ಬಿಟಿ ಬದನೆ: ಸೂಕ್ತ ತೀರ್ಮಾನ

ಬಿಟಿ ಬದನೆ: ಸೂಕ್ತ ತೀರ್ಮಾನ

ಭಾರತ ಸರ್ಕಾರದ ಪರಿಸರ ಖಾತೆ ಸಚಿವರು ಬಿಟಿ ಬದನೆ ವಾಣಿಜ್ಯೀಕರಣದ ವಿಚಾರದಲ್ಲಿ ಸೂಕ್ತವಾದ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ. ನಾನೊಬ್ಬ ಕೃಷಿಯಲ್ಲಿ ಸ್ನಾತಕೋತ್ತರ ಪದವಿ ಪಡೆದವನಾಗಿ ಮತ್ತು ರೈತರ ಮಧ್ಯೆ ಸುಸ್ಥಿರ ಸಾವಯವ ಕೃಷಿ ಸಂಬಂಧಿಸಿದಂತೆ ಕಾರ್ಯನಿರ್ವಹಿಸಿದ ಅನುಭವದಲ್ಲಿ ಹೇಳುವುದಾದರೆ ಬಿಟಿ ಬದನೆ ರೀತಿಯ ಸಂಶೋಧನೆಗಳು ಬಹುತೇಕ ಬಹುರಾಷ್ಟ್ರೀಯ ಕಂಪನಿಗಳ ಉಪಯೋಗಕ್ಕಾಗಿ ಆಗುತ್ತಿರುವ ಸಂಶೋಧನೆಗಳಾಗಿವೆ. ಇಂತವುಗಳಿಂದ ಸಾಮಾನ್ಯ ರೈತರಿಗೆ ಯಾವುದೇ ರೀತಿಯ ಪ್ರಯೋಜನವಿಲ್ಲ. ಈ ರೀತಿಯ ಸಂಶೋಧನೆಗಳನ್ನು ಕೈಬಿಟ್ಟು ರೈತರು ಸ್ವಾವಲಂಬಿ ಸುಸ್ಥಿರ ಕೃಷಿ ಮಾಡಲು ಸಹಾಯಕವಾದ ಸಂಶೋಧನೆಗಳು ಮತ್ತು ವಿಸ್ತರಣಾ ಕಾರ್ಯಗಳು ಹೆಚ್ಚಬೇಕಾಗಿದೆ.

Rating
No votes yet