ಮಾನವೀಯತೆ
ಇಂದಿನ ಮಿಡ್‍ಡೇ ಪತ್ರಿಕೆಯಲ್ಲಿ ಬಂದ ಒಂದು ಸುದ್ದಿ.
[:http://ww1.mid-day.com/news/city/2006/january/129279.htm|ಈ ಕೊಂಡಿಗೆ ತಾಗಿಕೊಂಡು] ಸುದ್ದಿಯನ್ನು ಓದಿ.
ಪಾಪದ ಹಸುಳೆಗೆ ಮಲತಾಯಿ ಎಂತಹ ಶಿಕ್ಷೆ ಕೊಟ್ಟಿದ್ದಾಳೆ ಅಂತ.
ಆ ಮಗು ಧೃತಾಗೆ ಕಾಲ ಮೇಲೆ ಬರೆ ಹಾಕಿ ಚೆನ್ನಾಗಿ ಹೊಡೆದು ಕೈ ಮುರಿದಿದ್ದಾಳಂತೆ - ಮಲತಾಯಿ. ಆ ಮಗುವಿನ ತಂದೆ ಕ್ರೂರಿ. ಹೆಂಡತಿಯ ವ್ಯಾಮೋಹದಿಂದ ಮಗುವಿನ ಕಡೆ ನಿರ್ಲಕ್ಷ್ಯ ತೋರಿದ್ದಾನೆ. ಆ ಮಗುವಿನ ಅಣ್ಣ ತನ್ಮಯನನ್ನು ಹಾಸ್ಟೆಲ್‍ನಲ್ಲಿ ಬಿಟ್ಟಿದ್ದಾರಂತೆ. ಆ ಮಕ್ಕಳುಗಳ ತಾಯಿ ಸತ್ತು ಹೋಗಿದ್ದಾಳಂತೆ. ಕೆಲವರ ಅನಿಸಿಕೆಯಂತೆ ಈ ಹೆಣ್ಣಿನ ವ್ಯಾಮೋಹಕ್ಕೆ ಬಲಿಯಾದ ತಂದೆ ಮೊದಲ ಹೆಂಡತಿಯನ್ನು ಕೊಂದಿರಬಹುದು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಧೃತಾಗೆ ಸುತ್ತ ಮುತ್ತಲಿನವರ ಮಮತೆ ಕನಿಕರಗಳ ಸುರಿಮಳೆ. ಇನ್ನೂ ಆ ಮಗುವಿನ ಭವಿಷ್ಯ ಬದಲಾಗುತ್ತದೆ ಎಂದು ನಂಬಿರುವೆ. ಜನರಲ್ಲಿ ಮಾನವೀಯತೆ ಇನ್ನೂ ಇದೆ ಎಂಬುದಕ್ಕೆ ಇದೇ ಸಾಕ್ಷಿ.
Rating