ಬ್ಲಾಗ್ ಬರಹ ಚಮತ್ಕಾರಿಕವೆ ? ಅಲ್ಲವೆ ?
ಬ್ಲಾಗ್ ಬರಹ ಚಮತ್ಕಾರಿಕವೆ ?
ಕಳೆದ ವಾರ ಶ್ರೀ ಸುಪ್ರೀತ್ ರವರು ಒಂದು ಚರ್ಚೆ ಪ್ರಾರಂಬಮಾಡಿದರು. ಹಲವು ಅಭಿಪ್ರಾಯಗಳು ವ್ಯಕ್ತವಾದವು. ಅದು ಚಮತ್ಕಾರಿಕವೆಂದು ಒಪ್ಪಿಕೊಂಡರು ಸಹ ಅದು ಟೀಕೆಯೊ ಅಥವ ಮೆಚ್ಚುಗೆಯೊ ಎಂಬುದು ಒಂದು ಶ್ಲೇಷ. ಕನ್ನಡ ಸಾಹಿತ್ಯ ಬೆಳೆದು ಬಂದ ಹಲವು ಮಜಲುಗಳನ್ನು ಗಮನಿಸಿದಾಗ ಬ್ಲಾಗ್ ಬರಹವೆನ್ನುವುದು ಸಾಹಿತ್ಯದ ಒಂದು ಸ್ಥಿಥಿಯೆಂದೊ ಅಥವ ಅದನ್ನು ಸಾಹಿತ್ಯದ ವಿಭಾಗವೆಂದು ಒಪ್ಪುಕೊಳ್ಳಲೇ ಬೇಕಾದ ಪರಿಸ್ಥಿಥಿಯು ಮುಂದೆ ಉದ್ಬವಿಸಬಹುದು.
ಹಿಂದೊಮ್ಮೆ ಸಾಹಿತ್ಯದ ಗದ್ಯಸ್ವರೂಪವನ್ನು ಸಹ ಪಂಡಿತರು ತಿರಸ್ಕರಿಸುವ ಕಾಲವೊಂದಿತ್ತು. ರಾಮಶ್ವಮೇಧದ ಮುದ್ದಣ ಮನೋರಮೆಯರ ಸಲ್ಲಾಪವನ್ನು ಗಮನಿಸಿದಲ್ಲಿ , ಮುದ್ದಣ್ಣನು ಪಂಡಿತರ ಪ್ರತಿನಿದಿಯೆಂಬಂತೆ ಪತ್ನಿಯನ್ನು ಕಥೆಯನ್ನು ಪದ್ಯದಲ್ಲಿ ಹೇಳಲೊ ? ಗದ್ಯದಲ್ಲಿಯೊ ? ಎಂದು ಕೇಳುತ್ತಾನೆ. ಮುದ್ದಣ್ಣ ಪಂಡಿತನಾದರೆ ಪತ್ನಿ ಮನೋರಮೆ ಸಾಮನ್ಯಜನರ ಪ್ರತಿನಿದಿ. ಆಕೆ ಪದ್ಯಮ್ ವದ್ಯಮ್ ಗಧ್ಯಮ್ ಹೃದ್ಯಮ್ ಹೃದ್ಯಮಪ್ಪ ಗದ್ಯದಲ್ಲಿಯೆ ಹೇಳಿ ಎನ್ನುತ್ತಾಳೆ. ಅಂದು ಪ್ರಾರಂಬವಾದ ವಾಗ್ವಾದ ವಿವಿದ ರೂಪ ತಳೆದು ಈಗ ಬ್ಲಾಗ್ ಸಾಹಿತ್ಯದ ಬಾಗಿಲಲ್ಲಿ ನಿಂತಿದೆ.
ಕಾವ್ಯರೂಪದಲ್ಲಿದ್ದ ಸಾಹಿತ್ಯ ಕ್ರಮೇಣ ಗದ್ಯರೂಪವನ್ನು ತಾಳುತ್ತ ಹಳೆಗನ್ನಡ ನಡುಗನ್ನಡ ಹೊಸಕನ್ನಡದ ರೂಪವನ್ನೆಲ್ಲ ದಾಟಿ ಇಪ್ಪತ್ತನೆ ಶತಮಾನದ ನವ್ಯ ನವೋದಯಗಳ ರೂಪ ತಳೆದು ನಾಟಕ ಸಿನಿಮ ಸಾಹಿತ್ಯ ಗಳ ಜೊತೆಗೆ ಬಂಡಾಯ ಸಾಹಿತ್ಯದ ಸ್ವರೂಪವನ್ನೆಲ್ಲ ಅರಗಿಸಿಕೊಂಡು ಈಗ ಬ್ಲಾಗ್ ಸಾಹಿತ್ಯದ ಬಾಗಿಲಲ್ಲಿ ಒಂದು ಹೆಜ್ಜೆಯಿಟ್ಟು ನಿಂತಿದೆ. ಹಾಗಿರುವಾಗ ಈ ಚರ್ಚೆಗಳೆಲ್ಲ ಸ್ವೀಕೃತವೆ , ಏಕೆ ಬೇಡ ಕನ್ನಡ ಸಾಹಿತ್ಯ ಮತ್ತಷ್ಟು ಬೆಳೆಯುವ ಅವಕಾಶವಿದ್ದಾಗ? .
