ಓದಿದ ದಿನಗಳು.

ಓದಿದ ದಿನಗಳು.

ಓದಿದ ದಿನಗಳು

ಹೇಗೆ ಮರೆಯಲಿ ನಾನು
ಸಾವಿರದ ದಿನಗಳನು
ಭಾಗೇಪಲ್ಲಿಯ ಎರಡು
ಸಾವಿರದ ದಿನಗಳನು

ಸಾಸಿವೆಯ ನನ್ನನ್ನು
ಸಾಗರವ ಮಾಡಿರುವ
ನಿಮ್ಮ ನೆರಳಿನ ಎರಡು
ಸಾವಿರದ ದಿನಗಳನು

ಮನೆಯಲ್ಲಿ ರಸದೂಟ
ಶಾಲೆಯಲಿ ಗುರುಪಾಠ
ಸಂಘದಾ ಶಾಖೆಗಳ
ಸವಿಯಾದ ದಿನಗಳನು

ಚಿಕ್ಕಪ್ಪನಾ ಯೋಗ
ಚಿಕ್ಕಮ್ಮನಾ ತ್ಯಾಗ
ತಮ್ಮನಾ ಜತೆಗಿನಾ
ತಂಪಾದ ದಿನಗಳನು

ಪುಟ್ಟ ಮನೆಯಲಿ ಹೆಚ್ಚು
ಆನಂದ ತೋರಿಸಿದ
ರಾಮನಾ ಸನಿಹದಾ
ನೋವಿರದ ದಿನಗಳನು.

ಅಹೋರಾತ್ರ.

Rating
No votes yet

Comments