ವಿಧ: ಬ್ಲಾಗ್ ಬರಹ
March 20, 2015
ದಶ ದಿಕ್ಕಿಗೂ ಹರಡಿದ
ಕರಿಯ ಮರಭೂಮಿ
ಬಟಾ ಬಯಲಲ್ಲಿ ನಿಂತಿದೆ
ಬೃಹತ್ ಕಹಿಬೇವು
ಭೂಗರ್ಭದಾಳಕೆ
ತಾಯಿ ಬೇರನು ಇಳಿಸಿ
ಅಂತರಾಳದ
ಜಲ ಹೀರಿ ಬೆಳೆದು
ಶೂನ್ಯವನಾವರಿಸಿ ಬೆಳೆದಿದೆ
ಗಗನಮುಖಿಯಾಗಿ
ಪ್ರಖರ ಬಿಸಿಲಿಗೆ
ಕಮರಿ ನಲುಗದೆ
ಎಲ್ಲ ಪ್ರತಿಕೂಲತೆಗಳಿಗೆ
ಶೆಡ್ಡು ಹೊಡೆದು ಛಲಬಿಡದ
ತ್ರಿವಿಕ್ರಮನಂತೆ ಬೆಂಬಿಡಿದು
ನೀರ ಸೆಲೆಯರಸಿ
ಮುಗುಳುಗಳರಳಿಸಿ
ಸವಾಲಿಗೆ ಮೈಯೊಡ್ಡಿ
ಬೆಳೆದು ನಿಲ್ಲುವ ಪರಿ
ಋತುರಾಜ ವಸಂತ
ಹರುಷದಿ ತಾ ಬಂದ
ಹಾಡಿದನುದ್ದೀಪನದಿ
ಮಧುರ ಪ್ರೇಮದ ರಾಗ
ರೆಂಬೆ ಕೊಂಬೆಗಳಲ್ಲಿ …
ವಿಧ: ಬ್ಲಾಗ್ ಬರಹ
March 19, 2015
ಬಾ ಕಾಲ ಬಾ ವಸಂತ ಕಾಲ
ನಿನಗಾಗಿ ಕಾಯುತಿದೆ ಮಾಮರಗಳು
ಸುಡು ಬಿಸಿಲಿನಲ್ಲಿ ಚಿಗುರುವ ಆಸೆ
ಪ್ರಕೃತಿ ಸೌಂದರ್ಯದ ಸೊಬಗು ಹೆಚ್ಚಿಸಲು
ಬಾ ಕಾಲ ಬಾ ವಸಂತ ಕಾಲ
ಕೋಗಿಲೆಯು ಕಾಯುತಿದೆ ನಿನಗಾಗಿ
ನೀ ಬಂದರೆ ತಾನೆ ಹಾಡಿ ಕುಣಿಯುವುದು
ಜನರ ಮನ ತಣಿಸುವದು
ರೈತನು ಕಾಯುವನು ನಿನಗಾಗಿ
ಬರಡಾದ ಭೂಮಿಯನು ಬಲಗೊಳಿಸುಲು
ನಿನ್ನ ಆಗಮನ ನಮಗೆ ಖುಷಿಯಾಗಿದೆ
ನಿನ್ನಬರುವಿಕೆಗೆ ಕಾಯುತಿದೆ ಜೀವ ಸಂಕುಲ
ನಿನ್ನಿಂದ ತಾನೆ ಭೂಮಿಯು ಹಚ್ಚ ಹಸಿರು
ಅದರಿಂದ ತಾನೆ ನಮಗೆ ಉಸಿರು
ಬಾ ಕಾಲ ಬಾ ವಸಂತ ಕಾಲ
…
ವಿಧ: ಬ್ಲಾಗ್ ಬರಹ
March 06, 2015
ಹೋಳಿ
ಇಂದು ಹೋಳಿ ಹಬ್ಬ, ಎಲ್ಲೆಲ್ಲೂ ಬಣ್ಣ ಎರಚಾಟ
ಮುಖಗಳಿಗೆಲ್ಲ ಚೆಹರೆ ಮರೆಯಾಗಿಸಿದ ಬಣ್ಣ,
ನೆಲಮೊಗಕ್ಕೂ ಬಣ್ಣದೋಕುಳಿಯ ಬಣ್ಣ
ಮುಗಿಲಿಗೆ ನೀಲಿ ಬಣ್ಣವಾದರೆ, ಬನಸಿರಿಗೆ ಹಸಿರುಡುಗೆಯ ಬಣ್ಣ
ಹೂಗಿಡಗಳಲ್ಲಿ ತರಹೇವಾರು ಬಣ್ಣ
ಬಣ್ಣವಿಲ್ಲದ ಬದುಕು ಊಹೆಗೂ ನಿಲುಕದಣ್ಣ
ನವಿಲು ಬಣ್ಣಗಳ ಯುವಕ –ಯುವತಿಯರು
ಖುಷಿಯಲ್ಲಿ ಮಿಂದ ಕಣ್ಣುಗಳಲ್ಲಿ
ರಸ್ತೆಯಂಗಳದಲ್ಲಿ ಹಾಕಿದ ಕಾರಂಜಿ ಸೆಟ್ಟುಗಳಲ್ಲಿ
ಸಾವಿರ ಸಾವಿರ ಸಂಖ್ಯೆಗಳಲ್ಲಿ,
ಕೈ ಮೇಲೆತ್ತಿ ಸಂಗೀತದ ಬೀಟ್ಸ್ ಗೆ ತಕ್ಕಂತೆ
ರೇನ್ ಡ್ಯಾನ್ಸ್ಸ್ ಗೆ…
ವಿಧ: ಬ್ಲಾಗ್ ಬರಹ
March 03, 2015
ಅರ್ಜುನ್ ಮೊದಲು ಈ ಪೇಪರ್ ಹೆಡ್ಲೈನ್ಸ್ ಓದಿ.
ಸರ್.... ಇದ್ಯಾವುದು ೨೫ ವರ್ಷ ಹಿಂದಿನ ಪೇಪರ್ ಕೊಡುತ್ತಿದ್ದೀರ... ಸರಿ.... ಪ್ರಖ್ಯಾತ ಉದ್ಯಮಿ ವೀರಾಸ್ವಾಮಿ ಮೊದಲಿಯಾರ್ ನಿಗೂಢ ಸಾವು.... ಯಾರು ಸರ್ ಇದು ವೀರಾಸ್ವಾಮಿ ಮೊದಲಿಯಾರ್? ಇದಕ್ಕೂ ಸೆಲ್ವಂಗು ಏನು ಸಂಬಂಧ? ಇದಕ್ಕೂ ನಮ್ಮ ಕೇಸಿಗೂ ಏನು ಸಂಬಂಧ?
ಅರ್ಜುನ್.... ಈ ವೀರಾಸ್ವಾಮಿ ಮೊದಲಿಯಾರ್ ಬೇರೆ ಯಾರೂ ಅಲ್ಲ... ಒಂದು ಕಾಲದಲ್ಲಿ ತಮಿಳುನಾಡಿನ ಪ್ರಸ್ತಿದ್ಧ VM Groups ನ ಸಂಸ್ಥಾಪಕ. ಆತನ ಆಸ್ತಿ ಸುಮಾರು ೫೦೦ ಕೋಟಿಗಳಷ್ಟು. ಆತ ಬರೀ…
ವಿಧ: ಬ್ಲಾಗ್ ಬರಹ
March 03, 2015
ಮನೆಯಲ್ಲಿ ಮದುವೆಯ ಕೆಲಸಗಳು ಭರದಿಂದ ಸಾಗಿದ್ದವು. ನಾನು ಮಾತು ಜಾನಕಿ ಇಬ್ಬರೂ ಹೆಚ್ಚು ಕಡಿಮೆ ಒಂದು ತಿಂಗಳು ಆಫೀಸಿಗೆ ಸರಿಯಾಗಿ ಹೋಗಿರಲಿಲ್ಲವಾದ್ದರಿಂದ ಮದುವೆಗೆ ಹೆಚ್ಚು ದಿನ ರಜೆ ತೆಗೆದುಕೊಳ್ಳಲು ಸಾಧ್ಯವಿರಲಿಲ್ಲ. ವಾರಾಂತ್ಯವೂ ಸೇರಿ ಐದು ದಿನ ರಜೆ ಮಾತ್ರ ಸಿಕ್ಕಿತ್ತು. ಮದುವೆಯ ಶಾಪಿಂಗ್ ಎಲ್ಲ ಮುಂಚೆಯೇ ಆಗಿದ್ದರಿಂದ ಅದ್ಯಾವುದರ ತಲೆನೋವು ಇರಲಿಲ್ಲ. ಕೇವಲ ಪತ್ರಿಕೆ ಹಂಚುವ ಕೆಲಸ ಒಂದು ಬಾಕಿ ಉಳಿದಿತ್ತು ಅಷ್ಟೇ.
ಎರಡು ದಿನ ಕಳೆದು ತ್ರಿವಿಕ್ರಂ ಕರೆ ಮಾಡಿ, ಅರ್ಜುನ್ ಮಿನಿಸ್ಟರ್ ಜೊತೆ…
ವಿಧ: ಬ್ಲಾಗ್ ಬರಹ
March 03, 2015
ಬೆಂಗಳೂರಿಗೆ ಬಂದು ಅಪ್ಪನಿಗೆ ಫೋನ್ ಮಾಡೋಣ ಎಂದುಕೊಂಡರೆ, ನಾನು ಅಪ್ಪನಿಗೆ ಹೇಳಿದ್ದ ಮಾತು ನೆನಪಿಗೆ ಬಂತು. ಇನ್ನೊಂದು ವಾರ ಬಿಟ್ಟು ಬರುತ್ತೇನೆ... ನೀವು ಯಾವುದಾದರೂ ಜಾಗದಲ್ಲಿರಿ ಎಂದು ಹೇಳಿದ್ದು ನೆನಪಾಯಿತು. ಛೇ... ಈಗ ಅವರು ಎಲ್ಲಿದ್ದಾರೋ ಗೊತ್ತಿಲ್ಲವಲ್ಲ... ಏನು ಮಾಡುವುದು ಎಂದು ಯೋಚಿಸುತ್ತಿದ್ದಾಗ, ಮನೆಯವರು ಆಚೆ ಹೋದಾಗ ಕೀ ಪಕ್ಕದ ಮನೆಯಲ್ಲಿ ಕೊಡುವುದು ವಾಡಿಕೆ ಆದ್ದರಿಂದ ಅದನ್ನೊಮ್ಮೆ ಪ್ರಯತ್ನ ಮಾಡೋಣ ಎಂದು ಮನೆಯ ಬಳಿ ಬಂದು ಪಕ್ಕದ ಮನೆಯಲ್ಲಿ ಕೇಳಿದಾಗ ನಮ್ಮ ಅದೃಷ್ಟಕ್ಕೆ ಕೀ…
ವಿಧ: ಬ್ಲಾಗ್ ಬರಹ
February 27, 2015
ಭಾಸ್ಕರನ್ ಬಂದು ಕೊಟ್ಟು ಹೋದ ಊಟ ಮುಗಿಸಿ ಸ್ವಲ್ಪ ಹೊತ್ತು ಅಲ್ಲೇ ಮನೆಯ ಹಿಂಭಾಗದಲ್ಲಿ ಇದ್ದ ಹೂದೋಟದಲ್ಲಿ ಸುತ್ತಾಡಿ ಒಳಗೆ ಬರುವಷ್ಟರಲ್ಲಿ ಮತ್ತೆ ಕಾಲಿಂಗ್ ಬೆಲ್ ಸದ್ದಾಯಿತು. ಬಹುಶಃ ತ್ರಿವಿಕ್ರಂ ಬಂದಿರಬಹುದು ಎಂದು ಬಾಗಿಲು ತೆರೆದಾಗ ತ್ರಿವಿಕ್ರಂ ಮತ್ತು ಭಾಸ್ಕರನ್ ನಿಂತಿದ್ದರು. ನಾನಿನ್ನು ಆಮೇಲೆ ಬರುತ್ತೇನೆ ಎಂದು ಭಾಸ್ಕರನ್ ಹೊರಟು ತ್ರಿವಿಕ್ರಂ ಒಳಬಂದರು.
