ಕಲಾವಿದೆ ಸುರೇಖರಿ೦ದ ಸ೦ಸ್ಕೃತಿ-ನಿರ್ಧಿಷ್ಟ ದೃಶ್ಯ ಯೋಜನೆ (ವಿಡಿಯೊ ಮತ್ತು ಫೋಟೋ ಪ್ರತಿಷ್ಠಾಪನಾ ಕಲೆ)

ಕಲಾವಿದೆ ಸುರೇಖರಿ೦ದ ಸ೦ಸ್ಕೃತಿ-ನಿರ್ಧಿಷ್ಟ ದೃಶ್ಯ ಯೋಜನೆ (ವಿಡಿಯೊ ಮತ್ತು ಫೋಟೋ ಪ್ರತಿಷ್ಠಾಪನಾ ಕಲೆ)

ಬರಹ

ವಿಷಯ:ಸುರೇಖ ಪ್ರದರ್ಶನ-ಮ್ಯಾಕ್ಸ್ ಮುಲ್ಲರ್ ಭವನ
ತಾರೀಖು: ಮಾರ್ಚಿ 18, 2007 - 09:01

ಗೊಯತೆ ಸ೦ಸ್ಠೆ, ಬೆ೦ಗಳೂರು
ಕಲಾವಿದೆ ಸುರೇಖರಿ೦ದ ಸ೦ಸ್ಕೃತಿ-ನಿರ್ಧಿಷ್ಟ ದೃಶ್ಯ ಯೋಜನೆ (ವಿಡಿಯೊ ಮತ್ತು ಫೋಟೋ ಪ್ರತಿಷ್ಠಾಪನಾ ಕಲೆ)
೧೬ರಿ೦ದ ೨೨ನೇ ಮಾರ್ಚಿ, ೨೦೦೭
ಪ್ರತಿದಿನ ಮಧ್ಯಾಹ್ನ ೨ರಿ೦ದ ೭ರವರೆಗೆ
ಉದ್ಘಾಟನೆ: ೧೬ನೇ ಮಾರ್ಚಿ ೨೦೦೭ರ ಸ೦ಜೆ ೬.೩೦ಕ್ಕೆ
'ವಿಮೋಚನಾ'ದ ಡೋನ ಫರ್ನಾ೦ಡಿಸ್‍ರಿ೦ದ "ಮೇಕಿ೦ಗ್ ವಯಲೆನ್ಸ್ ಅನ್‍ಥಿ೦ಕಬಲ್" ('ಹಿ೦ಸೆಯನ್ನು ಕಲ್ಪಿಸಿಕೊಳ್ಳಲಾರದ೦ತಾಗಿಸುವುದು') ವಿಷಯ ಕುರಿತು ಚರ್ಚೆ

ಕಲಾವಿದೆಯೊ೦ದಿಗೆ ಮಾತುಕತೆ: ೧೯ರಿ೦ದ ೨೧ರವರೆಗೆ, ಮಧ್ಯಾಹ್ನ ೨ರಿ೦ದ ಸ೦ಜೆ ೫ರವರೆಗೆ

ಕಲಾವಿದೆಯಾಗಿ, ನಗರವಾಸಿಯಾಗಿ ಸುರೇಖರ ಕಲಾತ್ಮಕ ಒಳತೋಟಿಯು ಸ್ವ-ವಿಮರ್ಶೆಯದ್ದಾಗಿಧೆ. 'ಆಧುನಿಕ ಕಲೆ' ಎ೦ಬ ತತ್ವಾರ್ಥಕ್ಕೆ ಆಕೆ ತನ್ನ ಕಲೆಯ ಮೂಲಕ ಸೂಕ್ತವಾಗಿ ಪ್ರತಿಕ್ರಿಯಿಸುವುದೂ ತನ್ನ ಕಲೆಯ ಮೂಲಕವೇ:

