ಬಸ್ ಹೈಟೆಕ್ ಆದರೂ ಡ್ರೈವರ್ ಹೈ ಟೆಕ್ ಅಲ್ಲ

ಬಸ್ ಹೈಟೆಕ್ ಆದರೂ ಡ್ರೈವರ್ ಹೈ ಟೆಕ್ ಅಲ್ಲ

ನೆನ್ನೆ ರಾತ್ರಿ ಎಂಟುಘಂಟೆಗೆ ನಾನು ನನ್ನ ಮಗಳು ಮತ್ತ್ತೊಬ್ಬ ಹುಡುಗಿ ಪುಷ್ಪಾ ಗಾರೇಪಾಳ್ಯದಿಂದ ಬರುತ್ತಿದ್ದೆವು.
ರಾತ್ರಿಯಾದ್ದರಿಂದ ಸ್ಕೂಟೀನ ನಿಧಾನವಾಗಿಯೇ ಚಾಲಿಸುತ್ತಿದ್ದೆ
ಪುಷ್ಪಕ್ ಬಸ್ಸೊಂದು ಹಿಂದೆ ಬರುತ್ತಿತ್ತು. ಕನ್ನಡಿಯಲ್ಲಿ ಅದನ್ನು ಗಮನಿಸಿ ಅ ಬಸ್ಸಿಗೆ ಹೋಗಲು ದಾರಿ ಕೊಟ್ಟೇ
ನಾಲ್ಕು ರೋಡಿದ್ದ ಜಾಗದಲ್ಲಿ ಎಡಗಡೆಯಿಂದ ಎರೆಡನೆ ರಸ್ತೆಯಲ್ಲಿ ನನ್ನ ಸ್ಕೂಟಿ . ಎಡಗಡೆಯ ಮೊದಲ ರಸ್ತೆಯಲ್ಲಿ ಬಸ್ ಹೋಗಬಹುದಿತ್ತು.
ಹಾಗೆ ಹೋಗದೆ ಬೇಕೆಂದಲೇ ನಮ್ಮ ಸ್ಕೂಟಿಯ ಮುಂದಿನ ಚಕ್ರಕ್ಕೆ ಇನ್ನೇನು ತಾಕಿಯೇ ಬಿಡುವುದೋ ಏನೋ ಎಂಬಂತೆ ಬಸ್ ನಮ್ಮ ಮುಂದೆ ಹೋಯಿತು
.ನನಗೂ ಕೋಪ ಬಂತು ಬಸ್ ಮುಂದೆ ನಿಂತಾಗ ಏನು ಅಷ್ಟು ಗೊತ್ತಾಗಲ್ವಾ ಎಂದು ಬೈದು ಮುಂದೆ ಮುಂದೆ ಹೋದಂತೆಲ್ಲಾ ನಮ್ಮ ಮೇಲೆ
ಸೇಡಿಟ್ಟುಕೊಂಡನವನಂತೆ
ಸ್ಕೂಟಿಯ ಬಲಗಡೆ ಎಡಗಡೆ ಎಲ್ಲೆಂದರಲ್ಲಿ ಬಸ್ ಚಲಾಯಿಸತೊಡಗಿದ.ರಾತ್ರಿ ಬೇರೆ . ಅವನು ಮುಂದೆ ಹೋಗಲಿ ಎಂದು ಸ್ವಲ್ಪ ನಿಧಾನ ಮಾಡಿದರೆ ಅವನೂ ನಿಧಾನ ಮಾಡುತ್ತಿದ್ದ
ಫಾಸ್ಟ್ ಆಗಿ ಹೋದರೆ ಬಸ್ ಸಹಾ ಫಾಸ್ಟ್ ಆಗಿ ಬರುತ್ತಿತ್ತು. ಸ್ಕೂಟಿ ಎಲ್ಲಿಯಾದರೂ ನಿಲ್ಲಿಸಲೂ ಭಯ ರಾತ್ರಿ ಬೇರೆ

ಹಿಂದೆ ಮಗುವಿದೆ. ಸ್ವಲ್ಪ ವಾಲಿದರೂ ಬೀಳುವುದು ಖಂಡಿತಾ . ಕೋನಪ್ಪನ ಅಗ್ರಹಾರ ಬರುವವರೆಗೂ ಜೀವ ಕೈನಲಿ ಹಿಡಿದುಕೊಂಡು ಡ್ರೈವ್ ಮಾಡಿಕೊಂಡು ಬಂದೆ
ನಮ್ಮ ರೋಡಿಗೆ ಕ್ರಾಸ್ ಮಾಡಿದಾಗ ಒಳ್ಲೇ ವಿಲನ್ ತರಹ ನಗುತ್ತಾ ಡ್ರೈವರ್ ಬಸ್‍ನ ಮುಂದೆ ಚಲಿಸಿದ
ಬಸ್ ರೂಟ್ ನಂ ೬೧a.
ಬೆಂಗಳೂರು ಹೈಟೆಕ್ ಆದರೂ ಈ ಡ್ರೈವರ್‍ಗಳು ಒಳ್ಳೆಯಬುದ್ದಿ ಯಾವತ್ತು ಕಲಿತುಕೊಳ್ಳುತ್ತಾರೋ ಆವತ್ತೆ ನಿಜವಾಗಿ ಉದ್ದಾರವಾಗೋದು

ಿಅ

Rating
No votes yet

Comments