ಗೂಗಲ್ ಮೈಲಿನಲ್ಲಿ (ಜಿ-ಮೈಲ್) ನೀವಿದನ್ನು ಗಮನಿಸಿದ್ದೀರಾ?

ಗೂಗಲ್ ಮೈಲಿನಲ್ಲಿ (ಜಿ-ಮೈಲ್) ನೀವಿದನ್ನು ಗಮನಿಸಿದ್ದೀರಾ?

     ಗೂಗಲ್ ಮೈಲಿನಲ್ಲಿ (ಜಿ-ಮೈಲ್) ಅಳಿಸಿದ ಪತ್ರಗಳನ್ನು ಹಾಕುವ "ಕಸದ ಬುಟ್ಟಿ"ಯನ್ನು (ಟ್ರಾಶ್ ಫೋಲ್ಡರ್!) ಒಮ್ಮೊಮ್ಮೆ ಭೇಟಿ ನೀಡಿ, ಅದನ್ನು ಗಮನಿಸುವುದು ನನ್ನ ಅಭ್ಯಾಸ. "ಇದೇನಪ್ಪ, ಇದೂ ಒಂದು ಅಭ್ಯಾಸವೇ?" ಅಂತ ಹುಬ್ಬೇರಿಸಬೇಡಿ. ಸರಿಯಾಗಿ ಗಮನಿಸದಿದ್ದಲ್ಲಿ, ಅದನ್ನೊಮ್ಮೆ (ಟ್ರಾಶ್ ಫೋಲ್ಡರ್ ಒಳಗೆ ಹೋಗಿ) ಗಮನಿಸಿ. ಅಳಿಸಿದ ಪತ್ರಗಳ ಪಟ್ಟಿಯ ಮೇಲೆ ಒಂದಷ್ಟು "ಪುನರ್ಬಳಕೆಯ ಬಗ್ಗೆ ಮಾಹಿತಿಗಳು" ಆಗಾಗ ಮೂಡಿ ಬರುತ್ತಿರುತ್ತವೆ. ಕೆಲವೊಂದು ಅಂಶಗಳು ನಿಜಕ್ಕೂ ನಮ್ಮನ್ನು "ಹೌದಾ?" ಅಂತ ಚಿಂತಿಸುವಂತೆ ಮಾಡುತ್ತವೆ. ಇದು ಗೂಗಲ್ ಅವರ "ಪರಿಸರ ಕಾಳಜಿ"ಯನ್ನು ಮೂಡಿಸುವ ಪ್ರಯತ್ನಗಳಲ್ಲಿ ಒಂದಂತೆ.

     ಉದಾಹರಣೆಗೆ ಈ ಕೆಳಗಿನ ಮೂರು "ಪುನರ್ಬಳಕೆಯ ಮಾಹಿತಿ"ಗಳನ್ನು ಓದಿ ನೋಡಿ:
೧. ಮೂರು ಅಡಿ ಎತ್ತರದ ದಿನಪತ್ರಿಕೆಯ ರಾಶಿಯನ್ನು ಪುನರ್ಬಳಕೆ ಮಾಡುವುದರಿಂದ ಒಂದು ಸಾಮಾನ್ಯ ಎತ್ತರದ ಮರವನ್ನು ಉಳಿಸಬಹುದು.
೨. ಪುನರ್ಬಳಕೆಯ ಕಾಗದವನ್ನು ತಯಾರಿಸಲು ಮಾಮೂಲು ಕಾಗದವನ್ನು ತಯಾರಿಸುವಾಗ ಬಳಸುವುದಕ್ಕಿಂತ 66% ಕಡಿಮೆ ಶಕ್ತಿ (ವಿದ್ಯುತ್ ಇತ್ಯಾದಿ) ಮತ್ತು ನೀರು ಸಾಕು.
೩. "ಅಲ್ಯೂಮಿನಿಯಮ್"ನ್ನು ಎಷ್ಟು ಬಾರಿ ಬೇಕಾದರೂ ಪುನರ್ಬಳಕೆ ಮಾಡಬಹುದು.

     ಇದೇ ರೀತಿಯ ಇನ್ನೂ ಹಲವಾರು ಉಪಯುಕ್ತ ಮಾಹಿತಿಗಳು ಆಗಾಗ ಕಾಣಸಿಗುತ್ತವೆ. ಇನ್ನೊಮ್ಮೆ ನಿಮ್ಮ "ಜಿ-ಮೈಲ್" ತೆರೆದಾಗ ಒಮ್ಮೆ ಭೇಟಿ ನೀಡಿ, ಗಮನಿಸಿ ನೋಡಿ. ಹೇಗನ್ನಿಸಿತು ಅಂತ ಹೇಳಿ. ಇದಕ್ಕೇ ಅಲ್ಲವೇ ಅನ್ನೋದು "ಕಸದಿಂದ ರಸ" ಅಂತ?

Rating
No votes yet

Comments