ರವಿ ಬೆಳಗೆರೆಯ ಬಗೆಗಿನ ನನ್ನ ಅನುಮಾನ ನಿಜವಾಯ್ತೆ?

ರವಿ ಬೆಳಗೆರೆಯ ಬಗೆಗಿನ ನನ್ನ ಅನುಮಾನ ನಿಜವಾಯ್ತೆ?

ವಿಜಯ ಕರ್ನಾಟಕದಲ್ಲಿ ಕಳೆದ ಶನಿವಾರ ಪ್ರಕಟವಾದ ಲೇಖನ:


ಕಾಮವೆಂಬುದು ಸತ್ಯವೆಂದ ಮೇಲೆ ವೇಶ್ಯಾವಾಟಿಕೆಯೇಕೆ ಅಪಥ್ಯ?


 


"....ಇವತ್ತು ಸೆಕ್ಸ್ ಕೂಡ ಒಂದು ಸರ್ವೀಸ್ ಇಂಡಸ್ಟ್ರಿ. ಅದನ್ನು ‘ಫಿಸಿಕಲ್ ಪ್ರಾಸ್ಟಿಟ್ಯೂಶನ್’ ಅನ್ನುವುದನ್ನು ಬಿಟ್ಟರೆ ಬೇರಾವ ವ್ಯತ್ಯಾಸಗಳೂ ಇಲ್ಲ. ನಮ್ಮ ವಿವಿಗಳಲ್ಲಿ ಐಡಿಯಲಾಜಿಕಲ್, ಇಂಟೆಲೆಕ್ಚುವಲ್ ಪ್ರಾಸ್ಟಿಟ್ಯೂಶನ್ ಮಾಡುವವರು ಅದೆಷ್ಟು ಜನರಿಲ್ಲ ಹೇಳಿ?! ಕೃಷ್ಣ ದೇವರಾಯನಿಗೆ 500 ಪತ್ನಿಯರಿದ್ದರು ಎಂದು ನಮ್ಮ ಇತಿಹಾಸದ ಪುಟಗಳು ಹೇಳುತ್ತವೆ. ೫೦೦ ಪತ್ನಿಯರು ಎಂದರೆ ಪರಮವೀರ ಚಕ್ರ, ಅಶೋಕ ಚಕ್ರ, ವೀರ ಚಕ್ರದಂತೆ ಶೌರ್ಯ ಪ್ರಶಸ್ತಿಗಳೇನು? ಈಗಂತೂ ಕಚೇರಿಯಲ್ಲಿರುವ ಕೆಳಸ್ತರದ ಉದ್ಯೋಗಿಗಳನ್ನು ಪುಸಲಾಯಿಸುವುದು, ಪೀಡಿಸುವುದು, ಬಾಲಿವುಡ್ ನಟ ಶೈನಿ ಅಹುಜಾನಂತೆ ಮನೆಗೆಲಸದವಳನ್ನು ಮಂಚಕ್ಕೆ ಎಳೆದುಕೊಳ್ಳುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಇನ್ನು ಅಮರ ಪ್ರೇಮದ ಕಥೆ ಹೇಳುತ್ತಾ ಹೆಂಡತಿ ಇರುವಾಗಲೇ ಮತ್ತೊಬ್ಬಳನ್ನು ಕದ್ದುಮುಚ್ಚಿ ಕಟ್ಟಿಕೊಂಡು ಪುತ್ರಕಾಮೇಷ್ಠಿ ಯಾಗ ಮಾಡಿ, ‘ರಾಧಿಕಾ ಮತ್ತೆ ಮರಿ ಹಾಕಿದಳಾ?’ ಎಂದು ಅನ್ಯರಿಗೆ ನೈತಿಕ ಪಾಠ ಹೇಳುವ ಪತ್ರಕರ್ತರೂ ಕಡಿಮೆಯೇನಿಲ್ಲ! ಆದರೆ ಹೆಣ್ಣನ್ನು ವೇಶ್ಯೆ ಮಾಡಿರುವವನೇ ಗಂಡಸು ಎಂಬುದನ್ನು ಮರೆಯದಿರಿ. ಆಕೆಯ ಬಗ್ಗೆ ಲಘುವಾಗಿ ಮಾತನಾಡುವ, ವೇಶ್ಯೆ ಎಂದು ಜರಿಯುವ ಬದಲು ಗೌರವಿಸುವುದನ್ನೂ ಕಲಿಯಿರಿ."


 


ಓದಿದ ಕೂಡಲೇ ನನಗೆ ಆ ಪರ್ತಕರ್ತ ರವಿ ಬೆಳಗೆರೆಯೇ ಇರಬೇಕು ಅನ್ನುವ ಅನುಮಾನ ಬಂದಿತ್ತು. ಯಾಕೆಂದರೆ, ವಿ. ಭಟ್ಟರ ರಂಗಸ್ಥಳದಲ್ಲಿ ಪ್ರತಾಪ ಸಿಂಹ ಮತ್ತು ರವಿ ಬೆಳಗೆರೆಯವರ ಹಾವು ಮುಂಗುಸಿಯಾಟ ಇಂದು ನಿನ್ನೆಯದಲ್ಲ.


 


ಆದರೆ, ಪ್ರತಾಪ ಸಿಂಹರ ಲೇಖನಕ್ಕೆ ಇಲ್ಲಿ  ಪ್ರಕಟವಾಗಿರುವ ಪ್ರತಿಕ್ರಿಯೆಗಳು  ಬರೆದುದನ್ನು ಓದಿದ ಮೇಲೆ ಅದು ಅನುಮಾನವಾಗಿ ಉಳಿದಿಲ್ಲ.


 


ಪ್ರತಾಪ ಸಿಂಹರ ಈ ಲೇಖನಕ್ಕೆ ಬಂದಿರುವ ಪ್ರತಿಕ್ರಿಯೆಗಳನ್ನು ಒಮ್ಮೆ ಓದಿ ನೋಡಿ.


http://pratapsimha.com/2009/12/19/prostitution/


 


 

Rating
No votes yet

Comments