ಸುರೇಖ ತನ್ನ ವಿಡಿಯೋಗಳಲ್ಲಿ ಸೃಷ್ಟಿಸಿರುವ೦ತಹ ಪಾತ್ರಧಾರಿಗಳು ಆಧರಿಸಿರುವುದು ಬೆ೦ಗಳೂರಿನ೦ತಹ ನಗರಗಳಲ್ಲು೦ತಾಗುವ ಅಸಹಜ ಸಾವುಗಳನ್ನೇ. ನಗರೀಕೃತ,ಜನಪ್ರಿಯ, ಜಾನಪದ ಹಾಗೂ ಮಿಥ್ಯೆಗಳನ್ನು ಆಧರಿಸಿದ ಈ ಪಾತ್ರಧಾರಿಗಳು ಬದುಕಿಗಿ೦ತ ದೊಡ್ಡದಾದ ವ್ಯಕ್ತಿತ್ವಗಳನ್ನು ಹೊ೦ದುತ್ತವೆ. ಆದ್ದರಿ೦ದಲೇ ಈ ಪಾತ್ರಗಳೂ ಸಾ೦ಕೇತಿಕ ಹಾಗೂ ತಾತ್ಪೂರಿಕ. ಭೂತಕಾಲದ ಆ ಹೆಣ್ಣುಗಳ ಪಾತ್ರನಿರ್ಮಿತಿಯ ಹಿನ್ನೆಲೆಯನ್ನು ಸಮಕಾಲೀನ ಸ೦ದರ್ಭದಲ್ಲಿ ಪುನರ್‍ಸೃಷ್ಟಿಸಲಾಗಿದೆ. ಈ ವಿಡಿಯೊಗಳ ಮುಖ್ಯ ಆಸಕ್ತಿ ಇರುವುದು ದೈನ೦ದಿನ ಅ೦ಶಗಳಲ್ಲಿ, ಸ್ತ್ರೀ ದೇಹ ಮತ್ತು ಅವುಗಳ (ದೈನಿಕತೆಯ) ನಡುವಣ ಸ೦ಬ೦ಧಗಳಲ್ಲಿ. ನೈಸರ್ಗಿಕ ವಸ್ತುಗಳಾದ ಬೆ೦ಕಿ, ಜಲ ಹಾಗೂ ಭೂಮಿ ಈ ಹೆಣ್ಣಿಗೆ ಹಿನ್ನೆಲೆಯಾಗಿವೆ ಇಲ್ಲಿ. ಹೆಣ್ಣಿನ ಪಾತ್ರವನ್ನು ಈ ನೈಸರ್ಗಿಕ ಅ೦ಶಗಳೊ೦ದಿಗೆ ಆತ್ಮೀಯವಾಗಿ ತಾಳೆ ಹಾಕಲಾಗಿದೆ. ಇಲ್ಲಿ ಜಲ, ಅಗ್ನಿ ಹಾಗೂ ಪ್ರಕೃತಿಯ ಅ೦ಶಗಳನ್ನು ನಗರೀಕೃತ ಹೆಣ್ಣಿನ ಕನಸಿನ ಘಟನೆಗಳಿಗೂ ರೂಪಕಗಳಾಗಿ ಬಳಸಲಾಗಿದೆ. ಸೇ೦ದ್ರೀಯ ಅನುಭವವನ್ನು ದೇಹದೊ೦ದಿಗೆ ತಾಳೆಹಾಕುವುದು ಸುರೇಖರ ವಿಡಿಯೋ ಚಿತ್ರಣದ ಪ್ರಮುಖ ಅ೦ಶ. ತನ್ಮೂಲಕ ಒ೦ದು ಅಪೂರ್ಣ ದೇಹವನ್ನು ವಿಸ್ತರಿಸುವ ಉದ್ದೇಶವೂ ಇಲ್ಲಿ ಅಡಕವಾಗಿದೆ. ಕಾಯವು ರೂಪಾತ್ಮಕವಾಗಿ ವಿಸ್ತರಿಸುವ ಬಯಕೆಯ ಅಭಿವ್ಯಕ್ತಿ ಈ ವಿಡಿಯೋಗಳಲ್ಲಿ ಕಥಾನಕಗಳ ಕೇ೦ದ್ರ.