ಜಾನಕಿಯನ್ನು ಅವರಿಗೆ ಪರಿಚಯ ಮಾಡಿಕೊಟ್ಟು ಮಾತಾಡಲು ಶುರುಮಾಡಿದೆವು.
ಅರ್ಜುನ್, ಅಂದು ಮುರುಗನ್ ನನ್ನು ಬಂಧಿಸಿದ ಮೇಲೆ…
ವಿಧ: ಬ್ಲಾಗ್ ಬರಹ
February 26, 2015
ಜಾನಕಿಯ ಮಾತು ನಿಜ ಎನಿಸಿತು.... ಏಕೆಂದರೆ ಯಾರನ್ನೂ ನಂಬುವ ಸ್ಥಿತಿಯಲ್ಲಿರಲಿಲ್ಲ.... ಸರಿ ಸರಿ ಎಂದು ಸುಮ್ಮನಾದೆ. ಕೂಡಲೇ ನನ್ನ ಮೊಬೈಲ್ ನೆನಪಿಗೆ ಬಂದು ಮೊಬೈಲ್ ಸ್ವಿಚ್ ಆನ್ ಮಾಡಿದೆ. ಆದರೆ ಅದರಲ್ಲಿದ್ದ ಸಿಮ್ ಕಿತ್ತೆಸೆದು ಬಿಟ್ಟಿದ್ದರು. ಅಷ್ಟರಲ್ಲಿ ಆಟೋ ಸಿಟಿ ಪ್ರವೇಶಿಸಿತು. ಯಾಕೋ ಬಸ್ ಸ್ಟಾಂಡ್ಗೆ ಹೋಗುವುದು ಸೇಫ್ ಎನಿಸಲಿಲ್ಲ. ಬಸ್ ನಿಲ್ದಾಣಕ್ಕೆ ಮುಂಚೆಯೇ ಆಟೋದವನಿಗೆ ನಿಲ್ಲಿಸಲು ಹೇಳಿದೆ. ಅವನು ಇನ್ನು ಬಸ್ ಸ್ಟಾಂಡ್ ವರ್ಲೆಯೇ.... ಎಂಗೆ ಎರಂಗಿನಾಲು ನೂತ್ತಿ ಅಂಬದುದಾ ಎಂದ.…
ವಿಧ: ಬ್ಲಾಗ್ ಬರಹ
February 25, 2015
ವಿದ್ಯಾ ವಿನಯ ಸ೦ಪನ್ನೇ ಬ್ರಾಹ್ಮಣೇ ಗವಿ, ಹಸ್ತಿನಿ: ಶುನಿ ಶೈವ ಸ್ವಪಾಕೇಚ ಪ೦ಡಿತಾ:ಸಮದರ್ಶಿನ: || ಎ೦ದು ಭಗವದ್ಗೀತೆ ಹೇಳುತ್ತದೆ.
ಒಬ್ಬ ವಿನಯ ಸ೦ಪನ್ನನಾದ ಬ್ರಹ್ಮನಿಷ್ಠ ಸದಾಚಾರಿ " ಬ್ರಾಹ್ಮಣ " ನಲ್ಲಿ, ಸಕಲರ ಮಾತೆಯಾದ " ಗೋವು ", ಬಲಶಾಲಿಯಾಗಿಯೂ ಸಸ್ಯಾಹಾರಿಯಾಗಿಯೇ ಇರುವ " ಆನೆ " ಸಿಕ್ಕಿದ್ದೆಲ್ಲವನ್ನೂ ತಿನ್ನುವ " ನಾಯಿ", ಅ೦ಥಹ ನಾಯಿಯನ್ನೇ ಕೊ೦ದು ತಿನ್ನುವ ಶ್ವಪಾಕ ಇವೆಲ್ಲರಲ್ಲಿಯೂ ಜ್ಞಾನಿಗಳು ಸಮದೃಷ್ತಿ ಉಳ್ಳವರಾಗಿ ಕೇವಲ ಅವರ/ಅವುಗಳಲ್ಲಿರುವ " ಆತ್ಮ" ವನ್ನು ಮತ್ರವೇ…