ನೀನಿಲ್ಲದೇ ನಂಗೆ ಬದುಕಿಲ್ಲ; ಅರ್ಥ ಮಾಡ್ಕೋ, ಪ್ಲೀಸ್…

ನೀನಿಲ್ಲದೇ ನಂಗೆ ಬದುಕಿಲ್ಲ; ಅರ್ಥ ಮಾಡ್ಕೋ, ಪ್ಲೀಸ್…

ನಿಂಗೆ ಇಂಥದ್ದೊಂದು ಪತ್ರ ಬರೆಯೋ ದಿನ ಬರಬಹುದು ಅಂತ ಒಂದು ಕ್ಷಣಾನೂ ಯೋಚಿಸಿರಲಿಲ್ಲ. ಆದರೀಗ ಇದೊಂದು ಪತ್ರವಾದ್ರೂ ನಿನ್ನ ಮನಸ್ಸನ್ನು ಬದಲಿಸುತ್ತೆ, ಮತ್ತೆ ನನ್ನ ಪ್ರೀತಿಯ ಹುಡುಗಿಯಾಗಿ ನನ್ನ ಜೊತೆಗಿರ್ತೀಯ ಅನ್ನೋ ನಂಬಿಕೆ ನಂಗೆ. ಇವತ್ತಿಗೆ ನಿಂಗೆ ನಾನು ಬೇಡ ಅನ್ನಿಸಿ 67ನೇ ದಿನ. ಯಾಕೇ ಪುಟ್ಟ ಹಿಂಗ್ ಮಾಡಿಬಿಟ್ಟೆ? ನಿನ್ನಷ್ಟು ನಾನ್ ನಿನ್ನ ಪ್ರೀತ್ಸೋಕಾಗಲ್ಲ ಕಣೋ, ಆದ್ರೂ ಟ್ರೈ ಮಾಡ್ತೀನಿ ಅಂತಿದ್ದವಳು ಹಿಂಗೆ ಏಕಾಏಕಿ ನನ್ನನ್ನ ಬಿಟ್ಟು ಹೋಗಿಬಿಡೋದ? ಅರ್ಧ ಗಂಟೆ ಮೆಸೇಜ್ ಮಾಡ್ಲಿಲ್ಲ ಅಂದ್ರೆ, ಹೆಸರು ಹಾತೀ‘ನನ್ನ ನೆನಪಿದ್ಯಾ’ ಅಂತ ಕೇಳ್ತಿದ್ದವಳು, ಇವತ್ತು ‘ಮರೆತುಬಿಡು’ ಅಂತ ಹೇಳ್ತಾ ಇದಿಯಲ್ಲ ಬಂಗಾರ. ಯಾಕೋ? ನನ್ನಿಂದ ಎಂತಹ ತಪ್ಪಾಗಿದ್ರೂ ಇದೊಂದು ಸಲ ಕ್ಷಮಿಸಿಬಿಡೋ, ನಿನ್ನನ್ನೇ ಜಗತ್ತು ಅಂತ ಪ್ರೀತಿಸಿದ್ದಕ್ಕೆ ಇಷ್ಟು ದೊಡ್ಡ ಶಿಕ್ಷೇನಾ?