ಸಿನಿಮಾ ಸಾಹಿತ್ಯವನ್ನು ಗಮನಿಸಿ ಚಿ|ಉದಯಶಂಕರ್ ಅಂತವರು ಹತ್ತುಸಾವಿರಕ್ಕು ಮೀರಿದ ಸಾಹಿತ್ಯವನ್ನು ರಚಿಸಿದರು ಸಹ ಸಂಪ್ರದಾಯವಾದಿ ಸಾಹಿತಿಗಳು ಸಿನಿಮಾ ಸಾಹಿತ್ಯವನ್ನು ಒಪ್ಪುವದಿಲ್ಲ. ಚಿ|ಉದಯಶಂಕರರನ್ನು ಕವಿ ಅಂತ ಪರಿಗಣಿಸುವದಿಲ್ಲ ಏಕೆ ?. ಲತಾಮಂಗೇಶ್ವರ್ ಹಲವು ಕೋಟಿ ಜನರ ಹೃದಯ ಸೂರೆ ಮಾಡಿರಬಹುದು ಆದರೆ ಅವರನ್ನು ಶಾಸ್ತ್ರೀಯ ಸಂಗೀತಗಾರರು ಗಮನಿಸುವದಿಲ್ಲ. ಹಾಗೆಯೆ ಬ್ಲಾಗ್ ಸಾಹಿತ್ಯ ಎಷ್ಟೆ ಜನಮನ್ನಣೆ ಗಳಿಸಿದರು ಅದು ಚಮತ್ಕಾರಿಕವೆ. ಹಾಗೆಂದು ಸಿನಿಮಾ ಸಾಹಿತ್ಯವಾಗಲಿ ಬ್ಲಾಗ ಸಾಹಿತ್ಯವಾಗಲಿ ಅದರ ತಳಪಾಯ ಯಾವಗಲು ಸಂಪ್ರದಾಯಬದ್ದ ಸಾಹಿತ್ಯವೆ ಆಗಿರುತ್ತದೆ. ಹೇಗೆಂದರೆ ಸಿನಿಮಾ ಹಾಡುಗಳು ಶಾಸ್ತ್ರೀಯ ಸಂಗೀತದ ರಾಗಗಳ ಆದಾರವಿಲ್ಲದೆ ಜನಪ್ರಿಯವಾಗಲು ಸಾದ್ಯವಿಲ್ಲ. ಹಾಗೆಯೆ ಬ್ಲಾಗ್ ಸಾಹಿತ್ಯಗಾರರು ಸ್ವಲ್ಪಮಟ್ಟಿಗಾದರು ಸಾಹಿತ್ಯದ ಬಗ್ಗೆ ಓದಿ ಆಸಕ್ತಿ ಬೆಳೆಸಿಕೊಂಡವರಿರುತ್ತಾರೆ.
ಹಾಗೆಯೆ ಸಾಹಿತ್ಯದ ಬಗೆಗಳಲ್ಲು ಒಂದೊಮ್ಮೆ ಪತ್ತೇದಾರಿ ಸಾಹಿತ್ಯದ ಬಗ್ಗೆ ಯಾರಿಗು ಅಷ್ಟು ಒಲವಿರಲಿಲ್ಲ ಓದುಗರನ್ನು ಹೊರತು ಪಡಿಸಿ ! ನರಸಿಂಹಯ್ಯನವರಂತವರು ೫೦೦ ಕ್ಕು ಹೆಚ್ಚು ಕಥೆಗಳನ್ನು ಗೀಚಿ ಬಿಸಾಕಿದರು ಸಾಹಿತ್ಯ ಲೋಕ ಅವರನ್ನೇನು ಗಂಭೀರವಾಗಿ ಪರಿಗಣಿಸುವದಿಲ್ಲ.
