ಇಳೆಯ ಸಂಭ್ರಮ
ನೋಡು ಇಳೆಯ ಕಳೆಯ,
ತೊರೆದು ಕತ್ತಲೆ ಕೊಳೆಯ...
ಕಾತರಿಸಿ ಕಾಯುತಿಹಳು,
ನೇಸರನ ಬರುವಿಕೆಯ.
ಎತ್ತೆತ್ತಲೆತ್ತಲು ಸುಳಿದು ತಂಪಿನ ಗಾಳಿ
ಎತ್ತರದ ಮರಗಳು ತಲೆಯ ಕುಣಿಸಿಹವಲ್ಲಿ
ಚಿತ್ತಕಷ್ಟು ಮುದಕೊಡುವ ಹಕ್ಕಿಗಳ ಚಿಲಿಪಿಲಿ
ಇಳೆಯ ರಾಣಿ ಹಸಿರನುಟ್ಟು ಚೆಲ್ಲು ನಗೆಯ ಚೆಲ್ಲಿ .
ನೋಡು ಇಳೆಯ ಕಳೆಯ,
ತೊರೆದು ಕತ್ತಲೆ ಕೊಳೆಯ...
ಎಲ್ಲೆಲ್ಲಿ ನೋಡಿದರು ಇಬ್ಬನಿ ಮಣಿ ಸಾಲು
ಬಿರಿಯಲಿರುವ ಮೊಗ್ಗುಗಳಿಗೆ ಸಂಭ್ರಮದ ಮೇರು
ಮೂಡಣದಲಿ ಮೂಡಿಬಂದ ಇಳೆರಾಣಿಯ ನಲ್ಲ
ಕೆನ್ನೆ ಕೆಂಪಗಾಗಿ ಸುತ್ತ ಕಂಪು ಬೀರಿತಲ್ಲ .
ನೋಡು ಇಳೆಯ ಕಳೆಯ,
ತೊರೆದು ಕತ್ತಲೆ ಕೊಳೆಯ...
ರಾಘವೇಂದ್ರ
Rating
Comments
ಉ: ಇಳೆಯ ಸಂಭ್ರಮ