ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಉಪ್ಪುಸೊಳೆ ಜೀರಿಗೆ ಬೆಂದಿ

Image

ಉಪ್ಪು ನೀರಿನಲ್ಲಿ ಶೇಖರಿಸಿದ ಸೊಳೆಯನ್ನು ತೆಗೆದು ಹೆಚ್ಚಿನ ಉಪ್ಪಿನಂಶ ಹೋಗುವಷ್ಟು ತೊಳೆದು ಸಣ್ಣಗೆ ತುಂಡು ಮಾಡಿ ಕೆಂಪು ಮೆಣಸಿನ ಹುಡಿ, ಬೆಲ್ಲ ಮತ್ತು ಸ್ವಲ್ಪ ನೀರನ್ನು ಹಾಕಿ ಬೇಯಿಸಿ. ತೆಂಗಿನ ತುರಿ, ಜೀರಿಗೆ ಮತ್ತು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ನಂತರ ಬೆಂದ ಸೊಳೆಗೆ ಸೇರಿಸಿ ಒಂದು ಕುದಿ ಕುದಿಸಿ. ಆಮೇಲೆ ಕರಿಬೇವು ಎಸಳಿನ ಜೊತೆ ಸಾಸಿವೆ ಒಗ್ಗರಣೆ ಕೊಡಿ.

ಬೇಕಿರುವ ಸಾಮಗ್ರಿ

ಹೆಚ್ಚಿದ ಉಪ್ಪುಸೊಳೆ ೧ ಕಪ್, ತೆಂಗಿನತುರಿ ೧ ಕಪ್, ಕೆಂಪು ಮೆಣಸಿನಹುಡಿ ೧/೪ ಚಮಚ, ಬೆಲ್ಲ ಚಿಕ್ಕ ಹೋಳು, ಉಪ್ಪು ರುಚಿಗೆ, ಜೀರಿಗೆ ೧/೨ ಚಮಚ, ಸಾಸಿವೆ ೧ ಚಮಚ, ಒಣಮೆಣಸು ೧, ಎಣ್ಣೆ ೧ ಚಮಚ, ಕರಿಬೇವು ೨ ಎಸಳು.

ಸ್ಟೇಟಸ್ ಕತೆಗಳು (ಭಾಗ ೧೧೭೮) - ವ್ಯತ್ಯಾಸ

ಆ ರಸ್ತೆಯ ತಿರುವಿನಲ್ಲಿ ಅವರು ನಿಂತಿರುತ್ತಾರೆ. ಅವರು ಪ್ರಶ್ನಿಸುತ್ತಾರೆ, ದಾರಿ ಬದಿಯಲ್ಲಿ ಹೋಗುತ್ತಿರುವ ನಾಯಿಗಳಿಗೆ ಯಾರಾದರೂ ತೊಂದರೆ ನೀಡಿದರೆ ಅವರು ತೊಂದರೆ ನೀಡಿದವರನ್ನು ವಿಚಾರಿಸುತ್ತಾರೆ, ಎಚ್ಚರಿಸುತ್ತಾರೆ, ಮುಂದೆ ಹಾಗೆ ಮಾಡದಂತೆ ಪಾಠವನ್ನು ಕಲಿಸ್ತಾರೆ, ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಲೇಖನಗಳನ್ನು ಬರೆಯುತ್ತಾರೆ. ಇದೇ ಕೆಲಸವನ್ನು ಹಲವು ಸಮಯದಿಂದ ಮಾಡಿಕೊಂಡೇ ಬಂದಿದ್ದಾರೆ.

Image

ಸಂಸದರು, ಶಾಸಕರ ವರ್ತನೆ ಪ್ರಶ್ನಾರ್ಹ : ಸಂಯಮ ಇರಲಿ

ರಾಜ್ಯ ವಿಧಾನಮಂಡಲ ಹಾಗೂ ದೇಶದ ಸಂಸತ್ತು ಒಂದೇ ದಿನ ಕಂಡು ಕೇಳರಿಯದ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗುವ ಮೂಲಕ ಚರ್ಚೆಗೆ ಆಹಾರವಾಗಿದೆ. ರಾಜ್ಯ ವಿಧಾನ ಪರಿಷತ್ತಿನಲ್ಲಿ ಹಿರಿಯ ಶಾಸಕ ಸಿ ಟಿ ರವಿ ಅವರು ಆಕ್ಷೇಪಾರ್ಹ ಎಂಬ ಆರೋಪದ ಸಂಬಂಧ ಅವರ ಮೇಲೆ ಬೆಳಗಾವಿಯ ಸುವರ್ಣಸೌಧದೊಳಗೇ ಹಲ್ಲೆ ಯತ್ನ ನಡೆದಿದೆ. ಕೊನೆಗೆ ಅವರ ಬಂಧನವೂ ಆಗಿದೆ.

Image

ವಿಶ್ವ ಧ್ಯಾನ ದಿನ… (ಭಾಗ 1)

ಡಿಸೆಂಬರ್ 21 - ಶನಿವಾರ. ಒತ್ತಡದ ಬದುಕಿನಲ್ಲಿ  ಮತ್ತೊಮ್ಮೆ ಧ್ಯಾನದ ಮಹತ್ವ ನೆನಪಿಸುತ್ತಾ… ಸರಳ ಧ್ಯಾನ… ಧ್ಯಾನದ ಸಾಮಾನ್ಯ ಅರ್ಥ, ಧ್ಯಾನದ ಸಹಜ ಸರಳ ಅಭ್ಯಾಸ, ಧ್ಯಾನದಿಂದ ದಿನನಿತ್ಯದ ಬದುಕಿನಲ್ಲಿ ಆಗುವ ಒಂದಷ್ಟು ಉಪಯೋಗ, ಧ್ಯಾನದಿಂದ ದೇಹ ಮತ್ತು ಮನಸ್ಸನ್ನು ಎಷ್ಟರಮಟ್ಟಿಗೆ ನಿಯಂತ್ರಿಸಬಹುದು, ಒಂದು ಸಣ್ಣ ವಿವರಣೆ.

Image

ಸ್ಟೇಟಸ್ ಕತೆಗಳು (ಭಾಗ ೧೧೭೭) - ಮೊಬೈಲ್

ಮೊಬೈಲ್ ಹಾಳಾಗಿದೆ ಸ್ವಾಮಿ ತುಂಬಾ ಹಾಳಾಗಿದೆ. ತುಂಬಾ ಅಗತ್ಯವಿದ್ದಾಗ ಒಂದಷ್ಟು ಸಮಸ್ಯೆ ಇದ್ದಾಗ ಪರಿಹಾರಕ್ಕೆ ಕರೆ ಮಾಡಿದರೆ ಯಾರೂ ಕರೆ ಸ್ವೀಕರಿಸೋದಿಲ್ಲ. ಇದು ಮೊಬೈಲ್ ಸಮಸ್ಯೆ ಆಗಿರಬಹುದು. ಯಾರಿಗೋ ಪರಿಹಾರ ಬೇಕಾದಾಗ ನಮ್ಮ ಮೊಬೈಲ್ ಗೆ ಕರೆ‌ ಬರುತ್ತೆ. ನಾವದನ್ನ ಸ್ವೀಕರಿಸಬೇಕು.‌ ಅವರಿಗೆ ಸಹಾಯವನ್ನು ಮಾಡಬೇಕು. ಆಗ ಮೊಬೈಲ್ ಯಾವುದೇ ತೊಂದರೆಯನ್ನು ಅನುಭವಿಸುವುದಿಲ್ಲ.

Image