ನೀನಿಲ್ಲದ ಇಷ್ಟು ದಿನ ನಾನದೆಷ್ಟು ಹಿಂಸೆ ಅನುಭವಿಸಿದೀನಿ ಅಂತ ನಂಗೇ ಗೊತ್ತು. ಎಲ್ಲಿ ಹೋದ್ರೂ ನೆನಪಾಗ್ತೀಯ ಕಣೋ. ಬೆಳಗ್ಗೆ 5 ಗಂಟೆಗೇ ಗುಡ್ ಮಾರ್ನಿಂಗ್ ಅಂತಿದ್ದಳು ನೀನು, ರಾತ್ರಿ 1 ಗಂಟೆ ಆದ್ರೂ ಗುಡ್ ನೈಟ್ ಹೇಳೋ ಮಾನಸ್ಸಾಗ್ತಿರಲಿಲ್ಲ್ಲ ನಿಂಗೆ. ಇವತ್ತು ನೀನಿಲ್ಲದ ಬ್ಯಾಡ್ ಟೈಮ್ ಹೇಗಿರಬಹುದು ಯೋಚ್ನೆ ಮಾಡಿದೀಯ? ಇದುವರೆಗೂ ನೀನ್ ಕಳಿಸಿರೋ 2631ಮೆಸೇಜ್ ಗಳಲ್ಲಿ ಕನಿಷ್ಠ 1600 ಮೆಸೇಜ್ i love you ಅಂದಿದೀಯ. ಆದ್ರೆ ಅಷ್ಟೂ ಮೆಸೇಜ್ ಗಳು ಕೊಟ್ಟ ಖುಷಿ, ಮೊನ್ನೆ ನೀನ್ ನಿರಾಕರಣೆಯ ಮಾತಾಡಿದಾಗ ಕುಸಿದು ಬಿತ್ತು…….. ನೀನು ಗಮನಿಸಿದಿಯಾ? ನಾನು ಸಾಮಾನ್ಯವಾಗಿ ಯಾರ ಕಾಲಿಗೂ ಬೀಳೋನಲ್ಲ, ಆದ್ರೆ ನಿನ್ನ ಕಾಲು ಹಿಡಿದು ಬೇಡ್ಕೊಂಡಿದೀನಿ. ಇದೊಂದು ಸಲ ಮನಸ್ಸು ಬದಲಾಯಿಸು ಅಂತ, ಹಾಗೆ ಮಾಡಿದ ಮೇಲೂ ನಿನ್ನ ಮನಸ್ಸು ಕರಗಲೇ ಇಲ್ವ ಪುಟ್ಟ ?

ನೆನಪು ಮಾಡ್ಕೋ… ಮಲ್ಲೇಶ್ವರದ ದೇವಸ್ಥಾನದಲ್ಲಿ ಹಣೆಗೆ ಕುಂಕುಮ ಇಟ್ಟು ನಿನ್ನ ಕೈಹಿಡಿದು ತುಂಬಾ ಪ್ರೀತಿಸ್ತೀನಿ ಅಂತ ಹೇಳ್ದಾಗ ನೀನು ಕಣ್ಣಲ್ಲಿ ನೀರು ತುಂಬಿಕೊಂಡು ‘ನಾನೂ ಅಷ್ಟೆ ತುಂಬಾನೇ ಪ್ರೀತಿಸ್ತೀನಿ’ ಅಂದ್ಯಲ್ಲಾ ಅದನ್ನು ನೆನಪಿಸಿಕೊಂಡಾಗ್ಲೆಲ್ಲಾ ಬಿಕ್ಕಿ ಬಿಕ್ಕಿ ಅತ್ತಿದ್ದಿನಿ. 67 ದಿನದಲ್ಲಿ ನನ್ನ ಕಣ್ಣುಗಳೇ ನನ್ನ ಮೇಲೆ ಮುನಿಸಿಕೊಳ್ಳೋಷ್ಟು ಕಣ್ಣೀರಿಟ್ಟಿದೀನಿ. ಮಾನಸಿಕವಾಗಿ ನಾವು ಯಾವೊತ್ತೋ ಮದುವೆಯಾಗಿದೀವಿ ಅಂತಿದ್ದ ನೀನೇ, ಹೀಗೆ ಮನಸ್ಸು ಮುರಿದು ಹೋಗಿ ಬಿಡೋದಾ ?

