ನಿರ್ಧಾರ ಹಾಗು ಕ್ರುತಿ ನಡುವಿನ ಅಂತರ

ನಿರ್ಧಾರ ಹಾಗು ಕ್ರುತಿ ನಡುವಿನ ಅಂತರ

ಒಂದು ಮರದ ದೊಡ್ಡ ಕೊಂಬೆಯೊಂದರ ಮೇಲೆ ಆರು ಗಿಳಿಗಳು ಕುಳಿತಿವೆ. ಅವುಗಳಲ್ಲಿ ನಾಲ್ಕು ಗಿಣಿಗಳು ಹಾರಿಹೋಗೋಣವೆಂದು ನಿರ್ಧರಿಸಿದೆ. ಹಾಗಾದರೆ ಉಳಿದ ಗಿಳಿಗಳೆಷ್ಟು ಈ ಪ್ರಶ್ನೆಗೆ ಉತ್ತರ ?

ಪ್ರಶ್ನೆ ಬಹಳ ಸುಲಭವೆನಿಸಿದರೂ ಸಹ, ಇಂಥಹ ಸುಲಭ ಪ್ರಶ್ನೆಯನ್ನು ಯಾರಾದರೂ ನಮಗೆ, ಅಂದರೆ ದೊಡ್ಡವರಿಗೆ ಕೇಳುತ್ತಾರೆಯೇ ? ಇದರಲ್ಲೇನೋ ಚಮತ್ಕಾರ ಅಡಗಿದೆ ಎಂದು ಯೋಚಿಸುತ್ತೇವೆ. ಮೇಲಿನ ಪ್ರಶ್ನೆಯನ್ನು ತರಗತಿಯೊಂದರಲ್ಲಿದ್ದ ವೈದ್ಯ ವಿದ್ಯಾರ್ಥಿಗಳಿಗೆ ಕೇಳಿದಾಗ, ಅದರಲ್ಲಿ ಕೆಲ ಜಾಣ ಹುಡುಗರು, ‘ಆರು ಗಿಳಿಗಳು’ ಎಂದು ಉತ್ತರಿಸಿದರು. ಹೌದು, ಸರಿಯಾದ ಉತ್ತರ, ಅದು ಹೇಗೆ ? ಎಂದರೆ, ನಾಲ್ಕು ಗಿಣಿಗಳು ಹಾರಿ ಹೋಗೋಣವೆಂದು ನಿರ್ಧರಿಸಿದವೆಷ್ಟೆ. ನಾವು ತೆಗೆದುಕೊಳ್ಳುವ ನಿರ್ಧಾರ ಕಾರ್ಯರೂಪಕ್ಕೆ ಬರಬೇಕಲ್ಲವೇ ? ಅದೇ ನಿರ್ಧಾರ (ಡಿಸಿಷನ್) ಹಾಗೂ ಕಾರ್ಯರೂಪಕ್ಕೆ ತರುವುದು (ಡೂಯಿಂಗ್) ಎಂಬುದರ ನಡುವಿನ ವ್ಯತ್ಯಾಸ.
ದಿನ ನಿತ್ಯದ ಜೀವನದಲ್ಲಿ ನಾವು ಎಷ್ಟೆಲ್ಲಾ ದಂಡ ನಿರ್ಧಾರ ತೆಗೆದುಕೊಳ್ಳುತ್ತೇವೆ. ಆದರೆ ಅದರ ಆಚರಣೆ, ಪಾಲನೆ, ಕಷ್ಟ ಎನಿಸುವುದೇ ? ಹೊಸ ವರ್ಷದ ಆರಂಭದ ದಿನವಂತೂ, ಎಷ್ಟೊಂದು ನಿರ್ಧಾರಗಳನ್ನು ತೆಗೆದುಕೊಂಡು ಬೀಗುತ್ತೇವೆ. ವರ್ಷಾಂತ್ಯದಲ್ಲಿ ಅವು ಯಾವುದೂ ಕಾರ್ಯಚರಣೆಗೆ ಬರದದ್ದು ಕಂಡು ಬೇಸರಗೊಳ್ಳುತ್ತೇವೆ. ಅಧಿಕ ತೂಕದ ಮಧ್ಯ ವಯಸ್ಕರೊಬ್ಬರು ಜನವರಿ ಒಂದನೇ ತಾರೀಖು ತೂಕ ಇಳಿಸಲು, ದಿನನಿತ್ಯ ಬೆಳಗ್ಗೆ ಎದ್ದು ವಾಕಿಂಗ್ ಹೋಗಲು ನಿರ್ಧರಿಸಿದರು. ಡಯಟಿಂಗ್ ಮಾಡಲೂ ಸಹ ನಿರ್ಧರಿಸಿಯಾಯ್ತು, ಇದು ನಿರ್ಧಾರ ಅಷ್ಟೇ. ಹೊಸ ವರ್ಷಾಚರಣೆಯ ಸಂದರ್ಭದ ಹುರುಪಿಸಿನಲ್ಲಿ ತೆಗೆದುಕೊಂಡದ್ದು, ಜನವರಿ 2ನೇ ತಾರೀಖು, 3, 4, 5 ಹೀಗೆ ಒಂದು ವಾರ ಕಳೆಯಿತು. ಬೇಗ ಎದ್ದು ವಾಕಿಂಗ್ ಹೋಗಲು ಆಗಲಿಲ್ಲ. ಸಂಜೆ ಹೋದರಾಯ್ತು ಎರಡು ಮುಂದೂಡುತ್ತಾ ತಿಂಗಳು ಕಳೆಯಿತು. ಅಯ್ಯೋ ವಾಕಿಂಗ್ ಮಾಡಲಾಗುತ್ತಿಲ್ಲ.
ಡÀಯಟಿಂಗ್ ಮಾಡಿದರಾಯ್ತು ಎಂದು ನಾಲಿಗೆಯ ರುಚಿಗೆ ಮಾರು ಹೋಗಿ, ಮನಸ್ಸಿನ ನಿಗ್ರಹ ಮಾಡಲಾರದೆ ನಿಯಂತ್ರಣ ತಪ್ಪಿ, ಆರು ತಿಂಗಳಲ್ಲೇ ಸಕ್ಕರೆ ಖಾಯಿಲೆಗೆ ಶರಣಾಗಿದ್ದ ಹೀಗೇ ನಾವು ಸಹ, ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಆದರೆ ಅವು ದೃಢವಾಗಿಲ್ಲದೇ, ಆಚರಣೆಗೆ ತರದಿದ್ದರೆ, ಅನಾಹುತಗಳನ್ನೆದುರಿಸಬೇಕಾದೀತು. ‘ನುಡಿದಂತೆ ನಡೆಯುವುದು’ ಸಜ್ಜನಿಕೆಯ ಲಕ್ಷಣ, ಇಂಥಹ ನಿರ್ಧಾರಗಳನ್ನು ತೆಗೆದುಕೊಂಡು ಆಚರಣೆಗೆ ತರದಿದ್ದಲ್ಲಿ ಯಾರನ್ನು ಮೋಸಗೊಳಿಸುತ್ತಿದ್ದೇವೆ ? ನಮ್ಮನ್ನೇ ನಾವು ಮೋಸ ಗೊಳಿಸುತ್ತೇವೆ. ನಮ್ಮೊಳಗಿರುವ ಆತ್ಮವನ್ನು ವಂಚಿಸಿದಂತಲ್ಲವೇ ? ಆರೋಗ್ಯದ ಕುರಿತಾಗಿ ತೆಗೆದುಕೊಳ್ಳುವ ನಿರ್ಧಾರಗಳನ್ನು ಆಚರಣೆಗೆ ತರದಿದ್ದಲ್ಲಿ ದೇಹ ರೋಗಕ್ಕೆ ತುತ್ತಾಗುವುದು. ಆರೋಗ್ಯವಂತ ಶರೀರ ಆತ್ಮದ ಅರಮನೆ. ಅನಾರೋಗ್ಯ ಶರೀರ, ಆತ್ಮದ ಸೆರೆಮನೆ.
ನಾಳೆ ಮಾಡುವ ಕೆಲಸವನ್ನು ಇಂದೇ ಮಾಡೋಣ. ಇಂದು ಮಾಡುವ ಕೆಲವನ್ನು ಈಗಲೇ ಮಾಡೋಣ. ಸಮಯ ಯಾರಿಗೂ ಕಾಯುವುದಿಲ್ಲ.
ಮೊಡದ ವಾತಾವರಣ, ಮಳೆಯ ನಿರೀಕ್ಷೆಯಲ್ಲಿರುವಾಗ, ಮುಂಜಾಗ್ರತಾ ಕ್ರಮವಾಗಿ ಛತ್ರಿಯನ್ನೊಯ್ಯಬೇಕು ಎಂದು ನಿರ್ಧರಿಸಿದರೆ ಸಾಲದು, ನಮ್ಮ ಜೊತೆಯಲ್ಲಿ ಮರೆಯದೇ ಛತ್ರಿಯನ್ನು ತೆಗೆದುಕೊಂಡು ಹೋದಾಗಲೇ ಮಳೆ ಬಂದಾಗ ಅದರ ರಕ್ಷಣೆ ನಮಗಿರುವುದು. ಬರೀ ಮಾತಿಗೆ, ಮಂತ್ರಕ್ಕೆ ಮಾವಿನ ಕಾಯಿ, ಗಿಡದಿಂದ ಉದುರುವುದೇ ? ಮಾವಿನಕಾಯಿ ಬೇಕಿದ್ದಲ್ಲಿ ಗಿಡ ಹತ್ತಿ ಕೀಳಬೇಕು. ಇಲ್ಲದಿದ್ದಲ್ಲಿ ಕಲ್ಲು ಹೊಡೆದು ಬೀಳಿಸಬೇಕು. 
ಎಷ್ಟೆಲ್ಲಾ ಒಳ್ಳೆಯ ಕೆಲಸಗಳನ್ನು ಮಾಡಬೇಕು ಎಂದು, ಬರೀ ಮಾತಿನಲ್ಲಿ ಹೇಳಿದರೆ ಸಾಲದು, ಕಾರ್ಯರೂಪಕ್ಕೆ ತಂದಾಗಲೇ ಅದರ ಫಲ ನಮಗೆ.
 

 

Rating
No votes yet

Comments