ಮತ್ತಷ್ಟು ಗಾದೆಗಳು - ೪

ಮತ್ತಷ್ಟು ಗಾದೆಗಳು - ೪

ಬರಹ

೧. ಅಂಗೈ ತೋರಿಸಿ ಅವಲಕ್ಷಣ ಅನ್ನಿಸಿಕೊಂಡ ಹಾಗೆ.

೨. ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಂಡ.

೩. ಕಳ್ಳನ ಮನಸ್ಸು ಹುಳ್ ಹುಳ್ಳಗೆ.

೪. ಸಮುದ್ರದ ನೆಂಟಸ್ತನ ಉಪ್ಪಿಗೆ ಬಡತನ.

೫. ದಿನಾ ಸಾಯೋರಿಗೆ ಅಳೋರು ಯಾರು.

೬. ಅಕ್ಕನ ಚಿನ್ನವಾದರೂ ಅಕ್ಕಸಾಲಿಗ ಬಿಡ.

೭. ರಾಮೇಶ್ವರಕ್ಕೆ ಹೋದರೂ ಶನೀಶ್ವರ ಬಿಡ.

೮. ಎತ್ತಿಗೆ ಜ್ವರ, ಎಮ್ಮೆಗೆ ಬರೆ.

೯. ಕೆಲಸವಿಲ್ಲದ ಆಚಾರಿ ಮಗಳ ಕಾಲು ಕೆತ್ತಿದ.

೧೦. ಸಾವಿರ ಕಾಲ ಸಾಮ ಓದಿದ ಮಗ ಮನೆ ಅಜ್ಜಿ ಸೊಂಟ ಮುರಿದ.