ನಮ್ಮೂರ ಬಾಗಿಲಿಗೆ ಇವರದ್ದೆಂತ ಕಾವಲು?

ನಮ್ಮೂರ ಬಾಗಿಲಿಗೆ ಇವರದ್ದೆಂತ ಕಾವಲು?

 

ನಮಸ್ಕಾರ ಗೆಳೆಯರೆ. ತುಂಬಾ ವೇಗವಾಗಿ ಬೆಳೆಯುತ್ತಿರುವ ನಮ್ಮ ಬೆಂಗಳೂರಿನಲ್ಲಿ ಶೇಕಡವಾರು ಅಪರಾಧ ಹೆಚ್ಚುತ್ತಲೇ ಇದೆ. ಇಂತಹ ಅಪರಾಧಗಳನ್ನು ತಡೆಯುವುದಕ್ಕೆಂದೇ ಅನೇಕ ಖಾಸಗಿ ಕಂಪನಿಗಳು ಭದ್ರತಾ ಸಿಬ್ಬಂದಿಯನ್ನು ಒದಗಿಸುತ್ತಾರೆ. ಇಂತಹಾ ಸಿಬ್ಬಂದಿಯನ್ನೇ ನಮ್ಮ ಎಲ್ಲಾ ಕಾರ್ಪೊರೇಟ್ ಕಂಪನಿಗಳು, ದೊಡ್ಡ ದೊಡ್ಡ ಮಾಲ್ ಗಳು ಗುತ್ತಿಗೆ ಪಡೆಯುತ್ತಾರೆ.

ಇಂತಹ ಭದ್ರತಾ ಸಿಬ್ಬಂದಿಗಳಿಗೆ, ನಮ್ಮ ನಾಡಿನ ನುಡಿಯಾದ ಕನ್ನಡ ಮಾತಾಡಲು ಬರಬೇಕೆಂಬುದು ಅತಿ ಅವಶ್ಯಕ. ಆದ್ದರೆ ಈಗಿನ ಬೆಂಗಳೂರಿನ ಪರಿಸ್ಥಿತಿಯೇ ಬೇರೆ. ಯಾವುದೇ ಕಂಪನಿ ಅಥವಾ ಮಾಲ್ ಗಳಲ್ಲಿ ನೋಡಿದರೂ ಶೇ ೭೦% ಸಿಬ್ಬಂದಿಗಳಿಗೆ ಕನ್ನಡ ಬರುವುದಿಲ್ಲ. ಯಾವುದೋ ಬೇರೆ ರಾಜ್ಯಗಿಳಿಂದ ಇವರನ್ನು ಆಮದು ಮಾಡಿಕೊಳ್ಳುತ್ತಾರೆ. “ನನ್ನ ಬ್ಯಾಗ್ ಒಬ್ಬ ಕದ್ದು ಓಡಿಹೋದ ಅಂದ್ರೆ: ಆದ್ಮೀ ಕೈಸಾ ಥಾ” ಅನ್ನೋರೇ ಜಾಸ್ತಿ. ಅಲ್ಲಾ ಸ್ವಾಮಿ ಭದ್ರತಾ ಸಿಬ್ಬಂದಿಗಳಿಗೆ ನಮ್ಮ ಭಾಷೆನೇ ಬರದೆ ಇದ್ದಮೇಲೆ ಇವರು ನಮ್ಮನ್ನು ಯಶಶ್ವಿಯಾಗಿ ರಕ್ಷಿಸುವರು ಎಂದು ಏನ್ ಗ್ಯಾರೆಂಟಿ? ನಮ್ಮ ಅತಿ ಸರಳವಾದ ಪ್ರಷ್ನೆಗಳಿಗೆ ಉತ್ತರ ಕೊಡಲು ವಿಫಲವಾಗುವ ಇವರು ನಮ್ಮಲ್ಲಿ ಹಲವು ಪ್ರಶ್ನೆಗಳನ್ನು ಮೂಡಿಸುತ್ತಾರೆ.

೧) ಕನ್ನಡ ಅರಿಯದ ಭದ್ರೆತಾ ಸಿಬ್ಬ೦ದಿಯಿ೦ದ ಕನ್ನಡಿಗರೆಷ್ಟು ರಕ್ಷಣೆ ಪಡೆಯ ಬಲ್ಲರು?

೨) ಯಾವುದೇ ಅಪರಾಧ ಸ೦ಭವಿಸಿದಾಗ, ಕನ್ನಡಿಗ ಇವರಿಗೆ ಹೇಗೆ ವಿವರಣೆ ನೀಡಬೇಕು? ಇವರಿ೦ದ ಯಾವ ರೀತಿಯ ಸೇವೆ ನಿರಿಕ್ಷಿಸಬಹುದು?

೩) ಕನ್ನಡಿಗರು ತಮ್ಮ ಸುರಕ್ಷತೆಗೆ ಹಿ೦ದಿ ಭಾಷೆ ಕಲಿತು ಇ೦ಥಾ ಮಾಳಿಗೆಗಳಿಗೆ ಹೋಗಬೇಕೇ?

