ಸ್ಟೇಟಸ್ ಕತೆಗಳು (ಭಾಗ ೧೧೭೭) - ಮೊಬೈಲ್

ಸ್ಟೇಟಸ್ ಕತೆಗಳು (ಭಾಗ ೧೧೭೭) - ಮೊಬೈಲ್

ಮೊಬೈಲ್ ಹಾಳಾಗಿದೆ ಸ್ವಾಮಿ ತುಂಬಾ ಹಾಳಾಗಿದೆ. ತುಂಬಾ ಅಗತ್ಯವಿದ್ದಾಗ ಒಂದಷ್ಟು ಸಮಸ್ಯೆ ಇದ್ದಾಗ ಪರಿಹಾರಕ್ಕೆ ಕರೆ ಮಾಡಿದರೆ ಯಾರೂ ಕರೆ ಸ್ವೀಕರಿಸೋದಿಲ್ಲ. ಇದು ಮೊಬೈಲ್ ಸಮಸ್ಯೆ ಆಗಿರಬಹುದು. ಯಾರಿಗೋ ಪರಿಹಾರ ಬೇಕಾದಾಗ ನಮ್ಮ ಮೊಬೈಲ್ ಗೆ ಕರೆ‌ ಬರುತ್ತೆ. ನಾವದನ್ನ ಸ್ವೀಕರಿಸಬೇಕು.‌ ಅವರಿಗೆ ಸಹಾಯವನ್ನು ಮಾಡಬೇಕು. ಆಗ ಮೊಬೈಲ್ ಯಾವುದೇ ತೊಂದರೆಯನ್ನು ಅನುಭವಿಸುವುದಿಲ್ಲ. ಆದರೆ ನಮ್ಮ ಸಹಾಯಕ್ಕೆ‌ ಕರೆ ಮಾಡಿದರೆ ಒಮ್ಮೊಮ್ಮೆ ಒಂದೊಂದು ತೊಂದರೆಯಿಂದ ಕರೆ ಸ್ವೀಕೃತವಾಗುವುದೇ ಇಲ್ಲ. ಇದು ಯಾವ ಸಮಸ್ಯೆ ‌ಎಂದೇ ತಿಳಿಯುವುದಿಲ್ಲ. ಅಗತ್ಯ ಸಂದರ್ಭದಲ್ಲಿ ಮೊಬೈಲ್ ಹಾಳಾಗುತ್ತೆ. ಇದಕ್ಕೆ ಒಂದು ಕಂಪ್ಲೆಂಟ್ ಕೊಡಬೇಕು ಯಾರಲ್ಲಿ ತಿಳಿತಾನೇ ಇಲ್ಲ. ನೀವು ಕರೆ ಮಾಡುವಾಗಲೂ ಮೊಬೈಲ್ ಹಾಳಾಗುತ್ತಾ... ಇದಕ್ಕೆ ಪರಿಹಾರ ತಿಳಿಸಿ ಪುಣ್ಯ ಕಟ್ಟಿಕೊಳ್ಳಿ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