ಮೂಢ ಉವಾಚ - 164
ನಾನಿಲ್ಲ ಅವನಿಲ್ಲ ಜಗವಿಲ್ಲ ನಿದ್ದೆಯಲಿ
ರಾಗ ದ್ವೇಷಗಳಿಲ್ಲ ನೋವು ನಲಿವುಗಳಿಲ್ಲ |
ತಮೋತ್ತುಂಗದಲಿ ಪ್ರಶ್ನೋತ್ತರದ ಸೊಲ್ಲಿಲ್ಲ
ಮಾಯಾ ಶಕ್ತಿಗೆದುರುಂಟೆ ಮೂಢ || ..327
ನಿದ್ದೆಯಿಂದೆದ್ದೊಡನೆ ನಾನು ಜನಿಸುವುದು
ಒಂದಿದ್ದು ಎರಡಾಗಿ ಮೂರಾಗಿ ಕಾಣುವುದು |
ದೇಹವೇ ನಾನೆನಿಸಿ ಭೇದ ಮೆರೆಯುವುದು
ಮಾಯಾ ಮೋಹಿನಿಗೆ ಶರಣು ಮೂಢ || ..328
****************
-ಕ.ವೆಂ.ನಾಗರಾಜ್.
Rating
Comments
ಆತ್ಮೀಯ ನಾಗರಾಜರೆ,
ಆತ್ಮೀಯ ನಾಗರಾಜರೆ,
ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ ? ನೀ ದೇಹದೊಳಗೊ ನಿನ್ನೊಳು ದೇಹವೊ ? ಎಂದು ಕನಕದಾಸರು ಕೇಳಿದರೆ, ನೀನು ಯಾರು? ಎಂಬುದನ್ನು ಹುಡುಕು ಎನ್ನುತ್ತಾರೆ ಮಹರ್ಷಿ ರಮಣರು. ನಿದ್ದೆಗೆ ಜಾರಿದೊಡನೆ ನಾನು ನನದೆಂಬ ಮಮಕಾರಗಳಿಲ್ಲ, ಎದ್ದ ಘಳಿಗೆ ನಾನು ಎಂಬುದರ ಉದಯ!!!
ಉತ್ತಮ ಉವಾಚ.
In reply to ಆತ್ಮೀಯ ನಾಗರಾಜರೆ, by Prakash Narasimhaiya
ಆತ್ಮೀಯ ಪ್ರಕಾಶರೇ, ಎಲ್ಲಾ 'ಅವನ
ಆತ್ಮೀಯ ಪ್ರಕಾಶರೇ, ಎಲ್ಲಾ 'ಅವನ'ದೇ! ಧನ್ಯವಾದಗಳು.
ತುಂಬಾ ಚೆನ್ನಾಗಿದೆ...
ತುಂಬಾ ಚೆನ್ನಾಗಿದೆ...
In reply to ತುಂಬಾ ಚೆನ್ನಾಗಿದೆ... by gopaljsr
ವಂದನೆ, ಗೋಪಾಲರೇ.
ವಂದನೆ, ಗೋಪಾಲರೇ.
ನಿಜವಾದ ಜ್ಞಾನ ಬರುವುದು ಗಾಡವಾದ
ನಿಜವಾದ ಜ್ಞಾನ ಬರುವುದು ಗಾಡವಾದ ನಿದ್ದೆಯಲ್ಲೆ ಯಾಕೆಂದರೆ ಆಗ ಯಾವುದೇ ಮನೋವಿಕಾರಗಳು ಇರುವುದಿಲ್ಲ ಮನಸ್ಸು ಆತ್ಮನಲ್ಲಿ ಲಯವಾಗಿರುತ್ತದೆ ಎಚ್ಚರಗೊಂಡ ತಕ್ಷಣ ಮಾಯೆಗೊಳಗಾಗುತ್ತದೆ ಒಳ್ಳೆಯ ಉವಾಚ ನಾಗರಾಜ್ ರವರೇ.
....ಸತೀಶ್
In reply to ನಿಜವಾದ ಜ್ಞಾನ ಬರುವುದು ಗಾಡವಾದ by sathishnasa
ನಿದ್ದೆಯಲ್ಲಿ ಮನಸ್ಸಿಗೆ ಆವರಣ
ನಿದ್ದೆಯಲ್ಲಿ ಮನಸ್ಸಿಗೆ ಆವರಣ ಮೂಡುವುದೂ ಮಾಯೆಯಿಂದಲೇ! ಧನ್ಯವಾದ, ಸತೀಶರೇ.
In reply to ನಿದ್ದೆಯಲ್ಲಿ ಮನಸ್ಸಿಗೆ ಆವರಣ by kavinagaraj
ಚೆನ್ನಾಗಿದೆ.
ಚೆನ್ನಾಗಿದೆ.
In reply to ಚೆನ್ನಾಗಿದೆ. by Premashri
ವಂದನೆ, ಪ್ರೇಮಾಶ್ರೀಯವರೇ.
ವಂದನೆ, ಪ್ರೇಮಾಶ್ರೀಯವರೇ.