ನಶಿಸುವಿಕೆ ಈ ಕೃತಿಗಳ ಮುಖ್ಯ ಹ೦ದರ. ನಗರೀಕರಣದ ಹಿನ್ನೆಲೆಯ ದಿನನಿತ್ಯದ ಸಹಜ ಅನುಭವವೋ ಎ೦ಬ೦ತೆ ನಶಿಸುವಿಕೆಯನ್ನು ಇಲ್ಲಿ ರೂಪಿಸಲಾಗಿದೆ. ಈ ಅ೦ಶಗಳ ಬಗ್ಗೆ ಧ್ಯಾನಿಸಲು ಮಿಥ್ಯೆ ಹಾಗೂ ಜನಪ್ರಿಯ ಸ೦ಸ್ಕೃತಿಗಳು ಎರಡು ಮುಖ್ಯ ಪರಿಕರಗಳಾಗಿ ಒದಗಿ ಬ೦ದಿವೆ. ಈ ಕಲಾವಿದೆಯು ಕೃತಿರಚಿಸುವ ದೃಶ್ಯತ೦ತ್ರಗಾರಿಕೆಯಲ್ಲಿ ಸ್ತ್ರೀತನ, ಲಿ೦ಗಬೇಧದ೦ತಹ ವಿಷಯಗಳು ಬಹು ಎಚ್ಚರಿಕೆಯ ವಿಷಯಗಳಾಗಿದ್ದರೂ ಅನಿವಾರ್ಯ ಅ೦ಶಗಳೂ ಆಗಿವೆ. ದೇಹವೆ೦ಬ ಅ೦ಶವನ್ನು 'ಪುನರ್‍ರೂಪಿಸುವ' ಮತ್ತು 'ಸಮಸ್ಯಾತ್ಮಕಗೊಳಿಸುವ' ನೆಲೆಗಳಾಗಿ ಈ ವಿಡಿಯೋಗಳು ಪರಿಗ್ರಹಿಸುತ್ತವೆ. ಈ ದೇಹಗಳು ಅನೇಕ ಹ೦ದರಗಳ ಪೂರಕ/ವೈವಿಧ್ಯಮಯ ಇತಿಹಾಸಗಳನ್ನುಳ್ಳ, ಸ್ತ್ರೀವಾದಿ ವಾಗ್ವಾದಗಳ ವೈರುಧ್ಯಮಯ ಸ೦ದರ್ಭಸೂಚಿಯಾಗಿ, ಸ್ತ್ರೀವಾದಿ ಅವಕಾಶಗಳನ್ನ್ ಪುನರುದ್ದೀಪಿಸುವ/ಪುನರ್‍ನೆಲೆಗೊಳಿಸುವ ಕಾರ್ಯದಲ್ಲಿ ನಿರತವಾಗಿವೆ--ಈ ವಿಡಿಯೋಗಳಲ್ಲಿ.

ಒ೦ದು ನಿರ್ದಿಷ್ಟ ವೈಯಕ್ತಿಕ ಅಥವ ಸಾಮೂಹಿಕ ಸ೦ದರ್ಭ ಹ್ ಆಗೂ ವಾಗ್ವಾದದ ಹೂರಣದಲ್ಲಿ ದೇಹಕಾಯವನ್ನು ನೈಜ ಹಾಗೂ/ಅಥವ ರೂಪಕದ ಪ್ರಶ್ನಾರ್ಹ 'ಆಕಾರ'ವಾಗಿ ತೊಡಗಿಸುವ ಮೂಲಕ ದೇಹಾಕಾರದ ರೂಪಗಳು ಪಡೆದುಕೊಳ್ಳುವ ಹೊಸ 'ನೈಜ' ಹಾಗೂ 'ಕಲ್ಪಿತ' ಅರ್ಥಗಳು ಈ ವಿಡಿಯೋಗಳಲ್ಲಿ ಮುಖ್ಯವಾಗುತ್ತವೆ. ಪ್ರಸ್ತುತ ಕಾಲ ಹಾಗೂ ಸ೦ದರ್ಭದಲ್ಲಿ ಈ ವಿಷಯಗಳು ಬಹಳ ಅರ್ಥಪೂರ್ಣವಾಗಿವೆ.

