವೇಕೆ ಭಯವೇಕೆ ಏನಾಗಬಹುದು
ಸಾವಿಗಿಂತಾ ಮೇಲೆ ಏನಾಗಬಹುದು.
ಹುಲಿಸಿಂಹ ಕಾಡಾನೆ
ಕರಿನಾಗ ಕಾಳಿಂಗ
ಒಟ್ಟಾರೆ ಎರಗಿದರೂ
ಏನಾಗಬಹುದು.
ಸಾವಿಗಿಂತಾ ಮೇಲೆ ಏನಾಗಬಹುದು.
ಕಾರ್ಮೋಡ ಕೋಲ್ಮಿಂಚು
ಬರಸಿಡಿಲು ಭೂಕಂಪ
ಒಟ್ಟಾರೆ ಎರಗಿದರೂ
ಏನಾಗಬಹುದು.
ಸಾವಿಗಿಂತಾ ಮೇಲೆ ಏನಾಗಬಹುದು.
ಕಟುಕಜನ ಕಳ್ಳರು
ದೊಂಬಿ ದರೋಡೆಗಳು
ಒಟ್ಟಾರೆ ಎರಗಿದರೂ
ಏನಾಗಬಹುದು.
ಸಾವಿಗಿಂತಾ ಮೇಲೆ ಏನಾಗಬಹುದು.
ದುಶ್ಯ್ಶತೃ ವಂಚಕರು
ಗೋಮುಖ ವ್ಯಾಘ್ರರು
ಒಟ್ಟಾರೆ ಎರಗಿದರೂ
ಏನಾಗಬಹುದು.
ಸಾವಿಗಿಂತಾ ಮೇಲೆ ಏನಾಗಬಹುದು.
ಭಯವೆಲ್ಲಿ ಭಯವೆಲ್ಲಿ
ಅಭಯಂಕರನಿರುವಲ್ಲಿ
ನಿರ್ಭಯದ ಸುಖವಿದು
ಹರಿನಾಮ ಫಲವಿದು.
- Read more about ಅಭಯಂಕರ
- 2 comments
- Log in or register to post comments