*ಜಾನಪದಶೈಲಿಯ ಹಳ್ಳಿಯ ಹಾಡು*

*ಜಾನಪದಶೈಲಿಯ ಹಳ್ಳಿಯ ಹಾಡು*

*ಪ್ರೇಮಿಗಳ ಹಾಡು*

ಮಾಡಿಮ್ಯಾಲೆನಿಂತುಕೊಂಡು ಮಲ್ಗೆಹೂವಮುಡ್ದುಕೊಂಡು
||ಮೆಲ್ಲಮೆಲ್ಲಗೆ ನಡಿಯೋಳೆ ಮುದ್ದಾದಮೊಗದವಳೆ ನೀನಾರೆ||
ಕೊಡವ ಹಿಡಿದು ಕೆರೆಕಡೆಗೆ ಹೊರಟವಳೆ ಕನಕಾಂಗಿ ನಾ ಬರುವೆ ನಿಲ್ಲೆ ಕೆರೆತನಕ ||ಪಲ್ಲವಿ||

ಕಿಲಕಿಲನೆ ನಗುತ್ತಾ ನೀರನ್ನು ತುಂಬುತ್ತಾ ||ಮನಸನ್ನು ಕಲಕಿದವಳೆ ನೀನಾರೆ||
ನನಚಲುವೆ||ಎದೆಯ ಕದವನ್ನು ತೆಗೆದವಳೆ ನೀನಾರೆ|| "ಮಾ"

ಅಂದಾನೆ ನಾನೆಂದು ಚಂದಾನೆ ತಾನೆಂದು ||ಬಿಂಕದಲಿ ನಿಂತವಳು ನೀನ್ಯಾರೆ
ನನಚಲುವೆ||ಬಾವದ ಚಿಲುಮೆ ಚಿಮ್ಮಿಸಿದವಳೆ ನೀನ್ಯಾರೆ||"ಮಾ"

ಮಂದಹಾಸ ಬೀರುತ್ತಾ ತುಂಬುನಗೆ ಚಲ್ಲುವ ||ಚಂದಿರನ ಮೊಗದವಳೆ ನೀನ್ಯಾರೆ
ನನ ಚಲುವೆ||ಮನ ಮಂದಿರದಿ ಬೆಳಕ ತಂದವಳೆ ನೀನ್ಯಾರೆ || "ಮಾ"

ಇಳಿಬಿದ್ದ ಜಡೆಯವಳೆ ಗುಳಿಬಿದ್ದ ಕೆನ್ನೆಯವಳೆ ||ಸುಳಿದು ಸುಳಿದೆನ್ನ ಕಾಡೋಳೆ
ನನ ಚಲುವೆ||ಸುಮದಂತೆ ಪರಿಮಳ ತಂದವಳೆ ನೀನ್ಯಾರೆ||"ಮಾ"

ನವಿಲಂತೆ ಕುಣಿಯೋಳೆ ಮಿಚಂತೆ ಹೊಳೆಯೊಳೆ||ನಾಟ್ಯದ ರಾಣಿ ನೀನ್ಯಾರೆ
ನನ ಚಲುವೆ ಎದೆಯಾಗ ತಾಳ ತುಂಬಿದವಳೆ ನೀನ್ಯಾರೆ ||"ಮಾ"

ಮನವೆಲ್ಲ ಹಸಿರಾಗಿ ಜೀವಕ್ಕೆ ಉಸಿರಾದ ||ಕನಸಿನ ಕಣ್ಮ್ಣಣಿ ನೀನ್ಯಾರೆ
ನನ ಚಲುವೆ ಇರುಳಿಗೆ ಜೊತೆಯಾಗಿ ಬಂದವಳೆ ನೀನ್ಯಾರೆ||"ಮಾ"

ಮನಸಿನ ಚಿತ್ತಾರ ಪಡೆದು ನೀ ಆಕಾರ||ನನಗಾಗಿ ಎಂದು ನೀ ಬರುವೆ
ನನ ಚಲುವೆ ಕಾಯಲಾರೆ ನಾ ಬಳಿ ಬಾರೆ||ನನಗಾಗಿ ಇಂದು ನೀ ಬಾರೆ "ಮಾ"

ಕೃಷ್ಣಮೊರ್ತಿ ಅಜ್ಜಹಳ್ಳಿ

Rating
No votes yet