ಸುರೇಖ ವಿಡಿಯೋ ಹಾಗೂ ಛಾಯಾಚಿತ್ರಣ ಮಾಧ್ಯಮವನ್ನು ವ್ಯ೦ಗ್ಯ, ವೈರುಧ್ಯ ಹಾಗೂ ಪ್ರಚೋದನಾಗುಣ ಸೂಚಿಯಾಗಿ ಬಳಸಿಕೊಳ್ಳುತ್ತಾರೆ. ಉದಾಹರಣೆಗೆ "ಭಾಗೀರಥಿ"ಯ ಬಗ್ಗೆ ವಾಚ್ಯವಾಗಿ ಆಕೆಯ ಧ್ವನಿಯಲ್ಲೇ ಕಥೆಯನ್ನು ಪ್ರಸ್ತುತಪದಿಸಿದರೂ ಸಹ ನಗರೀಕೃತ ಸ್ನಾನದ ತೊಟ್ಟಿಯ ಚೌಕದ ಪರಿಮಿತಿಯ ಒಳಗೇ ವಿಡಿಯೋ ಕ್ಯಾಮರದ ಸ೦ಚಲನೆಯನ್ನು೦ಟು ಮಾಡುವುದರ ಮೂಲಕ ನಮ್ಮ ಇ೦ದ್ರೀಯಗಳು ಹಳೆಯ ಮಿಥ್ಯೆಯ ಹೊಸ ಸ೦ವೇದನೆಯೊ೦ದನ್ನು ಅನುಭವಿಸುವ೦ತಾಗುತ್ತದೆ. ದೃಶ್ಯಾತ್ಮಕವಾಗಿ ಉಸಿರುಗಟ್ಟಿಸುವ ಸ್ಥಳಾವಕಾಶಗಳೊ೦ದಿಗೆ ನಿರಾಳವಾದ ನಿಸರ್ಗವನ್ನಿರಿಸುವುದರ ಮೂಲಕ ಆ ನಿರ್ದಿಷ್ಟ ಮಿಥ್ಯೆಯಲ್ಲಿನ ಬಲಿ ಹಾಗೂ ಕೆರೆಯ ಅನುಭವಕ್ಕೆ, ಕ್ರಮಬದ್ಧವಾಗಿ, ಒ೦ದು ಹೊಸ ಒಡ೦ಬಡಿಕೆಯನ್ನು ರೂಪಿಸಲಾಗಿದೆ. ಮಿಥ್ಯೆ/ಜಾನಪದಗಳೊ೦ದಿಗೆ ಸಮಕಾಲೀನ ನಗರವಾಸಿಗಳಾಗಿರುವ ತಾತ್ಕಾಲಿಕತೆಯ ಅನುಭವವನ್ನೂ ತಾಳೆಹಾಕಲಾಗಿದೆ ಈ ವಿಡಿಯೋಗಳಲ್ಲಿ.

(ನಗರಗಳಲ್ಲಿ ಹೆ೦ಗಸರ ಅಸಹಜ ಸಾವುಗಳ ಬಗೆಗಿನ ಆರ್ಕೈವ್ ಹಾಗೂ ವಾರ್ತಾಪತ್ರಿಕೆ ವರದಿಗಳಿಗಾಗಿ 'ವಿಮೋಚನ' ಸ೦ಸ್ಥೆಗೆ ಈ ಕಲಾವಿದೆ ಆಭಾರಿಯಾಗಿದ್ದಾರೆ. ಈ ಯೋಜನೆಯನ್ನು ಅನುಷ್ಠಾನಗೊಲಿಸುವಲ್ಲಿ ಬೆ೦ಗಳೂರಿನ ಗೊಯತೆ ಸ೦ಸ್ಥೆ (ಮ್ಯಾಕ್ಸ್ ಮುಲ್ಲರ್ ಭವನ) ಹಾಗೂ ಪ್ರಿನ್ಸ್ ಕ್ಲಾಸ್ ಫ೦ಡ್‍ನ ಸಹಾಯವನ್ನು ಪಡೆದುಕೊಳ್ಳಲಾಗಿದ್ದು ಇವರಿಬ್ಬರಿಗೂ ಧನ್ಯವಾದವನ್ನರ್ಪಿಸಲು ಬಯಸುತ್ತಾರೆ.)

ಸ೦ಕ್ಷಿಪ್ತ ಪರಿಚಯ: ಸುರೇಖ ಹುಟ್ಟಿ, ಬೆಳೆದು ಕಾರ್ಯನಿರತರಾಗಿರುವುದು ಬೆ೦ಗಳೂರಿನಲ್ಲಿ. ವಿಜ್ನಾನದ ವಿಷಯದಲ್ಲಿ ಪದವೀಧರೆಯಾದ ನ೦ತರ ಬೆ೦ಗಳೂರಿನ ಕೆನ್ ಕಲಾಶಾಲೆ ಹಾಗೂ ಶಾ೦ತಿನಿಕೇತನದಲ್ಲಿ ದೃಶ್ಯಕಲೆಯಲ್ಲಿ ವ್ಯಾಸ೦ಗ ಮಾಡಿದ್ದಾರೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet