ನಾನ್ಯಾರು ?

ನಾನ್ಯಾರು ?

೧. ನಾನು ಯಾರು ? ಏನ್ ಮಾಡ್ತಿದ್ದೀನಿ ? ಯಾಕೆ ಮಾಡ್ತಿದ್ದೀನಿ ? ಸುತ್ತ ಏನಾಗ್ತಿದೆ ? ಯಾರ್ ಏನ್ ಮಾಡ್ತಿದ್ದಾರೆ ? ಅಂತೆಲ್ಲ ವಿಚಾರ ಮಾಡ್ಲಿಕ್ಕೆ ಸ್ವಲ್ಪ ಹೊತ್ತು ಪ್ರತಿಯೊಬ್ರೂ ಪ್ರತಿದಿವಸದಲ್ಲಿ ಸ್ವಲ್ಪ ಹೊತ್ತು ತೆಗ್ದಿಡಬೇಕು .

೨. ಹಾಗೇ ಲಾಂಗ್ ಟರ್ಮ್ ನಲ್ಲಿ - ದೀರ್ಘಾವಧಿಯಲ್ಲಿ ಏನಾಗಬೇಕು . ಅದಕ್ಕೆ ಶಾರ್ಟ್ ಟರ್ಮಿನಲ್ಲಿ - ಅಲ್ಪಾವಧಿಯಲ್ಲಿ ಏನು ಮಾಡಬೇಕು ಅಂತ ನಿರ್ಧರಿಸಿ ಅದನ್ನು ಮಾಡಲು ಪ್ರಯತ್ನಿಸಬೇಕು .

೩. ಜೀವನದ ಉದ್ದೇಶವನ್ನೂ ಹೀಗೇ ಕಂಡ್ಕೊಂಡು , ಅದಕ್ಕೆ ತಕ್ಕಂತೆ ಬಾಳ್ಬೇಕು .

ಇವನ್ನೆಲ್ಲ ಅನೇಕರು ಈಗಾಗ್ಲೇ ಹೇಳಿದ್ರೂ ಎಷ್ಟೋ ಸಲ ಓದಿದ್ರೂ , ಕೇಳಿದ್ರೂ , ನಮ್ಮ ತಲೆಗೆ ಬಡಿದಾಗ್ಲೇ , ನಾವು ಅಳವಡಿಸಿಕೊಂಡಾಗಲೇ ಅದೆಲ್ಲ ನಿಜ .

೪. ಪ್ರತಿಕ್ಷಣ , ಸಾಧ್ಯ ಆದ್ರೆ , ನಮ್ಮನ್ನು ಪರೀಕ್ಷಿಸಿಕೊಳ್ತಿರಬೆಕು , ನಿರೀಕ್ಷಿಸಿಕೊಳ್ತಿರಬೇಕು .

Rating
No votes yet