ಏಕ್ ಕೋಚ್ ಕಿ ಮೌತ್

ಏಕ್ ಕೋಚ್ ಕಿ ಮೌತ್

ಬರಹ

Bob Woolmer - Cricinfo
ಪಾಕಿಸ್ತಾನ ತಂಡದ ಕೋಚ್ [:http://content-ind.cricinfo.com/ci/content/player/22520.html|ಬಾಬ್ ವೂಲ್ಮರ್] ತೀರೇ ಹೋಗ್ಬಿಟ್ರಂತೆ. ನಿನ್ನೆ ಪಾಕಿಸ್ತಾನ ಐರಿಶ್ ತಂಡದ ವಿರುದ್ಧ ಸೋತಿತ್ತು. ವಾಪಸ್ ಮನೆಗೆ ಹೋಗೋದು ಇನ್ನೇನು ೯೯% ಖಚಿತವಾಗಿರುವ ಪಾಕಿಸ್ತಾನಕ್ಕೆ ತಂಡದ ಕೋಚು ಬಾಬ್ ವೂಲ್ಮರ್ ತೀರಿ ಹೋದದ್ದು ಕೂಡಿಕೊಂಡು ಈ ಸಲದ ವಿಶ್ವ ಕಪ್ ಮರೆಯಲಾಗದ ವ್ಯಸನವಾಗದೇ ಇರದು.

ನಿನ್ನೆ ಮ್ಯಾಚ್ ಮುಗಿದ ಬಳಿಕೆ "ಕ್ಷಮೆ ಕೇಳಿ" ಬಾಬ್ ವೂಲ್ಮರ್ "ಈ ಓಡಾಟ, ಕೊನೆ ಕಾಣದ ಹೋಟೆಲ್ ವಾಸ" "ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಮಾಡಬೇಕಿರುವ ಈ ಕೆಲಸ, ನಿಜವಾಗಲೂ ಜೀವನ ಕಷ್ಟ ಮಾಡಿಬಿಡುತ್ತದೆ" ಎಂದಿದ್ದರಂತೆ.

ಭಾರತದ ಕಾನ್ಪುರದಲ್ಲಿ ಜನಿಸಿದ ಇವರು ಕೆಂಟ್ ತಂಡಕ್ಕೆ ಆಟವಾಡಲು ಪ್ರಾರಂಭಿಸಿದ್ದಂತೆ. ಅಲ್ಲಿಂದ ಮುಂದೆ ನಡೆದು ಇಂಗ್ಲೆಂಡ್ ತಂಡದ ಸದಸ್ಯರಾಗಿ ಆಸ್ಟ್ರೇಲಿಯದ ವಿರುದ್ಧ ಸಾಧಿಸಿದ ಐತಿಹಾಸಿಕ ಆಶಸ್ ಗೆಲುವು ಇವರ ಜೀವನದ ಪ್ರಮುಖ ಮೈಲಿಗಲ್ಲುಗಳು. ಈ ಮಧ್ಯೆ ಇವರು ಯಾವಾಗಲೂ [:http://content-ind.cricinfo.com/ci/content/current/story/285973.html|"ರೆಬೆಲ್" ಆಗಿದ್ದುದು] ಕಂಡುಬರುತ್ತದೆ.

ಒಟ್ಟಿನಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ - ಈ ದೇಶಗಳ ಕೋಚ್ ಕೆಲಸ ಕಷ್ಟದ ಕೆಲಸವೇ. ವೂಲ್ಮರ್ ಕೊಲ್ಲಲ್ಪಟ್ಟರೋ ಅಥವ ಸಹಜ ಸಾವು ಅವರನ್ನು ಹುಡುಕಿಕೊಂಡು ಬಂತೋ ಅದು ಕ್ರಿಕೆಟ್ ನಂಟಿನಿಂದಲೇ ಆದದ್ದು ಎಂಬುದು ಜನಮನದಲ್ಲುಳಿಯುವ ಸಂಗತಿ.

ಚಿತ್ರ ಕೃಪೆ: [:http://cricinfo.com|ಕ್ರಿಕ್ ಇನ್ಫೊ]