ಪೋಲೆಂಡ್, ಈಗ ಗೊಲ್ ಹೊಡೆದು ಮುನ್ನಡೆಯಲು ಹಾತೊರೆಯುತ್ತಿದೆ ! ವಿಶ್ವಕಪ್ ನಾಕ್ ಔಟ್ ಪ್ರಕ್ರಿಯೆ ಸಾಗಿದೆ !
ಮಂಗಳವಾರ, ೨೦, ಜೂನ್, ೨೦೦೬ ರಂದು ನಡೆದ ವಿಶ್ವ ಕಪ್ ಫುಟ್ ಬಾಲ್ ಪಂದ್ಯಗಳು:
೧. ನೆನ್ನೆ ನಡೆದ ಗ್ರುಪ್, 'ಎ' ಪಂದ್ಯದಲ್ಲಿ, ಪ.ಜರ್ಮನಿ ವಿರುಧ್ದ ಇಕ್ವೆಡಾರ್, ಜರ್ಮನಿ, (೩-೦)ಭರ್ಜರಿ ಜಯದಿಂದ ತನ್ನ ಗ್ರುಪಿನ ಪ್ರಥಮ ಸ್ಥಾನ ವನ್ನು ಅಲಂಕರಿಸಿತು.ಸೀಟಿ ಬಾರಿಸಿದ ೫ ನೆ ನಿಮಿಷದಲ್ಲೆ ಮಿರೊಸ್ಲೋವ್ ಕ್ಲೊಸೆ ಮೊದಲ ಗೊಲ್ ಬಾರಿಸಿದರು. ತಮ್ಮ ಇನ್ನೊಂದು ಗೊಲನ್ನು ೪೪ ನೆ ನಿಮಿಷದಲ್ಲಿ ಹೊಡೆದು ಜರ್ಮನಿಗೆ ಹೊಸ ಹುರುಪು ತಂದು ಕೊಟ್ಟರು.೫೭ ನೆ ನಿಮಿಷದಲ್ಲಿ ಪೊಡೊಲಸ್ಕಿ ಲ್ಯುಕಾಸ್ ಜರ್ಮನಿಗೆ ಮತ್ತೊಂದು ಗೋಲ್ ಹೊಡೆಯುವ ಮೂಲಕ ಅದರ ಸ್ಥಾನ ಮಾನ ವನ್ನು ಮತ್ತೂ ಭದ್ರಪಡಿಸಿದರು.