ಉಪ್ಪುಸೊಳೆ ಜೀರಿಗೆ ಬೆಂದಿ
ಬೇಕಿರುವ ಸಾಮಗ್ರಿ
ಹೆಚ್ಚಿದ ಉಪ್ಪುಸೊಳೆ ೧ ಕಪ್, ತೆಂಗಿನತುರಿ ೧ ಕಪ್, ಕೆಂಪು ಮೆಣಸಿನಹುಡಿ ೧/೪ ಚಮಚ, ಬೆಲ್ಲ ಚಿಕ್ಕ ಹೋಳು, ಉಪ್ಪು ರುಚಿಗೆ, ಜೀರಿಗೆ ೧/೨ ಚಮಚ, ಸಾಸಿವೆ ೧ ಚಮಚ, ಒಣಮೆಣಸು ೧, ಎಣ್ಣೆ ೧ ಚಮಚ, ಕರಿಬೇವು ೨ ಎಸಳು.
ತಯಾರಿಸುವ ವಿಧಾನ
ಉಪ್ಪು ನೀರಿನಲ್ಲಿ ಶೇಖರಿಸಿದ ಸೊಳೆಯನ್ನು ತೆಗೆದು ಹೆಚ್ಚಿನ ಉಪ್ಪಿನಂಶ ಹೋಗುವಷ್ಟು ತೊಳೆದು ಸಣ್ಣಗೆ ತುಂಡು ಮಾಡಿ ಕೆಂಪು ಮೆಣಸಿನ ಹುಡಿ, ಬೆಲ್ಲ ಮತ್ತು ಸ್ವಲ್ಪ ನೀರನ್ನು ಹಾಕಿ ಬೇಯಿಸಿ. ತೆಂಗಿನ ತುರಿ, ಜೀರಿಗೆ ಮತ್ತು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ನಂತರ ಬೆಂದ ಸೊಳೆಗೆ ಸೇರಿಸಿ ಒಂದು ಕುದಿ ಕುದಿಸಿ. ಆಮೇಲೆ ಕರಿಬೇವು ಎಸಳಿನ ಜೊತೆ ಸಾಸಿವೆ ಒಗ್ಗರಣೆ ಕೊಡಿ. ಅನ್ನದೊಂದಿಗೆ ಸವಿಯಿರಿ.
- ಸಹನಾ ಕಾಂತಬೈಲು, ಮಡಿಕೇರಿ