ಮೂಢ ಉವಾಚ -49

ಮೂಢ ಉವಾಚ -49

          ಮೂಢ ಉವಾಚ -49


ದೇವರನು ಅರಸದಿರಿ ಗುಡಿ ಗೋಪುರಗಳಲ್ಲಿ|
ದೇವನಿರುವನು ನಮ್ಮ ಹೃದಯ ಮಂದಿರದಲ್ಲಿ||
ಹೃದಯವದು ಶುದ್ಧವಿರೆ ನಡೆಯು ನೇರವಿರೆ|
ಪರಮಾತ್ಮನೊಲಿಯದಿಹನೆ ಮೂಢ||


 


ಕೋಲುಗಳು ಕಲ್ಲುಗಳು ದೇಹವನು ಘಾತಿಪವು|
ಸಿಟ್ಟಿನಾ ಮಾತುಗಳು ಮನಸನು ನೋಯಿಪವು||
ಮಡುಗಟ್ಟಿದಾ ಮೌನ ಹೃದಯವನು ತಿಂದಿರಲು|
ಕೆಡುಕೆಣಿಸಿದವರಿಗೊಳಿತನೆ ಬಯಸು  ಮೂಢ||


*****************


-ಕವಿನಾಗರಾಜ್.

Rating
No votes yet