ಒಂದು ಸಣ್ಣ ಲೆಕ್ಕ

ಒಂದು ಸಣ್ಣ ಲೆಕ್ಕ

ಬರಹ

ಒಂದು ಸಣ್ಣ ಲೆಕ್ಕ

ನಾವು ಎಕೌಂಟೆಂಟುಗಳು ನೋಡಿ.. ಬೇಕಾದ, ಬೇಡವಾದ ಲೆಕ್ಕಗಳೆಲ್ಲ ತಲೆಯೊಳಗೆ ಹೋಗುತ್ತವೆ. ಕೆಲವು ಅಲ್ಲೇ ಉಳಿದರೆ ಕೆಲವು ಹೊರಗೆ ಹಾಕಲ್ಪಡುತ್ತವೆ!
ಇಂತಹ ಒಂದು ಸಮಸ್ಯೆ ತಲೆಯಲ್ಲಿ ಉಳಿದುಕೊಂಡಿದೆ. ಹೊರಗೆ ಹಾಕಲು ಶ್ರಮಿಸಿದರೂ ಜಗ್ಗದೆ ಕುಳಿತುಕೊಂಡಿದೆ. ಬಲ್ಲವರು ಹೊರಗೆ ಸಾಗಿಸಲು ಸಹಾಯಮಾಡಬೇಕು.
ಸಮಸ್ಯೆ ಇಷ್ಟೇ..
ನೂರಾರು ಅಂದರೆ ಸಾವಿರಾರು ಎನ್ನುವುದಕ್ಕಿಂತ ಎಷ್ಟು ಕಡಿಮೆ? ಅಥವಾ "ಅಲ್ಲಿ ಸಾಹಿತ್ಯದ ಸಭೆಯಲ್ಲಿ ನೂರಾರು ಜನ ಸೇರಿದ್ದರು" ಎಂದು ಒಂದು ಕಡೆ ಬರೆದ ಪತ್ರಿಕೆಯಲ್ಲಿ ಇನ್ನೊಂದೆಡೆ ಗೌಡರ ಆಗಮನಕ್ಕೆ "ಸಾವಿರಾರು ಮಂದಿ ಕಾದು ನಿಂತಿದ್ದರು" ಎಂದು ಬರೆದಿದ್ದರು. ಗೌಡರ ಆಗಮನಕ್ಕೆ ಸಾಧಾರಣ ಎಷ್ಟು ಜನ ಹೆಚ್ಚಿದ್ದರು ಅಂತ ತಿಳಿದುಕೊಳ್ಳಬಹುದು?
ಕೊನೇ ಪ್ರಶ್ನೆ : ಲಕ್ಷಗಟ್ಟಲೆ ಜನರು ಎಂದು ಬರೆಯುವಾಗ ಸಾಧಾರಣ ಎಷ್ಟು ನೂರಾರು ಜನರ ಗುಂಪುಗಳು ಅಥವಾ ಸಾವಿರಾರು ಜನರ ಗುಂಪುಗಳು ಇರಬೇಕು?
ಒಂದೇ ಪ್ರಶ್ನೆ ಇಷ್ಟು ತಲೆತಿನ್ನುವಾಗ "ನೂರಾರು ಪ್ರಶ್ನೆಗಳು ತಲೆ ತಿನ್ನುತ್ತಿವೆ" ಎನ್ನುವವರ ಪಾಡೇನು ಎಂದು ಚಿಂತಿಸಲೂ ಭಯವಾಗುತ್ತಿದೆ!
ಗೋಪೀನಾಥ ರಾವ್