‘ತುಂತುರು ಅಲ್ಲಿ ನೀರ ಹಾಡು, ಕಂಪನ ಇಲ್ಲಿ ಪ್ರೀತಿ ಹಾಡು… ಹಗಲಿರಲಿ, ಇರಳಿರಲಿ, ನೀನಿರದೇ ಹೇಗಿರಲಿ’ ಅಂತ ನೀನೇ ಕೇಳಿದ್ದು ನೆನಪಿದ್ಯಾ ? ಅವತ್ತು ನೀನೇ ಹೇಳಿದ್ದೆ: ನನ್ನ ಎದೆಯಾಳೊ ಧಣಿ ನೀನು, ನಿನ್ನ ಸಹಚಾರಿಣಿ ನಾನು’ ಅಂತ. ಮರೆತೋಯ್ತಾ ಬಂಗಾರ? ಯಾವತ್ತೂ ನಿನ್ ಬಿಟ್ಟು ಹೋಗೋಲ್ಲ. ಅದು ನಂಗೆ ಸಾಧ್ಯಾನೂ ಇಲ್ಲ ಅಂತ ಪ್ರಾಮಿಸ್ ಮಾಡಿದೋಳು ನೀನು. ನಾನು ದು:ಖದಲ್ಲಿದ್ದಾಗ ನನ್ನ ಜತೆಗೆ ಬಿಕ್ಕಿ ಬಿಕ್ಕಿ ಅತ್ತವಳು ನೀನು, ನಿನಗೋಸ್ಕರ ಅವತ್ತು ಎಫ್. ಎಂ. ನಲ್ಲಿ ‘ಹಮೇ ತುಮ್ಸೆ ಪ್ಯಾರ್‍ ಕಿತ್ನಾ’ ಹಾಡು ಡೆಡಿಕೇಟ್ ಮಾಡ್ದಾಗ ‘ಥ್ಯಾಂಕ್ ಯು, ಐ ಲವ್ ಯೂ ಅಂತ ಫೋನ್ ನಲ್ಲೇ ಮುತ್ತಿಟ್ಟವಳು ನೀನು. ಆದ್ರೆ ಇವತ್ತು…..?

ಪುಟ್ಟ ಈಗಾಗ್ಲೇ ಎರಡು ಸಲ ಸತ್ತು ಬದುಕಿದೀನಿ, ಆದರೂ ಈಗ ನೀನಿಲ್ಲದೇ ಬದುಕೋ ಇಫಲ ಪ್ರಯತ್ನದಲ್ಲಿದೀನಿ. ಅದು ನನ್ನಿಂದ ಸಾಧ್ಯವಿಲ್ಲ ಅಂತ ನಂಗೂ ಗೊತ್ತು, ನಿಂಗೂ ಗೊತ್ತು.. ಕಡೆಯದಾಗಿ ನಾನು ಕೇಳೋದಿಷ್ಟೆ… ನನ್ನಿಂದಾದ ಎಲ್ಲ ತಪ್ಪುಗಳನ್ನು ಇದೊಂದು ಸಲ ಕ್ಷಮಿಸಿ, ನನ್ನ ಜೊತೆಗಿರು. ನೀನು ನನ್ನ ಬಗ್ಗೆ ಏನಂದುಕೊಂಡಿದ್ಯೋ ಹಾಗೇ ಬೆಳೆದು ತೊರಿಸ್ತೀನಿ… ನಿಮ್ಮಪ್ಪ ಅಮ್ಮ, ಫ್ಯಾಮಿಲೀನ ಒಪ್ಸೋ ಜವಬ್ದಾರಿ ನನಗೆ ಬಿಡು, ಇವತ್ತು ಹೇಳ್ತೀನಿ, ನಂಗೆ ನಿನ್ನನ್ನ ಪ್ರೀತ್ಸೋ ಯೋಗ್ಯತೆ ಈಗ್ಲೂ ಇಲ್ಲ… ಆದ್ರೂ ನೀನೇ ಹೇಳಿದ್ಯಲ್ಲ ಪ್ರೀತ್ಸೋಕೆ ಯೋಗ್ಯತೆ ಇರ್‍ಬೇಕು ಅಂತಿಲ್ಲ ಅಂತ… ಆ ಕಾರಣಕ್ಕೆ ಯೋಗ್ಯತೆ ಇಲ್ಲದಿದ್ರೂ ಕೇಳ್ತಿದೀನಿ, ಪ್ಲೀಸ್, ನನ್ನ ಕೈ ಬಿಡಬೇಡ. ನಿನ್ನನ್ನ ಬಿಟ್ಟು ಬದುಕೋ ಶಕ್ತಿ ನಂಗಿಲ್ಲ ಕಣೋ… ಈಗ್ಲಾದ್ರೂ ಮನಸ್ಸು ಬದಲಾಯಿಸು ಪ್ಲೀಸ್..

ನಿನ್ನ Stupid…

ನಿಂಗೆ ನನ್ನ ಭಾವನೆಗಳೂ ಇನ್ನೂ ಅರ್ಥ ಆಗದಿದ್ರೆ ಈ ಬ್ಲಾಗ್ ಓದು.. ನಿನ್ನ ಮನಸ್ಸು ಕರಗಬಹುದೇನೋ... www.neenillade.wordpress.com

Rating
No votes yet

Comments