ಕರೀಕೋಟು
ಮದುವೆ ಸಮಯದಲ್ಲಿ ಹೊಲಿಸಿದ "ಕರಿ ಕೋಟು" ನಂತರ ಯಾವುದೋ ಕಪಾಟಿನ ಮೂಲೆಯಲ್ಲಿ ಭದ್ರವಾಗಿ ಇತ್ತು. ಕಳೆದ ತಿಂಗಳು ಮನೆ ಶಿಫ್ಟ್ ಮಾಡುವಾಗ ಸಿಕ್ಕಿತು. ಸಾವಿರಾರು ರೂಪಾಯಿ ಖರ್ಚು ಮಾಡಿ ಹೊಲಿಸಿದ ಕೋಟನ್ನು ಮೂಲೆಯಲ್ಲಿ ಇಟ್ಟದ್ದಕ್ಕೆ ಮನೆಯಾಕೆಗೆ ಸಿಕ್ಕಾಪಟ್ಟೆ ಬೈದು (ಮನಸ್ಸಲ್ಲೇ), ನೀಟಾಗಿ ಇಸ್ತ್ರಿ ಮಾಡಿ ರೆಡಿ ಮಾಡಿ ಇಟ್ಟಿದ್ದೆ. ಈ ದಿನ ಬೆಳಗ್ಗೆ ಹಾಕಿಕೊಂಡು ಟ್ರಿಮ್ಮಾಗಿ ಆಫೀಸಿಗೆ ಹೊರಟೆನು.
ಆಶ್ಚರ್ಯ!
ಎದುರು ಸಿಕ್ಕವರೆಲ್ಲಾ ನಮಸ್ಕಾರ ಮಾಡುತ್ತಿದ್ದರು. ನನ್ನ ಲಟಾರಿ ಸ್ಕೂಟರ್‌ಗೆ ಭಾರಿ ಭಾರಿ ಕಾರಿನವರೇ ಸೈಡು ಕೊಟ್ಟು ಮುಂದೆ ಹೋಗಲು ಬಿಡುತ್ತಿದ್ದರು.
ಮಂತ್ರಿಗಳ ಕಾರು! ... ರಿವರ್ಸ್ ಸಾಂಗ್ ಹೇಳುತ್ತಾ ಹಿಂದೆ ಹೋಯಿತು!
ಸಿಗ್ನಲ್‌ನಲ್ಲಿ ನಿಂತಿದ್ದಾಗ, ಎಲ್ಲರ ಮುಗುಳ್ನಗೆ, ಸಲ್ಯೂಟ್, ಸಲಾಮು!
ಒಬ್ಬಾತ-"ಸರ್, ನೀವು ಯಾವ ದಾರಿಯಲ್ಲಿ ಕೋರ್ಟಿಗೆ ಹೋಗುತ್ತೀರಿ" ಅಂದ. "ಯಾವ ಕೋರ್ಟು?" ಅಂದೆ ನಾನು. ಆತ "ನೀವು ವಕೀಲರಲ್ಲವಾ?" ಅಂದಾಗಲೇ ಈ ಕರೀ ಕೋಟಿನ ಮಹತ್ವ ಗೊತ್ತಾಯಿತು. ಹೀಗೋ ಕತೆ, ಸ್ವಲ್ಪ ಆಟವಾಡಿಸೋಣ ಎಂದು, ಸ್ಕೂಟರ್ ಅಲ್ಲೇ ಸೈಡ್ ಸ್ಟ್ಯಾಂಡ್ ಹಾಕಿ ನಿಲ್ಲಿಸಿ, "ಏನಲೇ? ನಾನು ವಕೀಲನಲ್ಲವಾ? ಕಣ್ಣಿಗೆ ಪರೆ ಬಂದಿದ್ಯಾ .., ಈ ಕರಿಕೋಟು ಕಣ್ಣಿಗೆ ಕಾಣಿಸಲಿಲ್ವಾ?" ಎಂದು ಎರಡು ಬಾರಿಸಿದೆ. "ಸರ್ ದಮ್ಮಯ್ಯ, ಹಾಗೆ ಕೇಳಿದ್ದಲ್ಲಾ.. ನಾನು ನೀವು ಹೋಗುವ ಹಾದಿ ಬಿಟ್ಟು ಬೇರೆ ರಸ್ತೆಯಲ್ಲಿ ಹೋಗಲು ಕೇಳಿದ್ದು..ದಮ್ಮಯ್ಯ ಹೊಡಿಬ್ಯಾಡಿ ಸರ್. ಇನ್ಮೇಲೆ ಕೇಳೊಲ್ಲ" ಅಂದ. ಅಯ್ಯೋ ಪಾಪ ಅನ್ನಿಸಿದರೂ ಇನ್ನೆರಡು ಬಾರಿಸಿ, ತಿರುಗಿ ನೋಡುತ್ತೇನೆ, ಟ್ರಾಫಿಕ್ ಪೋಲಿಸ್ ಕೈಮುಗಿದು ನಿಂತಿದ್ದಾನೆ!
