ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕಡವ ಶಂಭು ಶರ್ಮ (೮-೮-೧೮೯೫ – ೩-೫-೧೯೬೪)

ಈ ತಿಂಗಳು ಪುತ್ತೂರಿನ ಕಾರ್ಯಕ್ರಮವೊಂದಕ್ಕೆ ಹೋದಾಗ ಈ ಹಿರಿಯರ ಬಗ್ಗೆ ತಿಳಿಯುವ, ಅವರ ಕೃತಿಯೊಂದನ್ನು ಪಡೆಯುವ ಅವಕಾಶ ಲಭಿಸಿತು.

ಹೆಂಡತಿಯರನ್ನು ಕುರಿತ ಜೋಕುಗಳು (ಮಹಿಳೆಯರ ಕ್ಷಮೆ ಕೋರುತ್ತಾ!)

ನಾನು ಮತ್ತು ನನ್ನಾಕೆ ಇಪ್ಪತ್ತೈದು ವರ್ಷ ಸುಖವಾಗಿದ್ದೆವು. ಆಮೇಲೆ, ಪರಸ್ಪರ ನೋಡಿ ಮದುವೆಯಾಗಿಬಿಟ್ಟೆವು.

ಆಮಿಷ ಮತ್ತು ಕುಕ್ಕರ ಹಳ್ಳಿ ಕೆರೆ

೨೭.೧.೦೬:
ಆಮಿಷವೆಂದರೆ ಮಾಂಸವೆಂದು ಅರ್ಥವಂತೆ. ನನಗೆ ಗೊತ್ತೇ ಇರಲಿಲ್ಲ. ಗೆಳೆಯ ರಾಮು ಹೇಳಿದ್ದು ಅದನ್ನು. ಮಹಾಭಾರತದಲ್ಲಿ ಸೇನಾಪತಿಯಾದ ಭೀಷ್ಮನನ್ನು ಭೇಟಿಯಾಗಲು ಪಾಂಡವರು ಹೋದಾಗ ವ್ಯಾಸ “ಭೀಷ್ಮನು ಹದ್ದುಗಳ ನಡುವೆ ಎಸೆದ ಆಮಿಷವಾದ” ಎಂದು ವರ್ಣಿಸುತ್ತಾನಂತೆ. ಪಾಂಡವರಿಗೆ ಭೀಷ್ಮನ ಬಗ್ಗೆ ಪ್ರೀತಿ ಗೌರವಗಳಾಗಲೀ, ಕೌರವನಿಗೆ ಭಕ್ತಿಯಾಗಲೀ ಇರಲಿಲ್ಲ. ಅವರಿಬ್ಬರಿಗೂ ಬೇಕಾದದ್ದು ಅಧಿಕಾರ, ರಾಜ್ಯ. ಭೀಷ್ಮ ತಮ್ಮವನಾದರೆ ಸಾಕು ಎಂಬ ಹಪಾಹಪಿ. ಅದಕ್ಕೇ ಭೀಷ್ಮನನ್ನು ಹದ್ದುಗಳ ನಡುವೆ ಎಸೆದ ಮಾಂಸ ಅಥವ ಆಮಿಷಕ್ಕೆ ಹೋಲಿಸಿದ್ದಾನೆ ಎಂದು ಗೆಳೆಯ ರಾಮು ವಿವರಿಸಿದ.
ರಾಮು ಹೀಗೆ ವಿವರಿಸಿದಾಗ ನಾನು ಅದೇ ಆಗ ಕುಕ್ಕರಹಳ್ಳಿಯ ಸುತ್ತ ಒಂದು ಸುತ್ತು ಹಾಕಿಕೊಂಡು ಅವರ ಮನೆಗೆ ಹೋಗಿದ್ದೆ. ಟಿವಿಯಲ್ಲಿ ಧರಮಸಿಂಗ್ ಸರ್ಕಾರ ವಿಶ್ವಾಸಮತ ಯಾಚಿಸುವ ಸಂದರ್ಭದ ವಿವರಗಳು ಬರುತ್ತಿದ್ದವು. ಅಧಿಕಾರ ಎಂಬ ಮಾಂಸಕ್ಕೆ ಕಾದಿರುವ ಹದ್ದುಗಳು ಅನಿಸುತ್ತಾರೆ ಎರಡು ಪಾರ್ಟಿಯವರೂ ಅಂತ ರಾಮು ಹೇಳಿದ.

