ಹೊತ್ತು ಮೂಡುವ ಸಮಯದಲ್ಲಿ ಗೊತ್ತು ಮೂಡಿದ ಕಥೆ

ಹೊತ್ತು ಮೂಡುವ ಸಮಯದಲ್ಲಿ ಗೊತ್ತು ಮೂಡಿದ ಕಥೆ

ಹೊತ್ತು ಮೂಡುವ ಸಮಯ
ಅರಳಿತೆರಡು ಹೂಗಳು
ಒಂದು ಕೆಂಪು ಒಂದು ಹಳದಿ

ಸೂರ್ಯಗಿದ್ದವು ಎರಡೂ ಬಣ್ಣ
ಹಳದಿ ಹೂಗೆ ಜಗವೆಲ್ಲ ಹಳದಿ
ಕೆಂಪು ಹೂಗೆ ಜಗದಗಲ ಕೆಂಪು

ಕೆಂಪು ತನ್ನ ಕಂಪು ಬೀರಿ
ಹಳದಿಯನ್ನ ಮರೆಸಿತು
ಗದ್ಯ ಪದ್ಯವಾಗಿ ನೋವನೆಲ್ಲ ಮರೆಸಿತು

ನೋವು ಸತ್ತ ಮೇಲೆ ಕೆಂಪು
ಕಣ್ಣು ತೆರೆದು ನೋಡಿತು
ಅಲ್ಲೆ ಪಕ್ಕ ಹಳದಿ ಬಿದ್ದು ನಲುಗಿತು

ಇದೀಗ ಗೊತ್ತು ಮೂಡುವ ಸಮಯ
ಕೆಂಪು ಕಣ್ಣು ತೆರೆಯಿತು
ಕಂಡಿತದಕೆ ಸುತ್ತ ಸತ್ತ ಹಳದಿ ಹಳದಿ...

- ಅಭಯ

Rating
No votes yet