ಈವತ್ತು ಬೇರೆ ರಾಜ್ಯಗಳಿಂದ ಆಮದಾಗುತ್ತಿರುವ ಭದ್ರತಾ ಸಿಬ್ಬಂದಿಯಿಂದ ನಮ್ಮ ಕನ್ನಡಿಗರು ಸುಮಾರು ಕೆಲಸಗಳನ್ನ ಕಳೆದುಕೊಳ್ಳುತ್ತಿದ್ದಾರೆ. ಯಾವುದೇ ತರಹದ ವಿಶಿಷ್ಟ್ಯ ವಿಧ್ಯಾಭ್ಯಾಸ ಅರ್ಹತೆ ಬೇಡದಿರುವ ಇಂತಹ ಕೆಲಸಗಳಿಗೆ ಪರಭಾಷಿಕರು ಬೇಕ ಸ್ವಾಮಿ? ಈವತ್ತು ಭದ್ರತಾ ಸಿಬ್ಬಂದಿ, ಹೀಗೆ ಮುಂದುವರಿದರೆ ನಾಳೆ ಒಬ್ಬ ಪ್ಲಂಬರ್, ಟೈಲರ್, ಎಲೆಕ್ಟ್ರಿಷಿಯನ್ ಎಲ್ಲರೂ ಹೊರ ರಾಜ್ಯದವರೆ ಆಗುತ್ತಾರೆ. ನಮ್ಮ ಕನ್ನಡಿಗರು ನಿರುದ್ಯೋಗಿಗಳಾಗುತ್ತಾರೆ. ನಮ್ಮ ನಾಡಿನ ನಗರಗಳು ನಮ್ಮ ಯುವಕರಿಗೆ/ಜನರಿಗೆ ಉದ್ಯೊಗ ಒದಗಿಸಲು ವಿಫಲವಾದರೆ ಎಷ್ಟು ವಿಪರ್ಯಾಸ ನೀವೇ ಹೇಳಿ?

ಇನ್ನೊಂದು ಮುಖ್ಯವಾದ ವಿಚಾರ ಇಲ್ಲಿ ಗಮನಿಸಬೇಕಾದುದ್ದು, ಈ ವಲಸೆ ಬಂದ ಸಿಬ್ಬಂದಿಯಾಗಲಿ ಅಥವಾ ಬೇರೆಯವರಾಗಲಿ, ಇಲ್ಲಿನ ಮುಖ್ಯವಾಹಿನಿಗೆ ಸೇರದೆ ಮೊಂಡು ಹಿಡಿದು, ಅವರದೇ ಭಾಷೆಯನ್ನ ಇಲ್ಲಿ ಮೆರೆಸುತಿದ್ದಾರೆ. ಇದು ನಮ್ಮ ಸೌಹಾರ್ದತೆಯನ್ನೇ ನಾಶ ಮಾಡುತ್ತಿದೆ.

ಹಿಂಗೇ ಪರಿಸ್ಥಿತಿಯನ್ನು ಮುಂದುವರಿಯಲು ಬಿಟ್ಟರೆ ನಾಳೆ ನಾವು ಮನೆಯಿಂದ ಹೊರಗೋಗುವಾಗ ನಮ್ಮ ಕನ್ನಡವನ್ನು ಮನೆಯಲ್ಲೇ ಬಿಟ್ಟು ನಮ್ಮ ಭದ್ರತಾ ಸಿಬ್ಬಂದಿಗೆ ಬರುವ ಭಾಷೆಯನ್ನು ಕಲಿತು ಹೊರಹೋಗಬೇಕಾಗುತ್ತದೆ. ಕನ್ನಡಿಗನು ಕರ್ನಾಟಕದಲ್ಲಿ ಅವನ ಸ್ಥಾನ ಕಳೆದುಕೊಳ್ಳುತ್ತಾನೆ. ಈ ಪರಿಸ್ಥಿತಿ ಸುಧಾರಿಸಬೇಕಾದರೆ ನಾವೇ ಏನಾದರು ಮಾಡಬೇಕು. ಈ ಪರಿಸ್ಥಿತಿಯನ್ನು ನಾವು ಸಾಮಾನ್ಯವಾಗಿ ದೊಡ್ಡ ದೊಡ್ಡ ಮಾಲ್ ಗಳಲ್ಲಾಗಲಿ, ಅಪಾರ್ಟ್ಮೇಂಟ್ ಗಳಲ್ಲಾಗಲಿ ಎದುರಿಸುವುದರಿಂದ ನಾವು ಅದರ ಮಾಲೀಕರಿಗೆ ಮಿಂಚಿಸಿ ಕನ್ನಡ ಬರುವ ಭದ್ರತಾ ಸಿಬ್ಬಂದಿಗಳನ್ನೇ ನೇಮಕ ಮಾಡಿಕೊಳ್ಳುವಂತೆ ಆಗ್ರಹಿಸುವುದು ಸೂಕ್ತ, ಏಕೆಂದರೆ ನಾವು ಇವರ ನೇರ ಗ್ರಾಹಕರು. ಈ ಮಾಲೀಕರು ಕೆಲವು ಖಾಸಗಿ ಕಂಪನಿಗಳಿಂದ ಭದ್ರತಾ ಸಿಬ್ಬಂದಿಯನ್ನು ಗುತ್ತಿಗೆ ಪಡೆಯುವುದರಿಂದ ಅವರು ಕನ್ನಡ ಬರುವ ಸಿಬ್ಬಂದಿಗಳಿಗೆ ಬೇಡಿಕೆ ಇಟ್ಟು ಅವರ ಮೇಲೆ ಒತ್ತಡ ಹೇರುತ್ತಾರೆ.

ಕೆಳಗೆ ಕೆಲವು ಮಾಲೀಕರ ಮಿಂಚೆ ವಿಳಾಸ ಕೊಟ್ಟಿರುವೆ. ನಿಮ್ಮ ಅನುಭವಗಳನ್ನ ಅವರಲ್ಲಿ ತಪ್ಪದೆ ಹಂಚಿಕೊಳ್ಳಿ.

ಗರುಡಾ ಮಾಲ್: eag@vsnl.com, uday@garudamall.net

ದಿ ಫೋರಮ್: ali@prestigeconstructions.com, preksha@theforumexperience.com , malls@prestigeconstructions.com

ಇಂತಿ,

ನಂದನ್

Rating
No votes yet

Comments