ಕಾವ್ಯ ಪ್ರಿಯರಿಗೆ ಗದ್ಯವೊಂದು ಚಮತ್ಕಾರವಷ್ಟೆ. ಹಾಗೆಯೆ ಸಂಪ್ರದಾಯಿ ಸಾಹಿತಿಗಳಿಗೆ ಬಂಡಾಯ ಒಂದು ಚಮತ್ಕಾರವಾದರೆ ಗಂಭೀರ ಸಾಹಿತಿಗಳಿಗೆ ಸಿನಿಮಾ ಸಾಹಿತ್ಯ ಒಂದು ಚಮತ್ಕಾರ ಅಂತೆಯೆ ಈಗ ಬ್ಲಾಗ್ ಸಾಹಿತ್ಯವು ಇಂತಹ ಒಂದು ಚಮತ್ಕಾರವೆ.
ನಾನು ಬೇರಾವ ಬ್ಲಾಗಗಳನ್ನು ಅರಿತಿಲ್ಲ ಸಂಪದವನ್ನು ಹೊರತುಪಡಿಸಿ. ಆದರು ಇಲ್ಲಿನ ವೈಶಿಷ್ಟ್ಯವನ್ನು ಗಮನಿಸಲೇ ಬೇಕು. ಇಲ್ಲಿ ಯಾವ ’ಸಂಪಾದಕರು’ ಇರುವದಿಲ್ಲ. ಓದುಗರೆ ಸಂಪಾದಕರು ವಿಮರ್ಷಕರು. ಬರಹಗಾರರು ಯಾವುದಾದರು ಪತ್ರಿಕೆಗೆ ತಮ್ಮ ಲೇಖನವನ್ನು ಕಳಿಸುವಾಗ ಅವನ ಯೋಚನೆಯಲ್ಲಿ ಪ್ರಥಮವಾಗು ಸಂಪಾದಕರು ಇರುತ್ತಾರೆ. ಬೇಡವೆಂದರು ಅವನು ಅ ’ಸಂಪಾದಕ’ ರ ಇಷ್ಟ ಅನಿಷ್ಟಗಳನ್ನು ಅವಶ್ಯಕಥೆಗಳನ್ನು ಗಮನದಲ್ಲಿಟ್ಟೆ ಲೇಖನವನ್ನು ರಚಿಸಿರುತ್ತಾನೆ. ಇಲ್ಲಿ ಓದುಗರಿಗೆ ಯಾವ ಪ್ರಾಶಸ್ತ್ಯವು ಇಲ್ಲ. ಓದುಗರ ಪರವಾಗಿ ಯಾವ ಲೇಖನ ಪ್ರಕಟಿಸಬೇಕೆಂದು ನಿರ್ದಾರ ಮಾಡುವವರು ’ಸಂಪಾದಕರು’. ಯೋಚಿಸಿದಾಗ ಇದು ಹೇಗೆ ಸಾದ್ಯ. ಅವರು ತಮ್ಮ ಪತ್ರಿಕೆಯ ಅದಾಯ, ಪ್ರಸರಣಗಳನ್ನು ಕುರಿತು ಚಿಂತಿಸುತ್ತಾರೆ ವಿನಹಃ ಓದುಗರಾಗಲಿ ಸಾಹಿತ್ಯವಾಗಲಿ ಪ್ರಥಮ ಪ್ರಾಶಸ್ತ್ಯ ಗಳಿಸುವದಿಲ್ಲ. ಆದರೆ ಬ್ಲಾಗ್ ಬರಹಗಳಲ್ಲಿ ಬರಹಗಾರರಿಗೆ ಸರ್ವಸ್ವತಂತ್ರ್ಯ. ತಮ್ಮ ಮನಸಿಗೆ ಸರಿ ಅನ್ನುಸುವದನ್ನು ದಾಖಲಿಸುತ್ತಾ ಹೋಗುವಾಗ ಖಂಡೀತ ಉತ್ತಮ ಸಾಹಿತ್ಯ ಹೊರಬರುತ್ತದೆ. ಹತ್ತೋಂಬತ್ತು ಇಪ್ಪತ್ತರ ಶತಮಾನದಲ್ಲಿ ಈ ಅನುಕೂಲಗಳಿದ್ದಲ್ಲಿ ಇನ್ನು ಹಲವು ಕುವೆಂಪು ಕಾರಂತರಗಳು ಹುಟ್ಟಿ ಬರುತ್ತಿದ್ದರೆಂದೆ ನನಗೆ ಅನ್ನುಸುತ್ತದೆ.
ಇನ್ನು ಸಾಮಾಜಿಕ ಜವಾಬ್ದಾರಿಯನ್ನು, ಆರೋಗ್ಯಕರ ಸಾಹಿತ್ಯ ವಾತವರಣವನ್ನು ಗಣನೆಗೆ ತೆಗೆದುಕೊಂಡಾಗ ಸಂಪದವನ್ನು ಗಮನಿಸಿ. ಇಲ್ಲಿ ಎಲ್ಲರೂ ಜವಾಬ್ದಾರಿಯುತರಾಗಿಯೆ ವರ್ತಿಸುತ್ತಿದ್ದಾರೆ. ಸಾಹಿತ್ಯವನ್ನು ಗಂಭೀರವಾಗಿಯೆ ತೆಗೆದುಕೊಂಡಿದ್ದಾರೆ. ಇಲ್ಲದಿದ್ದರೆ ಬ್ಲಾಗ್ ನಲ್ಲಿ ಬಾಮಿನಿಷಟ್ಪದಿಯ ಪ್ರಯೋಗ , ಕಾದಂಬರಿ ರೀತಿಯ ’ಕಿಚ್ಚು’ವನ್ನಾಗಲಿ ಅಥವ ’ಶಾಂತಿನಿಕೇತನವೆಂಬ ....ಆತ್ಮಚರಿತ್ರೆ’ ಯಂತಹ ಸುದೀರ್ಘ ಲೇಖನಗಳು ಪ್ರಕಟವಾಗುತ್ತಿರಲಿಲ್ಲ. ಮತ್ತು ಒಂದು ಕುತೂಹಲಕಾರಕ ವಿಷಯವನ್ನು ಗಮನಿಸಿದ್ದೇನೆ ಸಂಪದದ ತುಂಟ ಲೇಖಕರೊಬ್ಬರು ’ಚೀನದ .... ಸ್ಪರ್ದೆ’ ಎಂಬ ಲೇಖನ ಪ್ರಕಟಿಸಿದ್ದಾರೆ. ಗಮನಿಸಿ ಅದು ಜನಪ್ರಿಯಲೇಖನಗಳ ಸಾಲಿನಲ್ಲಿ ಸದಾ ಇದೆ. ಅದು ಮನುಷ್ಯ ಸಹಜ ಕುತೂಹಲವನ್ನು ಸೂಚಿಸುತ್ತದೆ ಅಂದು ಕೊಂಡರೆ. ಸಂಪದಿಗರ ಅದಮ್ಯ ಗಂಭೀರ ಹಾಗು ಮಡಿವಂತಿಕೆಯನ್ನು ಗಮನಿಸಿ ! ಅದಕ್ಕೆ ಪ್ರತಿಕ್ರಿಯೆಯೆ ಇಲ್ಲ. ! . ಎಂದರೆ ಬ್ಲಾಗಿಗರು ಎಷ್ಟೊಂದು ಮಡಿವಂತಿಕೆ ಹಾಗು ಜವಾಬ್ದಾರಿ ಪ್ರದರ್ಶಿಸುತ್ತಿದ್ದಾರೆ. ಮತ್ತೆ ಚರ್ಚೆಗಳನ್ನು ಪ್ರತಿಕ್ರಿಯೆಗಳನ್ನು ಗಮನಿಸಿದಾಗ ತೀರ ವ್ಯಕ್ತಿತ್ವ ನಿಂದನೆಗೆ ಹೋಗದೆ ಸಾಹಿತ್ಯ ಅಥವ ವಿಷಯ ನಿಷ್ಠರಾಗಿ ವರ್ತಿಸುತ್ತಾರೆ.
ಇಷ್ಟೆಲ್ಲ ಇರುವಾಗ ಬ್ಲಾಗ ಸಾಹಿತ್ಯವನ್ನು ಕೇವಲ ಚಮತ್ಕಾರಿಕ ಎಂದು ಕರೆದು ಪಕ್ಕಕ್ಕೆ ಸರಿಸಿ ನಿರ್ಲಕ್ಷ ಮಾಡುವುದು ಸಾದ್ಯವೆ?
Comments
ಉ: ಬ್ಲಾಗ್ ಬರಹ ಚಮತ್ಕಾರಿಕವೆ ? ಅಲ್ಲವೆ ?
In reply to ಉ: ಬ್ಲಾಗ್ ಬರಹ ಚಮತ್ಕಾರಿಕವೆ ? ಅಲ್ಲವೆ ? by gopaljsr
ಉ: ಬ್ಲಾಗ್ ಬರಹ ಚಮತ್ಕಾರಿಕವೆ ? ಅಲ್ಲವೆ ?
In reply to ಉ: ಬ್ಲಾಗ್ ಬರಹ ಚಮತ್ಕಾರಿಕವೆ ? ಅಲ್ಲವೆ ? by partha1059
ಉ: ಬ್ಲಾಗ್ ಬರಹ ಚಮತ್ಕಾರಿಕವೆ ? ಅಲ್ಲವೆ ?
In reply to ಉ: ಬ್ಲಾಗ್ ಬರಹ ಚಮತ್ಕಾರಿಕವೆ ? ಅಲ್ಲವೆ ? by gopaljsr
ಉ: ಬ್ಲಾಗ್ ಬರಹ ಚಮತ್ಕಾರಿಕವೆ ? ಅಲ್ಲವೆ ?
ಉ: ಬ್ಲಾಗ್ ಬರಹ ಚಮತ್ಕಾರಿಕವೆ ? ಅಲ್ಲವೆ ?
In reply to ಉ: ಬ್ಲಾಗ್ ಬರಹ ಚಮತ್ಕಾರಿಕವೆ ? ಅಲ್ಲವೆ ? by kamath_kumble
ಉ: ಬ್ಲಾಗ್ ಬರಹ ಚಮತ್ಕಾರಿಕವೆ ? ಅಲ್ಲವೆ ?
ಉ: ಬ್ಲಾಗ್ ಬರಹ ಚಮತ್ಕಾರಿಕವೆ ? ಅಲ್ಲವೆ ?
In reply to ಉ: ಬ್ಲಾಗ್ ಬರಹ ಚಮತ್ಕಾರಿಕವೆ ? ಅಲ್ಲವೆ ? by asuhegde
ಉ: ಬ್ಲಾಗ್ ಬರಹ ಚಮತ್ಕಾರಿಕವೆ ? ಅಲ್ಲವೆ ?
ಉ: ಬ್ಲಾಗ್ ಬರಹ ಚಮತ್ಕಾರಿಕವೆ ? ಅಲ್ಲವೆ ?
In reply to ಉ: ಬ್ಲಾಗ್ ಬರಹ ಚಮತ್ಕಾರಿಕವೆ ? ಅಲ್ಲವೆ ? by savithru
ಉ: ಬ್ಲಾಗ್ ಬರಹ ಚಮತ್ಕಾರಿಕವೆ ? ಅಲ್ಲವೆ ?
ಉ: ಬ್ಲಾಗ್ ಬರಹ ಚಮತ್ಕಾರಿಕವೆ ? ಅಲ್ಲವೆ ?
In reply to ಉ: ಬ್ಲಾಗ್ ಬರಹ ಚಮತ್ಕಾರಿಕವೆ ? ಅಲ್ಲವೆ ? by raghumuliya
ಉ: ಬ್ಲಾಗ್ ಬರಹ ಚಮತ್ಕಾರಿಕವೆ ? ಅಲ್ಲವೆ ?
In reply to ಉ: ಬ್ಲಾಗ್ ಬರಹ ಚಮತ್ಕಾರಿಕವೆ ? ಅಲ್ಲವೆ ? by partha1059
ಉ: ಬ್ಲಾಗ್ ಬರಹ ಚಮತ್ಕಾರಿಕವೆ ? ಅಲ್ಲವೆ ?
In reply to ಉ: ಬ್ಲಾಗ್ ಬರಹ ಚಮತ್ಕಾರಿಕವೆ ? ಅಲ್ಲವೆ ? by partha1059
ಉ: ಬ್ಲಾಗ್ ಬರಹ ಚಮತ್ಕಾರಿಕವೆ ? ಅಲ್ಲವೆ ?
ಉ: ಬ್ಲಾಗ್ ಬರಹ ಚಮತ್ಕಾರಿಕವೆ ? ಅಲ್ಲವೆ ?
In reply to ಉ: ಬ್ಲಾಗ್ ಬರಹ ಚಮತ್ಕಾರಿಕವೆ ? ಅಲ್ಲವೆ ? by manju787
ಉ: ಬ್ಲಾಗ್ ಬರಹ ಚಮತ್ಕಾರಿಕವೆ ? ಅಲ್ಲವೆ ?
In reply to ಉ: ಬ್ಲಾಗ್ ಬರಹ ಚಮತ್ಕಾರಿಕವೆ ? ಅಲ್ಲವೆ ? by partha1059
ಉ: ಬ್ಲಾಗ್ ಬರಹ ಚಮತ್ಕಾರಿಕವೆ ? ಅಲ್ಲವೆ ?
ಉ: ಬ್ಲಾಗ್ ಬರಹ ಚಮತ್ಕಾರಿಕವೆ ? ಅಲ್ಲವೆ ?