ಕನ್ನಡಸಾಹಿತ್ಯ.ಕಾಂ ಮನವಿಗೆ ಪ್ರೊ|| ಯು ಆರ್ ರಾವ್ ರವರಿಂದ ಬೆಂಬಲ
ಕನ್ನಡಸಾಹಿತ್ಯ.ಕಾಂ ಗಣಕ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಸಗತಿ(ಸ್ಥಳೀಯ) ಭಾಷೆಗಳ ಪರಿಸರ ನಿರ್ಮಾಣಕ್ಕಾಗಿ, ಕನ್ನಡನಾಡಿನ ಎಲ್ಲ ಶಾಲೆಗಳಲ್ಲಿನ ಗಣಕಗಳಲ್ಲಿ, ಮಾರಾಟವಾಗುವ ಗಣಕಗಳಲ್ಲಿ ಹಾಗೂ ಎಲ್ಲ ಸೈಬರ್ ಕೆಫೆಗಳಲ್ಲಿ, ಕನ್ನಡದ ಉಚಿತ ತಂತ್ರಾಂಶಗಳಾದ 'ಬರಹ' ಹಾಗೂ 'ನುಡಿ' ಗಳನ್ನು ಕಡ್ಡಾಯವಾಗಿ ಅನುಸ್ಥಾಪಿಸಲು ಆದೇಶ ಹೊರಡಿಸುವಂತೆ, ರಾಜ್ಯ ಸರ್ಕಾರಕ್ಕೆ ಸಲ್ಲಿಸಲುದ್ದೇಶಿಸಿರುವ ಮನವಿ ಪತ್ರಕ್ಕೆ, ಈಗಾಗಲೇ, ನಾಡಿನ ವಿವಿಧ ಕ್ಷೇತ್ರಗಳ ಖ್ಯಾತನಾಮರು, ವಿದ್ಯಾರ್ಥಿಗಳು, ತಂತ್ರಾಂಶ ತಜ್ಞರು ಹಾಗೂ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ದೊರೆತಿದೆ.
ಈ ಸಾಲಿಗೆ, ಇದೀಗ ಹೊಸ ಸೇರ್ಪಡೆ, ದೇಶದ ಪ್ರಖ್ಯಾತ ಖಗೋಳ ವಿಜ್ಞಾನಿ, ಇಸ್ರೋದ ನಿರ್ದೇಶಕರಾಗಿ ನಿವೃತ್ತರಾಗಿರುವ, ಪ್ರೊ|| ಯು ಆರ್ ರಾವ್ ರವರು.
ಹಾಗೆಯೇ ಕನ್ನಡಚಿತ್ರರಂಗದ ಉದಯೋನ್ಮುಖ ಯುವನಟ, ಶ್ರೀ ವಿಜಯರಾಘವೇಂದ್ರ, ನಿರ್ಮಾಪಕ ಶ್ರೀಯುತ ಚಿನ್ನೇಗೌಡರು, ಮನವಿಗೆ ಬೆಂಬಲ ಸೂಚಿಸಿ ಸಹಿ ಹಾಕಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ, ಬೆಂಬಲ ಸೂಚಿಸಿರುವ ಹಲವು ಗಣ್ಯರ ಆಯೋಗದ ಸಮ್ಮುಖದಲ್ಲಿ, ಮನವಿಯನ್ನು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು.