ಇಳೆಗಿಳಿದಿದೆ ನಾಕ
ಅದೋ, ಬಾಂದಳದಲಿ ಮಿನುಗುತ್ತಿದೆ
ಬಿಳಿ ಬೆಳ್ಳಿಯ ಚುಕ್ಕಿ,
ಬೆಳಗಾಯಿತು, ಬೆಳಕಾಯಿತು
ಎಂದುಲಿಯುತ್ತಿವೆ ಹಕ್ಕಿ.
ಕಪ್ಪಿದ್ದದು ಕೆಂಪಾಯಿತು
ಮೂಡಣದಂಗಳದಿ.
ರಂಗವಲ್ಲಿಯ ಕಂಡಾಯಿತು
ಮನೆ-ಮನೆಯಂಗಳದಿ.
ಎಳೆ ಕುಡಿಯಲಿ, ಗಿಡದೊಡಲಲಿ
ಹರಡಿದ ಇಬ್ಬನಿಯು.
ಕರಗುತ್ತಿವೆ ಎಳೆಬಿಸಿಲಿಗೆ
ಆ ಮುತ್ತಿನ ಹನಿ-ಹನಿಯು.
ಬಿರಿಯುತ್ತಿವೆ ಗಂಟಿಕ್ಕಿದ
ಮೊಗ್ಗವು ಮುನಿ ಮರೆತು.
ಹರಿಯುತ್ತಿದೆ ತಂಗಾಳಿಲಿ
ಹೂ-ಗಂಧವು ತಾ ಬೆರೆತು.
ಬೆಳ್ಳಕ್ಕಿಯು ಸಾಲುಗಟ್ಟಿ
ಹೊರಟಿದ್ದವು ವಲಸೆ.
ಏರುತ್ತಾ-ಇಳಿಯುತ್ತಾ ತೋರುತ್ತಿದ್ದವು
ತರ-ತರದ ವರಸೆ.
ಬೆಳ-ಬೆಳಗ್ಗೆ ಇಳೆಗಿಳಿದೆದೆ
ಆ ಹೊಸ ಹಸಿ ನಾಕ.
ಇದ ಕಂಡ ಕವಿಯಮನಸು
ಮಾತನಾಡದೆ ತಾನಾಯಿತು ಮೂಕ.
-- ಜಯಪ್ರಕಾಶ ನೇ ಶಿವಕವಿ
Rating
Comments
ಉ: ಇಳೆಗಿಳಿದಿದೆ ನಾಕ
In reply to ಉ: ಇಳೆಗಿಳಿದಿದೆ ನಾಕ by ಸಂಗನಗೌಡ
ಉ: ಇಳೆಗಿಳಿದಿದೆ ನಾಕ