ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅಮೇರಿಕನಿಸಮ್

ಇವತ್ತು "Ask Yahoo!"ನ ಒಂದು ಪ್ರಶ್ನೆಯ ಉತ್ತರವನ್ನೋದುತ್ತಿರುವಾಗ ಕಂಡುಬಂದದ್ದು. ಜಗತ್ತಿನಲ್ಲಿರುವ ಜಾತಿಗಳ ವಿಭಜನೆ ಅದರ ಅನುಯಾಯಿಗಳ ಸಂಖ್ಯೆಯನ್ನಾಧರಿಸಿ ಮಾಡಿ [:http://www.adherents.com/Religions_By_Adherents.html|ಅದನ್ನೊಂದು ಪೈ ಗ್ರಾಫ್ ಮೂಲಕ ಹಾಕಿದ್ದಾರೆ ಒಂದು ತಾಣದಲ್ಲಿ].

ಸುಭಾಷಿತ

ಅಗ್ನಿ, ವಾಯು, ಯಮ ಇವೆಲ್ಲ ಒಂದೇ ಪರಮೇಶ್ವರನ ಭಿನ್ನ ಭಿನ್ನ ಗುಣ ವಿಶೇಷಗಳ ಭಿನ್ನ ಭಿನ್ನ ಹೆಸರುಗಳು.

ಸಾಹಿತ್ಯ ಸಮ್ಮೇಳನ ಮತ್ತು ಆಕಾಶವಾಣಿ ಸಂಸ್ಕೃತ ವಾರ್ತೆ

ಮತ್ತೊಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಅಥವಾ ಕೇವಲ ಸಾಹಿತ್ಯದ ಸಮ್ಮೇಳನ ನಡೆಯುತ್ತಿದೆ. ಇಲ್ಲಿರುವ ಹತ್ತಾರು ಗೋಷ್ಠಿಗಳ, ವಿಶೇಷ ಉಪನ್ಯಾಸಗಳ ವಿಷಯಗಳನ್ನು ನೋಡಿದರೆ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಾಹಿತ್ಯ ಸಮ್ಮೇಳನ ಸಂಘಟಿಸುತ್ತಿರುವವರು ಸಂಪೂರ್ಣ ಸಂವೇದನಾ ಶೂನ್ಯರಾಗಿದ್ದಾರೆಯೇ ಎಂಬ ಅನುಮಾನ ಬರುತ್ತಿದೆ.

ಕಾಲ ಪ್ರಯಾಣ - ಭಾಗ ೨

ಭಾಗ ೧ ಇಲ್ಲಿದೆ

ಭಾಗ ೨

ನೀರಿನೊಳಗೇ ನಿಧಾನವಾಗಿ ನಡೆಯಲಾರಂಭಿಸಿದೆ. ಮೊದಲ ಹೆಜ್ಜೆ ಇಟ್ಟ ತಕ್ಷಣವೇ ತಲೆ ಸುತ್ತುವ ಆಭಾಸ. ಕಷ್ಟ ಪಟ್ಟು ನಾಲ್ಕು ಹೆಜ್ಜೆ ನಡೆದು, ನೀರಿನಿಂದ ಹೊರಗೆದ್ದು ಆ ಋತ್ವಿಕನ ಕಾಲುಗಳಬಳಿ ಕುಸಿದುಬಿದ್ದೆ. ನಾನು ಓದಿದ್ದ 'ಸಯನ್ಸ್ ಫಿಕ್ಷನ್' ಕತೆಗಳು ನಿಜ ಎನ್ನುವಂತೆ ಕಾಲ ಪ್ರಯಾಣ ನನ್ನನ್ನು 'ಡಿಸೋರಿಯಂಟ್' ಮಾಡಿದೆ ಎಂದು ಯೋಚಿಸುವಷ್ಟು ತ್ರಾಣವಿತ್ತು. ಆ ಕ್ಷಣದ ನಂತರ ಎಲ್ಲವೂ ಕತ್ತಲಾಯಿತು.

ಮನೆಪಾಠ

ಪುಟ್ಟನು ಬಂದ ಮನೆಯೊಳಗೆ
ಸಕ್ಕರೆ ಕಂಡ ಡಬ್ಬದೊಳಗೆ
ಅಮ್ಮನು ಎಲ್ಲೂ ಕಾಣದಿರಲು
ಮೆಲ್ಲನೆ ಕೈ ಡಬ್ಬದಲಿ ಇಳಿದಿರಲು

ಕೊಕ್ಕರೆಗಳ ಕುಣಿತ

ಆ ರಸ್ತೆಯ ಕೆಂಪು ಗುಲ್ಮೋಹರ್ ಸಾಲುಗಳ ನೆರಳಿನಲ್ಲಿ , ಆ ಕೆಂಪಿನ ಹಬ್ಬವನ್ನು ಕಣ್ಣುಗಳು ಆಸ್ವಾದಿಸುತ್ತಾ ನಡೆದರೆ, ಕೆಲವು ದಿನಗಳಲ್ಲಿ ಗುಲ್ಮೋಹರ್ ಗಳೆಲ್ಲ ಬೋಳಾಗಿ , ಬಣ್ಣವೆಲ್ಲಾ ಮಾಯವಾಗುವ ಕೊರಗು ಕಾಡುವ ಮುನ್ನ ಎರಡು ಜೋಡಿಮನೆಗಳು ಕಾಣಸಿಗುತ್ತಿತ್ತು. ಆ ಎರಡು ಮನೆಗಳನ್ನು ಕೈತೋಟವೊಂದು ಬೇರ್ಪಡಿಸುತ್ತಿತ್ತು .

ಡಯಾನಾ

ಹಾದಿಬದಿಯ ಜನರನ್ನು ನಾನು ಪ್ರೀತಿಸುತ್ತೇನೆ, ಮತ್ತು ಅವರಲ್ಲೊಬ್ಬಳಾಗಲು ಬಯಸುತ್ತೇನೆ.