ಬ್ಯಾಂಕಿನಲ್ಲಿ ರಜತೋತ್ಸವ ಭಾಗ ೨

ಸಹೋದ್ಯೋಗಿ ಗಣೇಶ ಐತಾಳ ಸಿ ಏ ಐ ಐ ಬಿ ಫಾರ್ಮ್ ಅನ್ನು ತಂದು, ಊಟದ ಸಮಯದಲ್ಲಿ ಎಲ್ಲರಿಗೂ ಕೊಟ್ಟು ತಕ್ಷಣ ತುಂಬಿಕೊಡುವಂತೆ ಹೇಳಿದ್ದ. ಅವನು ಅಂದು ಮಾಡಿದ ಒಳ್ಳೆಯ ಕೆಲಸ ತಕ್ಷಣ ಯಾರಿಗೂ ಗೊತ್ತಾಗದಿದ್ದರೂ ಈಗ ಎಲ್ಲರೂ ಸಂತೋಷ ಪಡುವಂತಾಗಿದೆ. ಏಕೆ ಗೊತ್ತೇ? ಆಗಿನ್ನೂ ಓದು ಮುಗಿಸಿ ಬಂದಿದ್ದ ನಮ್ಮಗಳಿಗೆ ಸಿ ಏ ಐ ಐ ಬಿ ಪರೀಕ್ಷೆ ಬರೆಯಲು ಕಷ್ಟ ಆಗಲಿಲ್ಲ. ಆ ಪರೀಕ್ಷೆಯನ್ನು ಪಾಸು ಮಾಡಿದುದರಿಂದ ಎಕ್ಸ್ಟ್ರಾ ಇನ್ಕ್ರಿಮೆಂಟ್ ಬಂದಿತು ಮತ್ತು ಮುಂದೆ ಪ್ರಮೋಷನ್ ಪರೀಕ್ಷೆ ಬರೆಯಲು ಅನುಕೂಲವಾಯಿತು.

ಪುಸ್ತಕ ಬಿಡುಗಡೆ

ಸ್ನೇಹಿತರೆ, ಮಿತ್ರ ವಸುಧೇಂದ್ರ ಈ ವರ್ಷವೂ 3 ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. ಅವರು ಸಂಪದ ಬಳಗಕ್ಕೆ ವಿಶೇಷ ಸ್ವಾಗತ ಬಯಸಿದ್ದು ಹೀಗೆ:

ಕಾಲ ಪ್ರಯಾಣ - ಭಾಗ ೩

ನಾ ಕಂಡ ಎಲ್ಲವನ್ನೂ ದಾಖಲೆ ಮಾಡಿಕೊಳ್ಳಬೇಕೆಂದು ನಿರ್ಧಾರ ಮಾಡಿದೆ. ಆದರೆ ದಾಖಲೆ ಎಲ್ಲಿ ಮಾಡಲಿ? ಕೊನೆಗೆ ನನ್ನ ಶರ್ಟಿನ ಜೇಬಿನಲ್ಲಿದ್ದ ಪೆನ್ನೊಂದು ನೆನಪಿಗೆ ಬಂತು. ನಾನು ಮಲಗಿದ್ದ ಹಾಸಿಗೆಯ ಪಕ್ಕದಲ್ಲೇ ಬಿಚ್ಚಿಟ್ಟಿದ್ದ ಶರ್ಟ್ ಕೈಗೆತ್ತಿಕೊಂಡೆ. ಅದರೊಳಗಿನ ನನ್ನ ಚೆಕ್ ಸಹಿ ಮಾಡುವ ಪೆನ್ ಸ್ವಲ್ಪ ಒದ್ದೆಯಾಗಿದ್ದರೂ ನನ್ನ ಕೈ ಮೇಲೆ ಗೀಚಿ ನೋಡಿದಾಗ ಬರೆಯುತ್ತಿತ್ತು. ಬರೆಯಲು ಹಾಳೆಗಳೆಲ್ಲಿ? ಈ ಕಾಲದಲ್ಲಂತೂ ಹಾಳೆಗಳು ಸಿಗುವ ಹಾಗಿಲ್ಲ - ಇನ್ನೂ ನಾವು ಕಾಣುವಂತಹ ಹಾಳೆಗಳ ಅವಿಶ್ಕಾರವೇ ಆಗಿರಲಿಲ್ಲ! ಇವರು ಬರೆಯುತ್ತಿದ್ದದ್ದು ಕಲ್ಲು ಶಾಸನಗಳೆಂದು ನಮ್ಮ ಕಾಲದಲ್ಲಿಯೇ ನನ್ನ ಶೋಧನೆಯಿಂದ ಅರಿತಿದ್ದೆ. ಆ ಕಲ್ಲುಗಳ ಮೇಲೆ ಬರೆಯುವುದು ಕಷ್ಟವಷ್ಟೇ ಅಲ್ಲ, ಅಕಸ್ಮಾತ್ ನನ್ನ ಕಾಲಕ್ಕೆ ಹಿಂತಿರುಗುವ ಸಂದರ್ಭ ಬಂದರೆ ಹೇಗೆ ಕೊಂಡೊಯ್ಯುವುದು? ಕಡೆಗೆ ನನ್ನ ಬಿಳಿಯ ಪಂಚೆಯ ಮೇಲೆ ಬರೆಯುವ ನಿರ್ಧಾರ ಮಾಡಿದೆ. ಹಾಗೆ ಬರೆದರೆ ಅದನ್ನು ಉಡುವಹಾಗಿಲ್ಲ. ಮೇಲಾಗಿ ಆ ಪಂಚೆಯುಟ್ಟು ಹೊರಗೆ ಹೋಗಲಾಗದು. ಹಾಗಾಗಿ ಮೊದಲಿಗೆ ಈ ಕಾಲದ ವಸ್ತ್ರಗಳ ಏರ್ಪಾಡು ಮಾಡುವುದು ಸೂತ್ಕವೆನಿಸಿತು.

