ಸ್ಟೇಟಸ್ ಕತೆಗಳು (ಭಾಗ ೧೧೭೮) - ವ್ಯತ್ಯಾಸ

ಆ ರಸ್ತೆಯ ತಿರುವಿನಲ್ಲಿ ಅವರು ನಿಂತಿರುತ್ತಾರೆ. ಅವರು ಪ್ರಶ್ನಿಸುತ್ತಾರೆ, ದಾರಿ ಬದಿಯಲ್ಲಿ ಹೋಗುತ್ತಿರುವ ನಾಯಿಗಳಿಗೆ ಯಾರಾದರೂ ತೊಂದರೆ ನೀಡಿದರೆ ಅವರು ತೊಂದರೆ ನೀಡಿದವರನ್ನು ವಿಚಾರಿಸುತ್ತಾರೆ, ಎಚ್ಚರಿಸುತ್ತಾರೆ, ಮುಂದೆ ಹಾಗೆ ಮಾಡದಂತೆ ಪಾಠವನ್ನು ಕಲಿಸ್ತಾರೆ, ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಲೇಖನಗಳನ್ನು ಬರೆಯುತ್ತಾರೆ. ಇದೇ ಕೆಲಸವನ್ನು ಹಲವು ಸಮಯದಿಂದ ಮಾಡಿಕೊಂಡೇ ಬಂದಿದ್ದಾರೆ. ನಿನ್ನೆ ಬೆಳಿಗ್ಗೆ ಒಂದು ಘಟನೆ ನಡೆಯಿತು, ಅವರ ಊರಿನಲ್ಲಿ ಕೀಳು ಜಾತಿಯವನೆಂಬ ಕಾರಣಕ್ಕೆ ಒಬ್ಬನ ಮೇಲೆ ಹಲ್ಲೆ ಮಾಡಲಾಯಿತು. ಹಣ ಬಲ ಕಡಿಮೆ ಇದ್ದವರನ್ನು ಪ್ರಾಣಿಗಿಂತಲೂ ಕೀಳಾಗಿ ನಡೆಸಿಕೊಳ್ಳಲಾಯಿತು. ಆದರೆ ಅವರನ್ನು ಪ್ರಶ್ನಿಸುವವರು ಯಾರೂ ಇರಲಿಲ್ಲ. ಅವರ ಸಮಸ್ಯೆಗಳನ್ನು ಕೇಳುವವರು ಇರಲಿಲ್ಲ. ಸಾಮಾಜಿಕ ಮಾಧ್ಯಮ ಮಾತನಾಡಲೇ ಇಲ್ಲ. ಪ್ರಾಣಿಗಿಂತಲೂ ಮನುಷ್ಯ ಕೀಳಾಗಿದ್ದಾನೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