ವಿಶ್ವಕಪ್‍ಗೆ "ದಂಡಯಾತ್ರೆ"

ವಿಶ್ವಕಪ್‍ಗೆ "ದಂಡಯಾತ್ರೆ"

ಬರಹ

ಅತಿರಥ ಮಹಾರಥರನ್ನು ಒಳಗೊಂಡ ನಮ್ಮ ಟೀಮ್ ಇಂಡಿಯಾ ಮೊದಲ ಸುತ್ತಿನಲ್ಲೇ ವಸ್ತುಶಃ ಹೊರಬಿದ್ದು ಕ್ರಿಕೆಟ್ ಪ್ರೇಮಿಗಳಿಗೆ ಆಘಾತ ಕೊಟ್ಟಿದೆ. ಆಟದಲ್ಲಿ ಸೋಲು ಗೆಲುವು ಇದ್ದದ್ದೇ ಆದರೂ ಭಾರತದ ಸೋಲನ್ನು ಅರಗಿಸಿಕೊಳ್ಳುವುದು ಸುಲಭವಲ್ಲ. ಸಚಿನ್,ಗಾಂಗೂಲಿಯಂತಹ ನಮ್ಮ ಆಟಗಾರರಿಗೆ ಕರ್ಣನ ಹಾಗೆ ಕೊನೆಗಳಿಗೆಯಲ್ಲ್ಲಿ ಕಲಿತದ್ದನ್ನು ಮರೆಯಲಿ ಎಂಬ ಶಾಪ ಇದೆಯೇನೋ ಅನ್ನುವ ಅನುಮಾನ ಬರುತ್ತದೆ.ವಿಶ್ವಕಪ್ ಜ್ವರ ಉತ್ತುಂಗಕ್ಕೇರಿದ್ದರೆ ಹಲವು ಕಂಪೆನಿಗಳು ಕೋಟಿಗಟ್ಟಲೆ ಬಾಚುತ್ತಿದ್ದುವು. ಟಿವಿಯಂತಹ ಉತ್ಪನ್ನಗಳ ಮಾರಾಟ ತಾರಕಕ್ಕೇರುತ್ತಿದ್ದುವು. ಈಗ ಅವೆಲ್ಲಕ್ಕೂ ಕಲ್ಲು ಬಿದ್ದಂತಾಗಿವೆ. ಪರೀಕ್ಷೆಯ ನಡುವೆ ಕ್ರಿಕೆಟ್‍ಗೆ ಸಮಯ ಹೊಂದಿಸಬೇಕಾದ ಮಕ್ಕಳು ಈಗ ಕ್ರಿಕೆಟ್ ಬಗ್ಗೆ ಅಲ್ಪಕಾಲದ ವೈರಾಗ್ಯ ಹೊಂದಿ,ಓದಿನ ಕಡೆ ಹೆಚ್ಚು ಗಮನ ಹರಿಸಲೂ ಬಹುದು.
ಬರ್ಮುಡಾ ತಂಡ ಬಾಂಗ್ಲಾವನ್ನು ಸೋಲಿಸಿ,ನಮಗೆ ಜೀವದಾನ ಸಿಗಬಹುದೆಂದು ಭಾವಿಸುವವರು ಯಾರಾದರೂ ಇದ್ದಾರೆಯೇ?