ಕಳೆದ ಎರಡುವಾರಗಳಲ್ಲಿ ನಾನು ಓದಿದ ಪುಸ್ತಕಗಳು

ಕಳೆದ ಎರಡುವಾರಗಳಲ್ಲಿ ನಾನು ಓದಿದ ಪುಸ್ತಕಗಳು

೧) ಮಾಸ್ತಿ ವೆಂಕಟೇಶ ಅಯ್ಯಂಗಾರರು ಮಹಾಭಾರತದ ಪಾತ್ರಗಳು , ಕಥೆ , ಮತ್ತು ಸಂದೇಶದ ವಿಶ್ಲೇಷಣೆ ಮಾಡಿರುವ 'ಭಾರತತೀರ್ಥ ' ಎ೦ಬ ಪುಸ್ತಕವನ್ನು ಡಿಜಿಟಲ್ ಲೈಬ್ರರಿಯಿಂದ ಇಳಿಸಿಕೊಂಡು ಓದಿದೆ . ಇದು ಓದಲೇಬೇಕಾದ ಒಳ್ಳೇ ಪುಸ್ತಕ . ಇಲ್ಲಿ ಸುಮಾರು 350 ಪುಟಗಳಿವೆ. ಇಲ್ಲಿ ಧರ್ಮ ಮತ್ತು ನಾವು ಬಾಳಬೇಕಾದ ರೀತಿಯ ಬಗ್ಗೂ ಇದೆ. ಅ ಪುಸ್ತಕದ ಜತೆಗೇ ಮಾಸ್ತಿಯವರ ಇನ್ನೆರಡು ಪುಸ್ತಕಗಳನ್ನು ಜೋಡಿಸಿಬಿಟ್ಟಿದ್ದಾರೆ . ಒಂದು ಅವರ ಬಿಡಿ ಅನಿಸಿಕೆಗಳ ಪುಸ್ತಕ - 'ಚಿಂತನ' ಮತ್ತು ಅವರು ನಾನಾ ಪುಸ್ತಕಗಳಿಗೆ ಬರೆದ ಮುನ್ನುಡಿಗಳ ಸಂಕಲನ ಪುಸ್ತಕ - 'ಪೂಜನ' . ಇವೆರಡನ್ನು ಇನ್ನೂ ಓದಿಲ್ಲ .

೨) ಹಳ್ಳಿಯ ಚಿತ್ರಗಳು - ಇದು ಗೋರೂರು ರಾಮಸ್ವಾಮೀ ಅಯ್ಯಂಗಾರರ ಹಳ್ಳಿಯ ಜನಜೀವನದ ಸರಸಮಯ ಬರಹಗಳ ಸಂಗ್ರಹ . ಇದೂ ತುಂಬ ಚೆನ್ನಾಗಿದೆ.

೩) ಕಾಡಿನ ಕಥೆಗಳು - ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಯವರು ಭಾವಾನುವಾದ ಮಾಡಿರುವ ಬೇಟೆ ಮತ್ತು ಕಾಡಿನ ಕುರಿತಾದ ಕತೆಗಳಿವೆ . ಮೂಲ : ಕೆನೆಥ್ ಆಂಡರ್ಸನ್ ಇದೂ ತುಂಬ ಚೆನ್ನಾಗಿದೆ .

ಎರಡು ವಾರದ ಸಮಯದಲ್ಲಿ ಇನ್ನೂ ಹೆಚ್ಚು ಓದಿರಬೆಕಾಗಿದ್ದ ನಾನು www.haridasa.in ಗೆ ಒಂದು ನೂರಕ್ಕೂ ಹೆಚ್ಚು ಪುರಂದರದಾಸರ ಹಾಡುಗಳನ್ನು ಸೇರಿಸುವದರಲ್ಲಿ ತೊಡಗಿದ್ದರಿಂದ ಓದಿನಲ್ಲಿ ಕೊಂಚ ಹಿಂದೆ ಬಿದ್ದೆನು .

Rating
No votes yet

Comments