"ಏನೋ..ಫೈನ್ ಕಟ್ಟಬೇಕಾ?" "ಬೇಡ ಸರ್, ನೀವು ಹೋಗಿ ಸರ್. ಅವನನ್ನ ನಾನು ವಿಚಾರಿಸಿಕೊಳ್ಳುತ್ತೇನೆ" ಅಂದ. " ಎಷ್ಟು ಸಲ ನನಗೆ ಫೈನ್ ಹಾಕಿದ್ದಿ ..?" ಹೆಲ್ಮೆಟ್ ಅನ್ನು ದೂರ ಎಸೆದು(೩೦ ವರ್ಷದಿಂದ ಹೆಲ್ಮೆಟ್ ಹಾಕಿ ಹಾಕಿ ಸಾಕಾಗಿ ಹೋಗಿತ್ತು), " ಈಗ ಹಾಕೋ ಫೈನ್" ಅಂದೆ. ಓಡಿ ಹೋಗಿ ಹೆಲ್ಮೆಟ್ ತಂದು ನನಗೆ ಕೊಟ್ಟು " ಸಾರಿ ಸರ್, ಕ್ಷಮಿಸಿ ಸಾರ್, ತಪ್ಪಾಯ್ತು ಇನ್ಮೇಲೆ ದಂಡ ಹಾಕೊಲ್ಲಾ" ಎಂದು ಉದ್ದಂಡ ನಮಸ್ಕರಿಸಿದ. ಹೆಲ್ಮೆಟ್ ಪುನಃ ತಂದು ಕೊಟ್ಟ ಕೋಪಕ್ಕೆ ಅದರಿಂದಲೇ ಎರಡು ಬಾರಿಸಿ, ಸುತ್ತಲೂ ನೋಡಿದೆ.
ನನ್ನ ಸ್ಕೂಟರ್ ಸ್ಟಾರ್ಟ್ ಆಗುವುದು ಸ್ವಲ್ಪ ತಡವಾದರೆ, "ಪೇಂ ಪೇಂ.." "ಪೋಂ..ಪೋಂ" ಎಂದು ಹಾರ್ನ್ ಬಾರಿಸಿ, ಸಹಸ್ರನಾಮ ಮಾಡುವ ವಾಹನ ಸವಾರರು ಈವಾಗ ಸೈಲೆಂಟಾಗಿ ನೋಡುತ್ತಿದ್ದರು.
ಆಗ ಸುಮಾರು ೧೦೦-೧೫೦ ಜನ ಹೆಲ್ಮೆಟ್ ಧರಿಸಿ, ಲಾಠಿ ಬೀಸುತ್ತಾ ಬಂದ ಪೋಲೀಸರು, ನನಗೆ ತೊಂದರೆ ಕೊಟ್ಟದ್ದಕ್ಕೆ ಟ್ರಾಫಿಕ್‌ನವನನ್ನು ಅರೆಸ್ಟ್ ಮಾಡಿ, ಉಳಿದ ವಾಹನ ಸವಾರರಿಗೆ ಲಾಠೀ ಚಾರ್ಜ್ ಮಾಡಿ, ನನಗೆ ಹೋಗಲು ದಾರಿ ಮಾಡಿ ಕೊಟ್ಟರು. ಆ ಕೂಡಲೇ ಹೋದರೆ ಹೇಗೆ? ಕರಿಕೋಟಿನ ಮರ್ಯಾದೆ ಪ್ರಶ್ನೆ.. ಸ್ಕೂಟರ್ ಸ್ಟಾರ್ಟ್ ಮಾಡಿ, ಒಂದು ಕೈಯಲ್ಲಿ ಸ್ಕೂಟರ್ ಬಿಡುತ್ತಾ, ಇನ್ನೊಂದು ಕೈಯಿಂದ ಮೊಬೈಲ್ ತೆಗೆದು ಮನೆಯಾಕೆಗೆ ರಿಂಗ್ ಮಾಡಿ ಅದೇ ಸಿಗ್ನಲ್‌ಗೆ ಸುತ್ತು ಹಾಕುತ್ತಿದ್ದೆ. ೧೦೦+ ಪೋಲೀಸರು ನನ್ನ ಹಿಂದೆ ಓಡುತ್ತಾ ಸುತ್ತು ಬರುತ್ತಿದ್ದರು.. ಮನೆಯಾಕೆ ಫೋನ್ ಎತ್ತಿದಾಗ ಅಂದೆ- "ಏನಂದೀ ನೀನು.. ಕರಿಕೋಟು ಭಿಕ್ಷುಕರಿಗೆ ಕೊಟ್ಟರೂ ತೆಗೆದುಕೊಳ್ಳುವುದಿಲ್ಲಾಂತಲ್ವಾ? ಟಿ.ವಿ. ಆನ್ ಮಾಡಿ ನ್ಯೂಸ್ ಚಾನಲ್ ನೋಡು.. ನಿನಗೇ ಗೊತ್ತಾಗುತ್ತೆ ಕರಿಕೋಟಿನ ಮಹತ್ವ"
