ಮೌನ--ಸಂಕ್ರಾಂತಿ
ನೆನಪಿನಾ ಪಿಠಾರಿ
ಯೊಳ ಹೊಕ್ಕು
ಜಾಲಾಡಿ ಸ್ಮೃತಿಗಳ
ಹೆಕ್ಕಿ ತೆಗೆದು
ಸಂಭಾಷಿಸುವಾ
ಮೌನ ಪರಿಭಾಷೆಗೇತಕೆ
ಮಾತಿನಾಡಂಬರ-
ದೊಡವೆಯಾ ಗೊಡವೆ....
ಬಿರಿದು ನಿಂತ
ಹೂವಿನ ಮೌನ-
ಘಮದ ಕಂಪು
ಹರಡದಿರುವುದೇ........
ಮಾತು ಉರಿವ
ಸೂರ್ಯನಂತೆ
ಪ್ರಖರ ; ಮೌನ
ಕಾಡು ಬೆಳದಿಂಗಳಂತೆ
ಸುಮಧುರ ; ........
ಮಾತಿನಬ್ಬರಕೆ
ನಲುಗಿದಾ
ಮನ. ತಬ್ಬಿದೇ
ಮೌನ-ಸಾಂತ್ವನ......
ದೇಹವ ತೊರೆದಾ
ಆತ್ಮದ ತೆರದಿ
ಮೌನದ ಜಾಡು
ಬಂಧಿಸಲಾಗದು
ಮಾತಿನ ಗಾಳದಲೀ.......
ಕಮಲ ಬೆಲಗೂರ್.
Rating
Comments
ಉ: ಮೌನ--ಸಂಕ್ರಾಂತಿ
ಬಿರಿದು ನಿಂತ ಹೂವಿನ ಮೌನ- ಘಮದ ಕಂಪು ಹರಡದಿರುವುದೇ
.......
(ಮೌನದಲ್ಲೇ ಹೊಗಳಿದ್ದು..:)
In reply to ಉ: ಮೌನ--ಸಂಕ್ರಾಂತಿ by ಗಣೇಶ
ಉ: ಮೌನ--ಸಂಕ್ರಾಂತಿ
ಧನ್ಯವಾದಗಳು ಗಣೇಶರವರೇ.