ಕಲಿಗಾಲ

ಕಲಿಗಾಲವಯ್ಯ ಇಂದಿಗಿದು ಕೆಟ್ಟಕಾಲ
ಬೇಸಿಗೆಕಾಲದಲ್ಲಿಯೂ ತೋರುವ ಛಳಿಗಾಲ
ನಿನ್ನೆಗೆ ಇಂದಾಗಿಹುದು ದುರ್ಭಿಕ್ಷದ ಕಾಲ

ಬ್ಯಾಂಕಿನಲ್ಲಿ ರಜತೋತ್ಸವ ಭಾಗ ೧

ಮೊದಲು ಶಾಲೆಗೆ ಹೋದ ನೆನಪು, ಕಾಲೇಜಿಗೆ ಹೋದ ನೆನಪು, ಕೆಲಸಕ್ಕೆ ಹೋದ ನೆನಪು, ವಾಸ್ತವ್ಯಕೆ ಹೊಸ ಊರು ಹೊಸ ಭಾಷಿಗರ, ನಡುವಿನ ಹೊಂದಾಣಿಕೆಯ ನೆನಪು, ಹೀಗೆ ಒಂದರ ಹಿಂದೊಂದರಂತೆ ಮೊದಲ ನೆನಪುಗಳ ಸರಮಾಲೆ ಸಾಗುತ್ತಲೇ ಇರುತ್ತದೆ. ತಮಾಷೆಯೆಂದರೆ ಹೊಂದಿಕೊಂಡೆ ಎಂದುಕೊಳ್ಳುವ ಸಮಯಕ್ಕೆ ಸರಿಯಾಗಿ ಕಾಲವನ್ನು ಮತ್ತೆ ಹೊಸ ಸ್ಥಿತಿಯ ಬದಲಾವಣೆಗೆ ಸರಿಪಡಿಸಿಕೊಳ್ಳಬೇಕಾಗುವುದು.

ಮಾನವೀಯತೆ

ಇಂದಿನ ಮಿಡ್‍ಡೇ ಪತ್ರಿಕೆಯಲ್ಲಿ ಬಂದ ಒಂದು ಸುದ್ದಿ.

[:http://ww1.mid-day.com/news/city/2006/january/129279.htm|ಈ ಕೊಂಡಿಗೆ ತಾಗಿಕೊಂಡು] ಸುದ್ದಿಯನ್ನು ಓದಿ.

'ಮುಕ್ತ' ಧಾರಾವಾಹಿ ಮತ್ತು ಚರ್ಚೆ

[:http://sampada.net/user/msanjay75|ಸಂಜಯ್]ರವರ ಬ್ಲಾಗಿನಲ್ಲಿ ಮುಕ್ತ ಧಾರಾವಾಹಿಯ ಬಗ್ಗೆ ದೊಡ್ಡದೊಂದು ಚರ್ಚೆಯೇ ನಡೆಯುತ್ತಿದೆ. ಹಿಂದೊಮ್ಮೆ ಆ ಪುಟವನ್ನು ನೋಡಿದ್ದೆನಾದರೂ ಇಂದು ಅವರು "ಹರಿ, 'ಮುಕ್ತ' ಬಗ್ಗೆ ನನ್ನ ಬ್ಲಾಗಿನಲ್ಲಿ ನಡೆಯುತ್ತಿರೋ ಚರ್ಚೆ ಫಾಲೋ‌ ಮಾಡ್ತಿದ್ದೀರ?" ಎಂದು ಮೇಯ್ಲ್ ಮಾಡಿದ್ದರು. ನೋಡಲು ಹೋದ್ರೆ ೧೧೪ ಕಾಮೆಂಟುಗಳು! ಯಾವುದನ್ನ ಓದೋದು? ಕೊನೆಗೆ ಕೊನೆಯಲ್ಲಿರುವ ಕೆಲವನ್ನು ನೋಡಿ ಬಂದೆ. ;-) ಕನ್ನಡ ದಾರಾವಾಹಿಗಳ ಬಗ್ಗೆ ಚರ್ಚೆ ಮನೆ ಮಂದಿ, ಅಕ್ಕ ಪಕ್ಕದವರ ಮಾತಿನಷ್ಟೇ ಅಲ್ಲದೆ [:http://msanjay.weblogs.us/entries/88/muktha-tn-seetharam|ಅಂತರ್ಜಾಲಕ್ಕೂ‌ ಧಾವಿಸಿರುವುದನ್ನ] ನೋಡಿ ಸಂಪದದಲ್ಲಿ ಕನ್ನಡದಲ್ಲಿ ನಡೆಯುತ್ತಿರುವ ಚರ್ಚೆಗಳನ್ನು ನೋಡಿ ಸಂತೋಷಗೊಂಡ ಲೇಖಕರೊಬ್ಬರಂತೆಯೇ ಆಯಿತು.