ಆಕೆ ಏನಂದ್ಲು ಗೊತ್ತಾ........
............
"ಆ ಪರ್ಕಟ್ ಕೋಟ್ ಎದುರು ನಿಂತು ಏನ್ರೀ ಗೊಣಗುತ್ತಿದ್ದೀರಿ? ಆಫೀಸಿಗೆ ಲೇಟಾಯ್ತು..ಬೇಗ ಹೊರಡಿ"
Comments
ಉ: ಕರೀಕೋಟು
In reply to ಉ: ಕರೀಕೋಟು by kavinagaraj
ಉ: ಕರೀಕೋಟು
ಉ: ಕರೀಕೋಟು
In reply to ಉ: ಕರೀಕೋಟು by Jayanth Ramachar
ಉ: ಕರೀಕೋಟು
ಉ: ಕರೀಕೋಟು
In reply to ಉ: ಕರೀಕೋಟು by manju787
ಉ: ಕರೀಕೋಟು
ಉ: ಕರೀಕೋಟು
In reply to ಉ: ಕರೀಕೋಟು by padma.A
ಉ: ಕರೀಕೋಟು
ಉ: ಕರೀಕೋಟು
In reply to ಉ: ಕರೀಕೋಟು by kamath_kumble
ಉ: ಕರೀಕೋಟು
ಉ: ಕರೀಕೋಟು
In reply to ಉ: ಕರೀಕೋಟು by venkatb83
ಉ: ಕರೀಕೋಟು
In reply to ಉ: ಕರೀಕೋಟು by Premashri
ಉ: ಕರೀಕೋಟು
In reply to ಉ: ಕರೀಕೋಟು by venkatb83
ಉ: ಕರೀಕೋಟು
ಉ: ಕರೀಕೋಟು
In reply to ಉ: ಕರೀಕೋಟು by partha1059
ಉ: ಕರೀಕೋಟು
ಉ: ಕರೀಕೋಟು
In reply to ಉ: ಕರೀಕೋಟು by gopinatha
ಉ: ಕರೀಕೋಟು
ಉ: ಕರೀಕೋಟು
In reply to ಉ: ಕರೀಕೋಟು by Ambikapraveen
ಉ: ಕರೀಕೋಟು
In reply to ಉ: ಕರೀಕೋಟು by ಗಣೇಶ
ಉ: ಕರೀಕೋಟು
In reply to ಉ: ಕರೀಕೋಟು by Shreekar
ಉ: ಕರೀಕೋಟು
ಉ: ಕರೀಕೋಟು
In reply to ಉ: ಕರೀಕೋಟು by sathishnasa
ಉ: ಕರೀಕೋಟು
ಉ: ಕರೀಕೋಟು
In reply to ಉ: ಕರೀಕೋಟು by makara
ಉ: ಕರೀಕೋಟು
In reply to ಉ: ಕರೀಕೋಟು by makara
ಉ: ಕರೀಕೋಟು
In reply to ಉ: ಕರೀಕೋಟು by ಗಣೇಶ
ಉ: ಕರೀಕೋಟು